»   » ಡಾ.ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್ ಕುರಿತು...

ಡಾ.ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್ ಕುರಿತು...

Posted By:
Subscribe to Filmibeat Kannada

ಡಾ.ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ಅವರ ವಿವಾಹ ಮಹೋತ್ಸವ ಇಂದು (ಆಗಸ್ಟ್ 31) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರುತ್ತಿದೆ.

ಡಾ.ನಿರುಪಮ ಕೈಹಿಡಿಯುತ್ತಿರುವ ವರ ಡಾ.ದಿಲೀಪ್. ದೊಡ್ಮನೆಗೆ ಅಳಿಯನಾಗಿ ಬರುತ್ತಿರುವ ಡಾ.ದಿಲೀಪ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೆಲ್ಲರಿಗೂ ಇದ್ದೇ ಇರುತ್ತೆ. ಆ ಕುತೂಹಲಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಮಾಡಿದೆ. ['ದೊಡ್ಮನೆ ಅಳಿಯ'ನಿಗೆ ಶಿವಣ್ಣ ಬಂಪರ್ ಉಡುಗೊರೆ]

shivarajkumar daughter wedding

ಡಾ.ದಿಲೀಪ್ ಮೂಲತಃ ಮಂಡ್ಯದವರು. ಆದರೂ, ಹುಟ್ಟಿ-ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಅವರ ನಿವಾಸ ಎಚ್.ಎಸ್.ಆರ್.ಲೇಔಟ್ ನಲ್ಲಿ. ಅವರ ತಂದೆ ಎಲ್.ಮಂಜೇಗೌಡ ಬಿಡಿಎ ಎಂಜಿನಿಯರ್. ತಾಯಿ ಪಾರ್ವತಿ ಗೃಹಿಣಿ. ಡಾ.ದಿಲೀಪ್ ಗೆ ಹಿರಿಯ ಸಹೋದರೊಬ್ಬರಿದ್ದಾರೆ.

ಚಿಕ್ಕವಯಸ್ಸಿನಿಂದಲೂ ದಿಲೀಪ್ ಅವರಿಗೆ ಡಾಕ್ಟರ್ ಆಗಬೇಕೆಂಬ ಕನಸು. ಅದನ್ನ ನನಸು ಮಾಡಿಕೊಳ್ಳುವುದಕ್ಕೆ ಬೆಂಗಳೂರಿನ ವೈದೇಹಿ ಕಾಲೇಜಿಗೆ ಸೇರಿದರು. ಅಲ್ಲೇ, ದಿಲೀಪ್ ಅವರಿಗೆ ನಿರುಪಮ ಪರಿಚಯ ಆಗಿದ್ದು. [ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು]

shivarajkumar daughter wedding

ಅಂಡರ್ ಗ್ರ್ಯಾಡ್ಜ್ಯುಯೇಷನ್ ಲೆವೆಲ್ ನಿಂದಲೂ ನಿರುಪಮ-ದಿಲೀಪ್ ಕ್ಲಾಸ್ ಮೇಟ್ಸ್. ಓದಿನಲ್ಲಿ ಸದಾ ಮುಂದಿರುತ್ತಿದ್ದ ನಿರುಪಮ, ದಿಲೀಪ್ ಅವರಿಗೆ ಸ್ಟಡೀಸ್ ವಿಷಯದಲ್ಲಿ ಸಹಾಯ ಮಾಡುತ್ತಿದ್ದರಂತೆ. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

ದಿನಗಳು ಉರುಳಿದಂತೆ ಇಬ್ಬರ ಗೆಳೆತನ ಪ್ರೀತಿಗೆ ತಿರುಗಿತು. ಇಬ್ಬರ ಎಂಟು ವರ್ಷದ ಪ್ರೇಮಕ್ಕೆ ಮನೆಯವರೂ ಸಮ್ಮತಿ ಸೂಚಿಸಿರುವ ಪರಿಣಾಮ, ಇಬ್ಬರ ವಿವಾಹ ಇಂದು ಅದ್ದೂರಿಯಾಗಿ ನಡೆಯುತ್ತಿದೆ. ['ದೊಡ್ಮನೆ ಅಳಿಯ' ದಿಲೀಪ್ ಗೆ ವೈಭವದ ವರಪೂಜೆ]

shivarajkumar daughter wedding

ಸ್ಟಾರ್ ನಟನ ಮಗಳಾಗಿ, ಡಾ.ರಾಜ್ ಕುಮಾರ್ ಮೊಮ್ಮಗಳಾಗಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮೊಮ್ಮಗಳಾಗಿದ್ದರೂ ಸೀದಾ-ಸಾದಾ ಆಗಿರುವ ನಿರುಪಮ ಅವರ ಗುಣ ದಿಲೀಪ್ ಮನಸೋಲುವುದಕ್ಕೆ ಕಾರಣ.

ಸದ್ಯ ಎಂ.ಎಸ್ ಮುಗಿಸಿರುವ ದಿಲೀಪ್, ಮದುವೆ ನಂತರ ಉನ್ನತ ಶಿಕ್ಷಣ ಮಾಡುವ ಪ್ಲಾನ್ ಮಾಡಿದ್ದಾರೆ. ಅಂತೂ ರೀಲ್ ನಲ್ಲಿ ಸಾಧನೆ ಮಾಡಿ ಡಾಕ್ಟರೇಟ್ ಪಡೆದಿರುವ ಶಿವಣ್ಣನಿಗೆ ರಿಯಲ್ ಡಾಕ್ಟರ್ ಅಳಿಯನಾಗಿ ಬಂದಿರುವುದು ಖುಷಿಯ ವಿಚಾರವೇ.

    English summary
    Kannada Actor Shivarajkumar Daughter Dr.Nirupama is getting married to Dr.Dileep today (August 31st) in Palace Grounds, Bengaluru. But who is Dr.Dileep? What is his background? Read the article to know.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada