For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಫಾರ್ಮ್ ಹೌಸ್ ನಲ್ಲಿ ದೇವರಾಜ್ ಕುಟುಂಬ: ಫೋಟೋ ವೈರಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಮನೆಯಲ್ಲಿಯೇ ಇದ್ದಾರೆ. ಲಾಕ್ ಡೌನ್ ನಲ್ಲಿ ಡಿ ಬಾಸ್ ಹೆಚ್ಚಾಗಿ ಮೈಸೂರಿನ ಫಾರ್ಮ್ ಹೌಸ್ ನಲ್ಲಿ, ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ದರ್ಶನ್ ಫಾರ್ಮ್ ಹೌಸ್ ಗೆ ದೇವರಾಜ್ ಕುಟುಂಬ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ.

  ದರ್ಶನ್, ದೇವರಾಜ್ ಕುಟುಂಬದ ಜೊತೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಮತ್ತು ದೇವರಾಜ್ ಕುಟುಂಬದ ಫೋಟೋವನ್ನು ಶೇರ್ ಮಾಡಿ ತಿಂಗಳುಗಳ ಬಳಿಕ ದರ್ಶನ ನೀಡಿದ ಡಿ ಬಾಸ್ ನೋಡಿ ಸಂತಸ ಪಡುತ್ತಿದ್ದಾರೆ.

  ವೀರ ಮದಕರಿ ನಾಯಕ ಸಿನಿಮಾ: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿವೀರ ಮದಕರಿ ನಾಯಕ ಸಿನಿಮಾ: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

  ಅಂದ್ಹಾಗೆ ಫೋಟೋದಲ್ಲಿ ದೇವರಾಜ್ ಮತ್ತು ಇಬ್ಬರು ಮಕ್ಕಳಾದ ಪ್ರಜ್ವಲ್ ಮತ್ತು ಪ್ರಣವ್ ದೇವರಾಜ್ ಇದ್ದಾರೆ. ಜೊತೆಗೆ ನಟ ಯಶಸ್ ಸೂರ್ಯ ಮತ್ತು ಚಿಕ್ಕಣ್ಣ ಸಹ ಫೋಟೋದಲ್ಲಿದ್ದಾರೆ. ತುಂಬಾ ದಿನಗಳ ಬಳಿಕ ಗೆಳೆಯರನ್ನು ಭೇಟಿ ಮಾಡಿದ ಖುಷಿ ಡಿ ಬಾಸ್ ಮೊಗದಲ್ಲಿ ಕಾಣುತ್ತಿದೆ.

  ದರ್ಶನ್ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ 'ಬದಲಾಗು ನೀ ಬದಲಾಯಿಸು ನೀನು' ಎನ್ನುವ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ನೇತೃತ್ವದಲ್ಲಿ ಮೂಡಿ ಬಂದಿರುವ ಹಾಡು ಇದಾಗಿದ್ದು, ಇತ್ತೀಚಿಗೆ ಪವನ್ ಜೊತೆ ಇರುವ ಫೋಟೋ ವೈರಲ್ ಆಗಿತ್ತು. ಆದ್ರೀಗ ದರ್ಶನ್ ಬಹುದಿನಗಳ ನಂತರ ಸಿಕ್ಕ ಗೆಳೆಯರ ಜೊತೆ ಫಾರ್ಮ್ ಹೌಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  English summary
  Devaraj And his sons prajwal and Pranav met Darshan in Farmhouse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X