ಜಗ್ಗದ..ಬಗ್ಗದ.. 'ಜಾಕಿ' ; ಎರಡನೇ ವಾರಕ್ಕೆ ಕಾಲಿಟ್ಟ 'ಪವರ್'ಫುಲ್ ಸಿನಿಮಾ..!

ಜಾಕಿ ಜಗತ್ತು ಕಂಡು ಅವತ್ತು ಅಪ್ಪು ಅಭಿಮಾನಿ ಬಣ ರಣಕೇಕೆ ಹಾಕಿತ್ತು. ಇವತ್ತು ರಣಕೇಕೆಯನ್ನ ಹಾಕಿದೆ. ಹೌದು, ನಿಮಗೆ ಗೊತ್ತಿರಲಿ, ಕನ್ನಡದಲ್ಲಿ ವಾರಕ್ಕೆ ಕಡಿಮೆ ಅಂದರೂ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆ ನಾಲ್ಕೈದು ಸಿನಿಮಾಗಳಲ್ಲಿ ಒಂದು ವಾರದ ನಂತರ ಯಾವುದಾದರೂ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಕಂಡರೆ ಅದೇ ಹೆಚ್ಚು ಅನ್ನುವ ವಾತಾವರಣ ಇದೆ. ಹೀಗಿರುವಾಗ 14 ವರ್ಷದ ನಂತರ ಮರು ಬಿಡುಗಡೆಯಾದ ಜಾಕಿ ಮೊದಲನೇ ವಾರ ಯಶಸ್ವೀ ಪ್ರದರ್ಶನ ಕಂಡಿದೆ. ಹತ್ತಾರು ದಾಖಲೆಗಳನ್ನ ಬರೆದಿದೆ. ಇದು ಸಾಲದು ಎಂಬಂತೆ ಎರಡನೇ ವಾರಕ್ಕೆ ಜಾಕಿ ಕಾಲಿಟ್ಟಿದೆ.

ಹೌದು, 175 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಜಾಕಿ, ಎರಡನೇ ವಾರದಲ್ಲಿ ಕೇವಲ ಬೆಂಗಳೂರು ಒಂದರಲ್ಲಿಯೇ 25ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನೂ ಅಖಂಡ ಕರ್ನಾಟಕದ ಲೆಕ್ಕವನ್ನ ತೆಗೆದುಕೊಂಡರೆ ಸಂಖ್ಯೆ ಅರವತ್ತರ ಮೇಲೆ ದಾಟುತ್ತೆ. ವಿಶೇಷ ಅಂದರೆ ಎರಡನೇ ವಾರದಲ್ಲಿಯೂ ಜಾಕಿ ಚಿತ್ರದ ಟಿಕೇಟ್ ಗಳು ಬೆಂಗಳೂರಿನ ಕೆಲ ಕಡೆ ಬಿಸಿ ಬಿಸಿ ಶೇಂಗಾ ಹೋಳಿಗೆಯಂತೆ ಬಿಕರಿಯಾಗುತ್ತಿವೆ.

Despite of new releases Jackie Entered into 2nd week

ಇನ್ನೂ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿ ಪ್ರಮುಖ ಚಿತ್ರಮಂದಿರ ಸಿಗುವುದು ಕಷ್ಟವೆನ್ನುವ ಕಾಲದಲ್ಲಿ, ಜಾಕಿ ಸಿನಿಮಾ ಎರಡನೇ ವಾರದಲ್ಲಿಯೂ ನರ್ತಕಿ ಚಿತ್ರಮಂದಿರದಲ್ಲಿ ದಿನದ ನಾಲ್ಕು ಆಟಗಳ ಪ್ರದರ್ಶನವನ್ನೂ ಕಾಣುತ್ತಿದೆ. ಪ್ರಸನ್ನ, ನವರಂಗ, ಸಿದ್ದೇಶ್ವರ, ಕಾಮಾಕ್ಯದಲ್ಲಿಯೂ ಜಾಕಿ ಜಾತ್ರೆ ನಿರಾಂತಕವಾಗಿ ಮುಂದುವರೆದಿದೆ.

ಮೊದಲ ವಾರ ಜಾಕಿ ಗಳಿಸಿದ್ದೆಷ್ಟು..?

