For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಂಗೀತ ನಿರ್ದೇಶಕ DSP

  |

  ಟಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈಗ ವಿಶಿಷ್ಟ ಸಾಧನೆ ಮಾಡಿದ್ದಾರೆ.‌ ಸ್ಟಾರ್ ನಟರ ಮೈಲಿಗಲ್ಲು ಸಿನಿಮಾಗಳಿಗೆ ಸಂಗೀತ ನೀಡಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

  ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿತ್ತು. ಇದು ಪ್ರಿನ್ಸ್ ನಟನೆಯ 25ನೇ ಸಿನಿಮಾವಾಗಿದೆ. ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ನೀಡಿದ್ದಾರೆ.

  ನಟ ಜೂನಿಯರ್ ಎನ್ ಟಿ ಆರ್ ಅವರ 25ನೇ ಸಿನಿಮಾ 'ನಾನಕು ಪ್ರೇಮತೊ' ಹಾಗೂ ಸೂರ್ಯ ಕೆರಿಯರ್ ನ 25 ನೇ‌ ಸಿನಿಮಾ 'ಸಿಂಗಂ' ಸಿನಿಮಾಗಳಿಗೆ ಡಿ ಎಸ್ ಪಿ ಸಂಗೀತ ಸುದೆ ಇತ್ತು.

  ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಅವರ 150ನೇ ಸಿನಿಮಾ 'ಖೈದಿ' ಚಿತ್ರಕ್ಕೆ ಸಹ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುವ ಅವಕಾಶ ಪಡೆದಿದ್ದರು.

  ಈ ರೀತಿ ಸ್ಟಾರ್ ನಟರ ಮೈಲಿಗಲ್ಲು ಸಿನಿಮಾಗೆ ಡಿ ಎಸ್ ಪಿ ಮ್ಯೂಸಿಕ್ ನೀಡಿದ್ದು, ಆ ‌ಎಲ್ಲ‌ ಸಿನಿಮಾಗಳ ಹಾಡುಗಳು ಹಿಟ್ ಆಗಿವೆ.

  ಸದ್ಯ, ಬಿಡುಗಡೆಯಾಗಿರುವ 'ಮಹರ್ಷಿ' ಸಹ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಸಿನಿಮಾದ ಎಲ್ಲ ಹಾಡುಗಳು ಚೆನ್ನಾಗಿವೆ. ದಶಕಗಳ ಕಾಲ ಡಿ ಎಸ್ ಪಿ ಸಕ್ಸಸ್ ಸವಾರಿ ಮುಂದುವರೆಸಿದ್ದಾರೆ.

  English summary
  Devi Sri Prasad gave music to tollywood stars landmark movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X