ಮೊದಲ ಬಾರಿಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕನ್ನಡ ಚಿತ್ರದ ಮೇಕಿಂಗ್ ಪ್ರಸಾರ
ಐಪಿಎಲ್ ಪಂದ್ಯ ನೋಡಲು ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಇಂದಿನ ಪೈನಲ್ ಪಂದ್ಯದಲ್ಲಿ ಕಪ್ ಯಾರದ್ದು, ಎನ್ನುವ ನಿರೀಕ್ಷೆ ಎಲ್ಲರಿಗೆ ಇದೆ. ಅದೇ ರೀತಿ ಕನ್ನಡದಲ್ಲಿ ಬಹಳ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾದ ಮೇಕಿಂಗ್ ವಿಡಿಯೋ ಸಹ ಇಂದು ಬಿಡುಗಡೆಯಾಗುತ್ತಿದೆ. ಅದು ಕೂಡ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್ ನಲ್ಲಿ ಎನ್ನುವುದು ವಿಶೇಷ.
ಪ್ರಿಯಾಂಕ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ ಒಂದಲ್ಲ ಒಂದು ವಿಶೇಷತೆಗಳು ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈಗ ಚಿತ್ರದ ಮೇಕಿಂಗ್ ವಿಡಿಯೋ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್ ನಲ್ಲಿ, ಇಂದಿನ ಪೈನಲ್ ಪಂದ್ಯದ ವೇಳೆ ಪ್ರಸಾರ ಆಗಲಿದೆ.
ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದ ಟ್ರೇಲರ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್ ಪ್ರಸಾರ ಆಗುತ್ತಿದೆ. 'ದೇವಕಿ' ಸಿನಿಮಾ ಟೀಸರ್ ನೋಡಿ ಇಷ್ಟ ಪಟ್ಟಿದ್ದ ವಾಹಿನಿ ಈಗ ಮೇಕಿಂಗ್ ವಿಡಿಯೋವನ್ನು ತಮ್ಮ ನೆಟ್ ವರ್ಕ್ ನಲ್ಲಿ ಲಾಂಚ್ ಮಾಡುತ್ತಿದೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಹಾಗೂ ನಿರ್ದೇಶಕ ಲೋಹಿತ್ ಸ್ಟಾರ್ ಸ್ಪೋರ್ಟ್ಸ್ ನ ಕಾರ್ಯಕ್ರಮದಲ್ಲಿ ಸಹ ಭಾಗಿಯಾಗಿದ್ದರು.

ಅಂದಹಾಗೆ, 'ದೇವಕಿ' ಸಿನಿಮಾವನ್ನು ಲೋಹಿತ್ ಹೆಚ್ ಮನು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಮತ್ತೆ 'ಮಮ್ಮಿ' ಚಿತ್ರದ ಜೋಡಿ ಒಂದಾಗಿದೆ. ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಈ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಜೂನ್ ನಲ್ಲಿ ಸಿನಿಮಾದ ಬಿಡುಗಡೆ ಸಿದ್ಧತೆ ನಡೆದಿದೆ. ಕಾರ್ತಿಕ್ ಗೌಡ ಚಿತ್ರದ ಹಂಚಿಕೆ ಮಾಡಲಿದ್ದಾರೆ.


Click it and Unblock the Notifications