ಮರು ಬಿಡುಗಡೆ ಭಾಗ್ಯ ಕಂಡ ಜಾಕಿ ಮೊದಲ ವಾರದಲ್ಲಿ ಗಳಿಸಿದ್ದೆಷ್ಟು ಅನ್ನುವ ಪ್ರಶ್ನೆ ಬಹುತೇಕರಲ್ಲಿದೆ. ಇದಕ್ಕೆ ನಿಖರವಾದ ಉತ್ತರ ಇಲ್ಲದೇ ಇದ್ದರೂ ಜಾಕಿ ಚಿತ್ರದ ಮೊದಲ ವಾರದ ಕಲೆಕ್ಷನ್ ಮೂರು ಕೋಟಿಯ ಗಡಿಯನ್ನಂತೂ ದಾಟಿದೆ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಮಂಡ್ಯ, ಹಾಸನ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿಯಲ್ಲಿ ಜಾಕಿ ಜಾತ್ರೆಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ ಎಂಬ ಲೆಕ್ಕವನ್ನ ಗಾಂಧಿನಗರದ ಪಂಡಿತರು ನೀಡುತ್ತಾರೆ

Despite of new releases Jackie Entered into 2nd week

ಈ ವಾರ ಬಿಡುಗಡೆಯಾಗಿರುವ ಚಿತ್ರಗಳು..!

ಕನ್ನಡದಲ್ಲಿ ಈ ವಾರ ಲೈನ್ ಮ್ಯಾನ್, ದಿಲ್ ಖುಷ್, ಮನಸು, ರಾಕ್ಷಸ ತಂತ್ರ ಹಾಗೂ ತೊತ್ ಕಾಸು ಸಿನಿಮಾ ಬಿಡುಗಡೆಯಾಗಿವೆ. ಇನ್ನೂ ಹಿಂದಿಯಲ್ಲಿ ಸ್ವಾತಂತ್ರ್ಯ ವೀರ್ ಸಾವರ್ಕರ್ ಹಾಗೂ ಮಡಗಾಂವ್ ಎಕ್ಸ್ ಪ್ರೆಸ್ ಸಿನಿಮಾಗಳು ಬಿಡುಗಡೆಯಾಗಿವೆ. ತೆಲುಗಿನಲ್ಲಿ ಓಂ ಭೀಮ್ ಬುಶ್ ಸಿನಿಮಾ ಬಿಡುಗಡೆಯಾಗಿದೆ. ತಮಿಳಿನಲ್ಲಿ ರೆಬಲ್ ಸಿನಿಮಾ ತೆರೆಗೆ ಬಂದಿದೆ. ಆದರೂ ಜಾಕಿ ಜಗ್ಗಿಲ್ಲ, ಬಗ್ಗಿಲ್ಲ. ಈ ಎಲ್ಲ ಚಿತ್ರಗಳಿಗೆ ಸೆಡ್ಡು ಹೊಡೆದು ಜಾಕಿ ಚಿತ್ರಮಂದಿರದಲ್ಲಿ ಬಿಡಾರ ಹೂಡಿದೆ.

ಒಟ್ಟಿನಲ್ಲಿ ಜಾಕಿ ಜಾತ್ರೆ ಕೇವಲ ಒಂದು ವಾರವಷ್ಟೇ ಎಂದು ಅಂದುಕೊಂಡವರ ಲೆಕ್ಕಾಚಾರವನ್ನೆಲ್ಲ, ಜಾಕಿ ಬುಡಮೇಲಾಗಿಸಿದೆ. ದಾಖಲೆ ಮೇಲೆ ದಾಖಲೆಯನ್ನ ಬರೆಯುತ್ತಾ ಗಲ್ಲಾಪೆಟ್ಟಿಗೆಯಲ್ಲಿ 'ಪವರ್' ಫುಲ್ ಸಿನಿಮಾ ಜಾಕಿ ಮುನ್ನುಗ್ಗುತ್ತಿದೆ.

More from Filmibeat

English summary
Puneeth Rajkumar's Jackie Which Was Re Released Last Friday Has Now Entered Into Second Week Of Theatrical Run
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X