ತೆಲುಗು ಹಾಸ್ಯನಟನ ಸಾವಿನ ಪ್ರಕರಣದಲ್ಲಿ ಪತ್ನಿ ಮತ್ತು ಆಕೆಯ ಕೈವಾಡ?

By Bharath Kumar

ತೆಲುಗು ಖ್ಯಾತ ಹಾಸ್ಯ ನಟ ವಿಜಯ್ ಸಾಯಿ ಕಳೆದ ವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ವರದಿಯಾಗಿತ್ತು. ಆದ್ರೀಗ, ಈ ಸಾವಿನ ಹಿಂದೆ ಪತ್ನಿ ಮತ್ತು ಮತ್ತೊಬ್ಬ ಹುಡುಗಿಯ ಹೆಸರು ಕೇಳಿ ಬರುತ್ತಿದೆ.

ವಿಜಯ್ ಸಾಯಿ ಅವರು ಸಾವನ್ನಪ್ಪಿದ ಕ್ಷಣದಿಂದ ಪತ್ನಿ ವನಿತಾ ಅವರು ತಲೆಮರೆಸಿಕೊಂಡಿದ್ದಾರಂತೆ. ವಿಜಯ್ ಪತ್ನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಇನ್ನು ಸಿಕ್ಕಿಲ್ಲ. ಇತ್ತೀಚೆಗಷ್ಟೇ ಫೇಸ್ ಬುಕ್ ಲೈವ್ ಗೆ ಬಂದಿದ್ದ ವನಿತಾ, ಪತಿ ವಿಜಯ್ ಸಾಯಿ ಅವರ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿಲ್ಲದೇ, ಕೆಲವು ಖಾಸಗಿ ಫೋಟೋಗಳನ್ನ ಬಹಿರಂಗಪಡಿಸಿದ್ದಾರೆ.

ಹೀಗಾಗಿ, ಸಾಲಬಾದೆಯಿಂದ ಸಾವನ್ನಪ್ಪಿರಬಹುದು ಎಂದು ಅಂದುಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಹಾಗಿದ್ರೆ, ವಿಜಯ್ ಸಾಯಿ ಸಾವಿಗೆ ಕಾರಣವೇನು? ಪತ್ನಿ ಮತ್ತು ಮತ್ತೊಬ್ಬ ಹುಡುಗಿಯ ಪಾತ್ರವೇನು ಎಂದು ತಿಳಿಯಲು ಮುಂದೆ ಓದಿ.....

ವಿಜಯ್ ಸಾಯಿ ಗೆ ಅನೈತಿಕ ಸಂಬಂಧವಿತ್ತು.!

ವಿಜಯ್ ಸಾಯಿ ಗೆ ಅನೈತಿಕ ಸಂಬಂಧವಿತ್ತು.!

ಹಾಸ್ಯ ನಟ ವಿಜಯ್ ಸಾಯಿಗೆ ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧವಿತ್ತು ಎಂದು ಪತ್ನಿ ವನಿತಾ ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ವಿಜಯ್ ಸಾಯಿ ಮತ್ತು ಆ ಹುಡುಗಿ ಒಟ್ಟಿಗೆ ಇರುವ ಖಾಸಗಿ ಫೋಟೋಗಳನ್ನ ಪತ್ನಿ ವನಿತಾ ಬಹಿರಂಗಪಡಿಸಿದ್ದಾರೆ.

ಪತ್ನಿ ಮೇಲೆ ಆರೋಪ ಮಾಡಿದ್ದ ವಿಜಯ್

ಪತ್ನಿ ಮೇಲೆ ಆರೋಪ ಮಾಡಿದ್ದ ವಿಜಯ್

ನನ್ನ ಸಾವಿಗೆ ಪತ್ನಿ ವನಿತಾ ಕಾರಣವೆಂದು ವಿಜಯ್ ಸಾಯಿ ಸಾಯುವುದಕ್ಕು ಮುಂಚೆ ಸೆಲ್ಫಿ ವಿಡಿಯೋ ಮಾಡಿದ್ದರಂತೆ. ವನಿತಾ ಅವರು ವಿಜಯ್ ಸಾಯಿ ಅವರಿಗೆ ವಿಚ್ಛೇದನ ನೀಡಿ ಎಂದು ಪೀಡಿಸುತ್ತಿದ್ದರು. ವನಿತಾಗೆ ವಕೀಲರೊಬ್ಬರ ಜೊತೆ ಸಂಬಂಧವಿತ್ತು ಎಂದು ವಿಜಯ್ ಮೊಬೈಲ್ ನಲ್ಲಿದ್ದ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಇದು ಪೊಲೀಸರಿಗೆ ಸಿಕ್ಕಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.

ವನಿತಾ ತಲೆಮರೆಸಿಕೊಂಡಿದ್ದಾರೆ

ವನಿತಾ ತಲೆಮರೆಸಿಕೊಂಡಿದ್ದಾರೆ

ವಿಜಯ್ ಸಾಯಿ ಅವರ ಖಾಸಗಿ ಫೋಟೋ ಬಹಿರಂಗಪಡಿಸಿರುವ ವನಿತಾ ಪೊಲೀಸರಿಗೆ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಂಗ್ರಹಿಸುತ್ತಿದ್ದು, ಆದಷ್ಟೂ ಬೇಗ ನಾನೇ ಪೊಲೀಸರು ಮುಂದೆ ಬರುತ್ತೇನೆ ಎಂದು ಲೈವ್ ವಿಡಿಯೋದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಪರಸ್ಪರ ದೂರವಿದ್ದ ದಂಪತಿ

ಪರಸ್ಪರ ದೂರವಿದ್ದ ದಂಪತಿ

ಅಂದ್ಹಾಗೆ, ವಿಜಯ್ ಸಾಯಿ ಮತ್ತು ವನಿತಾ ದಂಪತಿ ಕೆಲವು ತಿಂಗಳಿಗಳಿಂದ ಪರಸ್ಪರ ದೂರವಿದ್ದರು. ಇವರಿಬ್ಬರ ಜಗಳಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ಪ್ರಕರಣ ಕೂಡ ದಾಖಲಾಗಿತ್ತಂತೆ. ತೀರಾ ಕುತೂಹಲ, ಅನುಮಾನ ಮೂಡಿಸಿರುವ ಈ ಪ್ರಕರಣದಲ್ಲಿ ಯಾರದು ತಪ್ಪು, ಯಾರದು ಸರಿ ಎಂದು ಪೊಲೀಸರ ವಿಚಾರಣೆಯಿಂದ ಗೊತ್ತಾಗಬೇಕಿದೆ.

More from Filmibeat

English summary
Telugu comedian Vijay Sai’s wife willing to surrender, plans to release evidence. Vijay Sai’s wife Vanitha has gone missing following the police announcement that she would be booked for abetting her husband's suicide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X