'ಒಡೆಯ'ನಿಗೆ ಸಾಥ್ ನೀಡಲಿದ್ದಾರೆ ಕನ್ನಡದ ಸ್ಟಾರ್ ನಟರು
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಒಡೆಯ ಸಿನಿಮಾ ಇತ್ತೀಚಿಗಷ್ಟೆ ಸೆಟ್ಟೇರಿದೆ. ಸಂದೇಶ ನಾಗರಾಜ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ.
ತಮಿಳಿನಲ್ಲಿ ಅಜಿತ್ ಕುಮಾರ್ ಅಭಿನಯಿಸಿ ಸೂಪರ್ ಹಿಟ್ ಆಗಿದ್ದ 'ವೀರಂ' ಚಿತ್ರದ ಕನ್ನಡ ರೀಮೇಕ್ ಇದಾಗಿದೆ. ಇದು ಅಣ್ಣ-ತಮ್ಮಂದಿರ ಕಥೆಯಾಗಿದ್ದು, ಚಿತ್ರದಲ್ಲಿ ದರ್ಶನ್ ಗೆ ನಾಲ್ಕು ಜನರ ತಮ್ಮಂದಿರು ಇರ್ತಾರೆ.

ಆ ಪಾತ್ರಗಳಲ್ಲಿ ದರ್ಶನ್ ಅವರ ಗೆಳೆಯ ಯಶಸ್ ಸೂರ್ಯ, ಎಸ್.ನಾರಾಯಣ್ ಅವರ ಮಗ ಪಂಕಜ್, ಸಂದೇಶ್ ನಾಗರಾಜ್ ಅವರ ತಮ್ಮನ ಮಗ ಸಮರ್ಥ್ ಕಾಣಿಸಿಕೊಳ್ಳಲಿದ್ದಾರೆ.
ಇವರ ಜೊತೆ ಕನ್ನಡದ ಮತ್ತಷ್ಟು ಸ್ಟಾರ್ ನಟರು ಚಿತ್ರದಲ್ಲಿ ಇರಲಿದ್ದಾರೆ. ಹಿರಿಯ ನಟ ದೇವರಾಜ್, ಖ್ಯಾತ ಖಳನಟ ರವಿಶಂಕರ್ ಹಾಗೂ ಕಾಮಿಡಿ ಕಲಾವಿದರಾದ ಸಾಧುಕೋಕಿಲಾ ಮತ್ತು ಚಿಕ್ಕಣ್ಣ ಕೂಡ ಒಡೆಯನಿಗೆ ಸಾಥ್ ನೀಡಲಿದ್ದಾರೆ.
ಇನ್ನುಳಿದಂತೆ ನಾಯಕಿ ಯಾರು ಎಂಬುದು ಇನ್ನು ಪಕ್ಕಾ ಆಗಿಲ್ಲ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಲಿದ್ದಾರೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಅರಂಭವಾಗಲಿದ್ದು, ಮೈಸೂರಿನಲ್ಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಯಲಿದೆ.


Click it and Unblock the Notifications











