ಪ್ರಭಾಸ್, ಹೃತಿಕ್ ರೋಷನ್ ಚಿತ್ರಗಳನ್ನು ಹಿಂದೆ ಹಾಕಿದ 'ದೇವಕಿ'

'ದೇವಕಿ' ಸಿನಿಮಾದ ಟ್ರೇಲರ್ ನಿನ್ನೆ (ಗುರುವಾರ) ಬಿಡುಗಡೆಯಾಗಿದ್ದು, ದೊಡ್ಡ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ಪರಿಣಾಮ ನಟ ಪ್ರಭಾಸ್, ಹೃತಿಕ್ ರೋಷನ್ ಸಿನಿಮಾಗಳನ್ನೆಲ್ಲ 'ದೇವಕಿ' ಹಿಂದೆ ಹಾಕಿದೆ.

IMBD ರೇಟಿಂಗ್ ನಲ್ಲಿ 'ದೇವಕಿ' ಸಿನಿಮಾಗೆ ಮೊದಲ ಸ್ಥಾನ ಸಿಕ್ಕಿದೆ. ಹೃತಿಕ್ ರೋಷನ್ ನಟನೆಯ 'ಸೂಪರ್ 30' 2ನೇ ಸ್ಥಾನದಲ್ಲಿದೆ ಹಾಗೂ ಪ್ರಭಾಸ್ ನಟನೆಯ 'ಸಾಹೋ' ಚಿತ್ರ 5ನೇ ಸ್ಥಾನದಲ್ಲಿದೆ.

ದೊಡ್ಡ ದೊಡ್ಡ ಸಿನಿಮಾಗಳನ್ನು 'ದೇವಕಿ' ಹಿಂದೆ ಹಾಕಿ ನಂಬರ್ ಒನ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೂ ಟ್ಯೂಬ್ ನಲ್ಲಿ 2 ಲಕ್ಷದ ಗಡಿಯ ಸನಿಹದಲ್ಲಿ ಇದೆ.

devaki kannada movie trending number 1 in imdb

ಯೂ ಟ್ಯೂಬ್ ನಲ್ಲಿ ಬಂದಿರುವ ಎಲ್ಲ ಕಾಮೆಂಟ್ಸ್ ಗಳು ಪಾಸಿಟಿವ್ ಆಗಿವೆ. ಚಿತ್ರರಂಗದ ಅನೇಕರು ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.

ಆರಾಧ್ಯ ಎಂಬ ಹುಡುಗಿಯ ಪಾತ್ರದಲ್ಲಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಖದರ್ ಜೋರಾಗಿದೆ. ಪ್ರಿಯಾಂಕ ಉಪೇಂದ್ರ ನಟನೆ ಕೂಡ ತುಂಬನೇ ಚೆನ್ನಾಗಿದೆ.

ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಗಳಲ್ಲಿ ಸೌಂಡ್ ಪ್ರಮುಖವಾಗಿದೆ. ನೋಬಿನ್ ಪೌಲ್ ಸಂಗೀತ, ಹೆಚ್ ಸಿ ವೇಣು ಕ್ಯಾಮರಾ ಸಿನಿಮಾಗೆ ಬಲ ತುಂಬಿದೆ. ಮದನ್ ಬೆಳ್ಳಿಸಾಲು ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ನಿರ್ದೇಶಕ ಲೋಹಿತ್ ಹೆಚ್ ಮನು ಮತ್ತೆ ತಮ್ಮ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಅವರ ಪರಿಶ್ರಮ ತೆರೆ ಮೇಲೆ ಕಾಣುತ್ತಿದೆ. 'ದೇವಕಿ' ಸಿನಿಮಾ ಜುಲೈ 5 ರಂದು ಬಿಡುಗಡೆಯಾಗಿದೆ.

More from Filmibeat

English summary
Actress Priyanka Upendra and her daughter Aishwarya Upendra's 'Devaki' kannada movie trending number 1 in imdb. This is Aishwarya Upendra's debut movie. The movie is directed by Lohith.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X