ಕೀರ್ತಿ ಗೌಡ-ದುನಿಯಾ ವಿಜಿ ನಡುವೆ ಅನೈತಿಕ ಸಂಬಂಧವಿದೆ: ದೂರಿನಲ್ಲಿ ನಾಗರತ್ನ ಉಲ್ಲೇಖ.!
Recommended Video

ಇಷ್ಟು ದಿನ ಸೈಲೆಂಟ್ ಆಗಿದ್ದ ದುನಿಯಾ ವಿಜಯ್ ಮೊದಲನೇ ಪತ್ನಿ ನಾಗರತ್ನ ಇದೀಗ ಗುಡುಗಿದ್ದಾರೆ. ದುನಿಯಾ ವಿಜಯ್-ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಕೋರ್ಟ್ ವರೆಗೂ ಹೋಗಿ, ಕಡೆಗೆ ರಾಜಿ ಆದ್ಮೇಲೆ ಮಾಧ್ಯಮಗಳ ಮುಂದೆ ನಾಗರತ್ನ ಕಾಣಿಸಿಕೊಂಡಿದ್ದೇ ಇಲ್ಲ.
ಈ ನಡುವೆ ದುನಿಯಾ ವಿಜಯ್ ಎರಡನೇ ಮದುವೆ ಸುದ್ದಿ ಕೇಳಿಬಂತು. ಎಲ್ಲರ ಒಪ್ಪಿಗೆ ಪಡೆದೇ ಕೀರ್ತಿ ಗೌಡರನ್ನ ಮದುವೆ ಆಗಿರುವುದಾಗಿ ದುನಿಯಾ ವಿಜಯ್ ತಿಳಿಸಿದ್ದರು. ಆಲ್ ಈಸ್ ವೆಲ್ ಅಂತಿರುವಾಗಲೇ, ದುನಿಯಾ ವಿಜಯ್ ಕಿರಿಕ್ ಮಾಡಿಕೊಂಡಿದ್ದಾರೆ. ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಅತ್ತ ದುನಿಯಾ ವಿಜಯ್ ವಿರುದ್ಧ ಪಾನಿಪೂರಿ ಕಿಟ್ಟಿ ಕಿಡ್ನ್ಯಾಪ್ ಹಾಗೂ ಹಲ್ಲೆ ಕಂಪ್ಲೇಂಟ್ ಕೊಟ್ಟಿದ್ದರೆ, ಇತ್ತ ಕೀರ್ತಿ ಗೌಡ ವಿರುದ್ಧ ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
''ನನ್ನ ಗಂಡನ ಜೊತೆಗೆ ಕೀರ್ತಿ ಗೌಡ ಅನೈತಿಕ ಸಂಬಂಧ ಹೊಂದಿದ್ದಾರೆ. ಕೀರ್ತಿ ಗೌಡ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೇನಾದರೂ ತೊಂದರೆ ಆದರೆ ಅದಕ್ಕೆ ಕೀರ್ತಿ ಗೌಡ ಕಾರಣ. ನನಗೆ ರಕ್ಷಣೆ ಬೇಕು'' ಎಂದು ದೂರಿನಲ್ಲಿ ನಾಗರತ್ನ ತಿಳಿಸಿದ್ದಾರೆ. ಮುಂದೆ ಓದಿರಿ...

'ಫಿಲ್ಮಿಬೀಟ್ ಕನ್ನಡ'ಗೆ ಕಂಪ್ಲೇಂಟ್ ಕಾಪಿ ಲಭ್ಯ
ಕೀರ್ತಿ ಗೌಡ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಗರತ್ನ ಕೊಟ್ಟಿರುವ ಕಂಪ್ಲೇಂಟ್ ಕಾಪಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ದೂರಿನಲ್ಲಿ ನಾಗರತ್ನ ಏನೆಲ್ಲ ಉಲ್ಲೇಖ ಮಾಡಿದ್ದಾರೆ ಅಂತ ನೀವೇ ಓದಿರಿ...

ಕಂಪ್ಲೇಂಟ್ ಕಾಪಿ ಇಲ್ಲಿದೆ ನೋಡಿ
ರವರಿಗೆ,
ಪೊಲೀಸ್ ಇನ್ಸ್ ಪೆಕ್ಟರ್,
ಗಿರಿನಗರ ಪೊಲೀಸ್ ಠಾಣೆ,
ಬೆಂಗಳೂರು ನಗರ.
560085
ಇಂದ,
ಶ್ರೀಮತಿ ನಾಗರತ್ನ w/o ವಿಜಯ್ (38 ವರ್ಷ)
ಬೆಂಗಳೂರು 85
ವಿಷಯ: ಕೀರ್ತಿ ಗೌಡ ಎಂಬುವವರ ವಿರುದ್ಧ ದೂರು
ಮಾನ್ಯರೇ,
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ದಿನಾಂಕ 23/09/2018ರ ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಟಿವಿ ನ್ಯೂಸ್ ನೋಡಿ ನನ್ನ ಗಂಡ ಹಾಗೂ ಇತರರು ಗಲಾಟೆಯಾಗಿ ಹೈಗ್ರೌಂಡ್ ಠಾಣೆಯಲ್ಲಿ ಇರುತ್ತಾರೆಂದು ಟಿವಿಯಲ್ಲಿ ನೋಡಿರುತ್ತೇನೆ. ನಂತರ ನನ್ನ ಮಕ್ಕಳು ನನ್ನ ಗಂಡನ ಜೊತೆ ಇದ್ದು, ಅವರಿಗೆ ಏನಾದ್ರೂ ತೊಂದರೆ ಆಗಿರಬಹುದೆಂದು ಎಂದು ಗಾಬರಿಯಿಂದ ಅವರಿದ್ದ ಆಡನ್ ಪಬ್ಲಿಕ್ ಸ್ಕೂಲ್ ಹತ್ತಿರ ಗಿರಿನಗರ ಇಲ್ಲಿನ ಮನೆಗೆ ಬಂದು, ಮಕ್ಕಳ ಬಗ್ಗೆ ದಿನಾಂಕ 23/09/2018 ರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಇದ್ದ ಕೀರ್ತಿಗೌಡ ಮತ್ತು ಅವರ ಜೊತೆ ಇಬ್ಬರು ಹುಡುಗರು ನನ್ನನ್ನು ಮನೆಯ ಒಳಗಡೆ ಬಿಡದೇ ಮಕ್ಕಳನ್ನು ಮಾತನಾಡಿಸದಂತೆ ತಡೆದು, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಏನು ಮಾಡಬೇಕು ಎಂದು ಗೊತ್ತಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

