ಸಲ್ಮಾನ್ ಖಾನ್ ಚಿತ್ರವನ್ನು ಹಿಂದಿಕ್ಕಿದ ಕನ್ನಡದ 'ದೇವಕಿ'

Recommended Video

ಸಲ್ಮಾನ್ ಖಾನ್ ಸಿನಿಮಾವನ್ನ ಹಿಂದಿಕ್ಕಿದ ದೇವಕಿ ಕನ್ನಡ ಸಿನಿಮಾ

ಮೊದಲು ಟೀಸರ್, ಆಮೇಲೆ ಡಿಸ್ಟ್ರಿಬ್ಯೂಷನ್, ಬಳಿಕ ಮೇಕಿಂಗ್ ವಿಡಿಯೋ ಪ್ರಸಾರ ಹೀಗೆ ಪ್ರತಿ ಹಂತದಲ್ಲಿಯೂ 'ದೇವಕಿ' ಸಿನಿಮಾ ತನ್ನ ಶಕ್ತಿಯನ್ನು ಸಾಬೀತು ಮಾಡುತ್ತಿದೆ. ಈಗ ಈ ಚಿತ್ರ ಸಲ್ಮಾನ್ ಖಾನ್ ಸಿನಿಮಾವನ್ನೇ ಹಿಂದೆ ಹಾಕಿದೆ.

IMDB ಪಟ್ಟಿಯಲ್ಲಿ ಈಗ ಕನ್ನಡದ 'ದೇವಕಿ' ಸಿನಿಮಾ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಅಂಟಿಸಿಪೇಟೆಡ್ ಸಿನಿಮಾಗಳ ಪಟ್ಟಿಯಲ್ಲಿ 'ದೇವಕಿ' ದ್ವಿತೀಯ ಸ್ಥಾನದಲ್ಲಿದೆ. ಸಲ್ಮಾನ್ ಖಾನ್ ನಟನೆಯ 'ಭಾರತ್' 4ನೇ ಸ್ಥಾನದಲ್ಲಿ ಇದೆ. ಮೊದಲ ಸ್ಥಾನವನ್ನು 'ಹೇ ಹೈ ಇಂಡಿಯಾ' ಸಿನಿಮಾದ ಅಲಂಕರಿಸಿದೆ.

ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ 'ದೇವಕಿ' ಸಿನಿಮಾ ಯಾವ ವಿಷಯದಲ್ಲಿಯೂ ಹಿಂದೆ ಬೀಳುತ್ತಿಲ್ಲ. ಈ ಹಿಂದೆ ಎನ್ ಆರ್ ಐ ಡಿಸ್ಟ್ರಿಬ್ಯೂಷನ್ ಆಗಿ ಸಿನಿಮಾ ಹುಬ್ಬೆರಿಸಿತ್ತು. ಜೊತೆಗೆ ಸ್ಟಾರ್ ಸ್ಟೋರ್ಟ್ಸ್ ಚಾನಲ್ ನಲ್ಲಿ ಪ್ರಸಾರ ಆದ ಮೊದಲ ಮೇಕಿಂಗ್ ವಿಡಿಯೋ 'ದೇವಕಿ' ಸಿನಿಮಾದಾಗಿತ್ತು.

devaki kannada movie got 2 place in most anticipated indian movies rating table

ಅಂದಹಾಗೆ, 'ದೇವಕಿ' ಸಿನಿಮಾ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ಅಂತಿಮ ಕೆಲಸಗಳು ನಡೆಯುತ್ತಿದೆ. ಪ್ರಿಯಾಂಕ ಉಪೇಂದ್ರ ಸಿನಿಮಾದ ನಾಯಕಿಯಾಗಿದ್ದಾರೆ. 'ಮಮ್ಮಿ' ಬಳಿಕ ನಿರ್ದೇಶಕ ಲೋಹಿತ್ ಹೆಚ್ ಮನು ಅವರ ಎರಡನೇ ಸಿನಿಮಾ ಇದಾಗಿದೆ.

devaki kannada movie got 2 place in most anticipated indian movies rating table

ಉಪೇಂದ್ರ ಪುತ್ರಿ ಐಶ್ವರ್ಯ ಮೊದಲ ಬಾರಿಗೆ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಚಿತ್ರದ ಟೀಸರ್ ಕನ್ನಡದಲ್ಲಿ ಮಾತ್ರವಲ್ಲದೆ ಟಾಲಿವುಡ್ ನಿಂದಲೂ ದೊಡ್ಡ ಪ್ರತಿಕ್ರಿಯೆ ಪಡೆದಿದೆ. ಈ ಎಲ್ಲ ವಿಶೇಷತೆಗಳ ಮೂಲಕ ಸಿನಿಮಾ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ.

More from Filmibeat

English summary
Actress Priyanka Upendra and her daughter Aishwarya Upendra's 'Devaki' kannada movie got 2 place in most anticipated indian movies rating table.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X