'ಕುರುಕ್ಷೇತ್ರ' ಚಿತ್ರದಲ್ಲಿರುವ ಸಪ್ತ ಮಹಿಳಾ ಕಲಾವಿದರು ಇವರೇ
ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್-ದುರ್ಯೋಧನ, ಅರ್ಜುನ್ ಸರ್ಜಾ-ಕರ್ಣ, ರವಿಚಂದ್ರನ್-ಕೃಷ್ಣ, ಅಂಬರೀಶ್-ಭೀಷ್ಮ, ಶಶಿ ಕುಮಾರ್-ಧರ್ಮರಾಯ, ನಿಖಿಲ್ ಕುಮಾರ್-ಅಭಿಮನ್ಯು, ಸೋನು ಸೂದ್-ಅರ್ಜುನ, ರವಿಶಂಕರ್-ಶಕುನಿ ಎಂಬುದು ದೊಡ್ಡ ಮಟ್ಟದಲ್ಲಿ ಪ್ರಚಾರವಾಗಿದೆ.
ಆದರೆ, ಈ ಮೆಗಾ ಸಿನಿಮಾದಲ್ಲಿ ಮೇಘನಾ ರಾಜ್ ಮತ್ತು ಹರಿಪ್ರಿಯಾ ಬಿಟ್ಟರೇ ಬೇರೆ ಮಹಿಳಾ ಕಲಾವಿದರ ಬಗ್ಗೆ ಅಷ್ಟಾಗಿ ಸುದ್ದಿಯಾಗಿಲ್ಲ. ಕುರುಕ್ಷೇತ್ರ ಚಿತ್ರದಲ್ಲಿ ಒಟ್ಟು ಏಳು ಜನ ಮಹಿಳಾ ಕಲಾವಿದರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಮೇಘನಾ ರಾಜ್, ಬಹುಭಾಷಾ ನಟಿ ಸ್ನೇಹಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಆಧಿತಿ ಆರ್ಯ, ಪವಿತ್ರಾ ಲೋಕೇಶ್, ಪ್ರಗ್ಯಾ ಜೈಸ್ವಲ್ ಹಾಗೂ ಹರಿಪ್ರಿಯಾ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯಾರು ಯಾವ ಪಾತ್ರಗಳಲ್ಲಿ ನಟಿಸಿದ್ದಾರೆ ಎಂಬುದರ ಬಗ್ಗೆ ವಿವರವಾಗಿ ನೋಡುವುದಾರೇ....
ಮೇಘನಾ ರಾಜ್: ಭಾನುಮತಿ ಪಾತ್ರ (ದುರ್ಯೋಧನ ಪತ್ನಿ)
ಸ್ನೇಹಾ: ದ್ರೌಪದಿ (ಪಂಚ ಪಾಂಡವರ ಪತ್ನಿ)
ಭಾರತಿ ವಿಷ್ಣುವರ್ಧನ್: ಕುಂತಿ (ಪಂಚ ಪಾಂಡವರ ತಾಯಿ)
ಅಧಿತಿ ಆರ್ಯ: ಉತ್ತರೆ (ಅಭಿಮನ್ಯು ಪತ್ನಿ)
ಪವಿತ್ರಾ ಲೋಕೇಶ್: ಸುಭದ್ರೆ (ಕೃಷ್ಣ-ಬಲರಾಮನ ಸಹೋದರಿ, ಅರ್ಜುನನ ಪತ್ನಿ, ಅಭಿಮನ್ಯುವಿನ ತಾಯಿ)
ಹರಿಪ್ರಿಯಾ: ನೃತ್ಯಗಾರ್ತಿ (ಕೌರವರ ಪಾಳಯದಲ್ಲಿರುವ ನೃತ್ಯಗಾರ್ತಿ)
ಪ್ರಗ್ಯಾ ಜೈಸ್ವಲ್ : ರುಕ್ಮಿಣಿ (ಕೃಷ್ಣನ ಪತ್ನಿ)


Click it and Unblock the Notifications