ಅವಾಚ್ಯ ಶಬ್ಧಗಳಿಂದ ನಿಂದನೆ
ಕೈನಿಂದ ಕತ್ತಿಗೆ, ಹೊಟ್ಟೆಗೆ ಹೊಡೆದು ತಳ್ಳಿರುತ್ತಾರೆ. (ಹಿಂದೆ ನನ್ನ ಮಕ್ಕಳಿಗೆ ಆ ಕೀರ್ತಿಗೌಡ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿ ಭಯಪಡಿಸಿರುತ್ತಾಳೆ). ಆದ್ದರಿಂದ ನನಗೆ, ನನ್ನ ಮಕ್ಕಳಿಗೆ ಹಾಗೂ ನನ್ನ ಜೊತೆಯಲ್ಲಿರುವ ನನ್ನ ತಮ್ಮನಿಗೆ ತೊಂದರೆಯಾದರೆ ಇವರೇ ಕಾರಣರು.

ಅನೈತಿಕ ಸಂಬಂಧ ಇದೆ
ಆದ್ದರಿಂದ ಕೀರ್ತಿಗೌಡ ಮತ್ತು ಇತರರನ್ನು ಠಾಣೆಗೆ ಕರೆಸಿ ಸೂಕ್ತ ತಿಳುವಳಿಕೆ ಹೇಳಿ. ನಮ್ಮ ತಂಟೆಗೆ ಬರದಂತೆ ಸೂಕ್ತ ಬಂದೋಬಸ್ತ್ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅವಳು ನನ್ನ ಗಂಡನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ನನ್ನ ಮತ್ತು ನನ್ನ ಮಕ್ಕಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾಳೆ. ಇಷ್ಟಕ್ಕೆಲ್ಲ ಕಾರಣ ನನ್ನ ಗಂಡನ ಜೊತೆ ಹೊಂದಿರೋ ಅನೈತಿಕ ಸಂಬಂಧ. ಅದ್ದರಿಂದ ಅವಳನ್ನು ನನ್ನ ಮಕ್ಕಳು ಹಾಗೂ ನನ್ನ ತಂಟೆಗೆ ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ನಮಗೆ ಪ್ರೊಟೆಕ್ಷನ್ ಕೊಡಿ
ಅವಳು ನನ್ನ ತಳ್ಳಿದಾಗ ನನ್ನ ಪ್ರಾಣ ರಕ್ಷಣೆಗೆ ನಾನು ಅವಳಿಗೆ ಒಂದೆರೆಡು ಏಟನ್ನು ಹೊಡೆದಿರುತ್ತೇನೆ. ನನಗೆ ನನ್ನ ಕಡೆಯವರಿಗೆ ಏನು ತೊಂದರೆಯಾಗದಂತೆ ತಮ್ಮಲ್ಲಿ ಕೇಳಿಕೊಳ್ಳವುದೇನೆಂದರೆ ನಮಗೆ ಏನಾದರು ತೊಂದರೆ ಆಗಬಹುದು ಎಂದು ನಮಗೆ ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದು ಕೇಳಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಮಕ್ಕಳಿಗೆ ಹಾಗೂ ನನ್ನ ತಮ್ಮನಿಗೆ ತೊಂದರೆ ಆದರೆ ಅದಕ್ಕೆ ಕೀರ್ತಿಗೌಡ ಹಾಗೂ ಅವಳ ಮನೆಯವರೇ ಕಾರಣ. ಆ ಕೀರ್ತಿಗೌಡರಿಗೆ ನನ್ನ ಗಂಡ ದುನಿಯಾ ವಿಜಯ್ ಸಹಾಯ ಮಾಡುವುದರಿಂದ ಅವರಿಬ್ಬರಿಂದ ಏನಾದರೂ ಆಗಬಹುದು ಆದ್ದರಿಂದ ನಮಗೆ ರಕ್ಷಣೆ ಕೊಡಿ .
ಇಂತಿ ತಮ್ಮ ವಿಶ್ವಾಸಿ,
ನಾಗರತ್ನ.


Click it and Unblock the Notifications











