'ದೇವಕಿ' ಸಿನಿಮಾಗೆ ಸಿಕ್ಕಿದೆ ಯು ಎ ಪ್ರಮಾಣ ಪತ್ರ
ಪ್ರಿಯಾಂಕ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ, ಚಿತ್ರ ಸೆನ್ಸಾರ್ ಹಂತವನ್ನು ದಾಟಿದೆ.
'ದೇವಕಿ' ಸಿನಿಮಾಗೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರವನ್ನು ನೋಡಿದ ಸೆನ್ಸಾರ್ ಅಧಿಕಾರಿಗಳು ಖುಷಿಯಾಗಿದ್ದಾರೆ. ಚಿತ್ರತಂಡಕ್ಕೆ ಇದು ಬಲ ನೀಡಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆದ ಚಿತ್ರ ಈಗ ಬಿಡುಗಡೆಯ ಭಾಗ್ಯ ಸಿಗುತ್ತಿದೆ.
ಚಿತ್ರದ ರಿಲೀಸ್ ಗೆ ಪ್ಲಾನ್ ಮಾಡುತ್ತಿದ್ದು, ಜೂನ್ ತಿಂಗಳ ಕೊನೆಯ ವಾರ ಅಥವಾ ಜುಲೈ ತಿಂಗಳ ಮೊದಲ ವಾರ ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುಂಚೆ ಚಿತ್ರದ ಟ್ರೇಲರ್ ರಿಲೀಸ್ ಆಗಬೇಕಿದೆ.

ಸಿನಿಮಾದ ಟ್ರೇಲರ್ ಅನ್ನು 'ಐ ಲವ್ ಯೂ' ಚಿತ್ರದ ಜೊತೆಗೆ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆ. ಉಪೇಂದ್ರ ಸಿನಿಮಾದ ಜೊತೆಗೆ ಪ್ರಿಯಾಂಕ ಸಿನಿಮಾದ ಟ್ರೇಲರ್ ಲಾಂಚ್ ಆಗಲಿದೆ.
ಅಂದಹಾಗೆ, 'ದೇವಕಿ' ಲೋಹಿತ್ ಹೆಚ್ ಮನು ನಿರ್ದೇಶನದ ಸಿನಿಮಾವಾಗಿದೆ. 'ಮಮ್ಮಿ' ಬಳಿಕ ಮತ್ತೆ ಪ್ರಿಯಾಂಕ ಜೊತೆಗೆ ಲೋಹಿತ್ ಸಿನಿಮಾ ಮಾಡುತ್ತಿದ್ದಾರೆ. ನೋಬಿನ್ ಪೌಲ್ ಸಿನಿಮಾಗೆ ಸಂಗೀತ ನೀಡಿದ್ದು, ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದಾರೆ.
ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಈ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಚಿತ್ರದ ಟ್ರೇಲರ್, ಹಾಡುಗಳ ಮೇಲೆ ನಿರೀಕ್ಷೆ ಇದೆ.


Click it and Unblock the Notifications











