'ಡೆವಿಲ್' ಚಿತ್ರದ ಬಗ್ಗೆ ನಿಂದನೆ, ಅಪಪ್ರಚಾರ ಮಾಡಿದ್ರೆ ಕೋರ್ಟ್‌ಗೆ ಹೋಗ್ತೀವಿ- ಚಿತ್ರತಂಡ ಎಚ್ಚರಿಕೆ

ದರ್ಶನ್ ನಟನೆಯ 'ಡೆವಿಲ್' ಸಿನಿಮಾ 3 ವಾರ ಪೂರೈಸಿ 4ನೇ ವಾರಕ್ಕೆ ಕಾಲಿಡುತ್ತಿದೆ. ರಾಜ್ಯಾದ್ಯಂತ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿದ್ದ ಸಿನಿಮಾ ಡಿಸೆಂಬರ್ 11ರಂದು ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು.

ಫಸ್ಟ್ ವೀಕೆಂಡ್ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ 'ಡೆವಿಲ್' ಸಿನಿಮಾ ವಾರದ ದಿನಗಳಲ್ಲಿ ನಿರಾಸೆ ಮೂಡಿಸಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಆದರೆ ವೀಕೆಂಡ್‌ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ದರ್ಶನ್ ಅಭಿಮಾನಿಗಳ ಪದೇ ಪದೆ ಸಿನಿಮಾ ನೋಡಿದ್ದರು. ಇನ್ನು ಚಿತ್ರದ ಬಗ್ಗೆ ನೆಗೆಟಿಚ್ ಕಾಮೆಂಟ್ಸ್, ಅಪಪ್ರಚಾರ ಕೂಡ ನಡೀತು.

Devil Roars Into Week 4 as Darshan s Film Team Takes Firm Stand Against Piracy and Abuse

ತಮ್ಮ ಚಿತ್ರದ ಬಗ್ಗೆ ನಿಂದನೆ, ಅಪಪ್ರಚಾರ ಹಾಗು ಅವಹೇಳನಕಾರಿ ಮಾತುಗಳನ್ನು ಆಡಿದ್ದಲ್ಲಿ ಅಥವಾ ಪೋಸ್ಟ್ ಮಾಡಿದಲ್ಲಿ ಕೋರ್ಟ್ ನ ಮೊರೆ ಹೋಗಲಾಗುವುದು ಎಂದು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಚಿತ್ರತಂಡ ಹೇಳಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದೇ ರೀತಿ '45' ಚಿತ್ರದ ವಿರುದ್ಧ ಅಪಪ್ರಚಾರ ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ ಎಂದು ಆ ಚಿತ್ರತಂಡ ಹೇಳಿತ್ತು.

"ದಿ ಡೆವಿಲ್ ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್‌ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ಅಥವಾ ನಿರ್ಮಾಪಕರಿಗೆ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವಕ್ಕೆ ಹಾನಿ ಮಾಡುವಂತಹ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು, ಸಂಸ್ಥೆ, ಚಾನೆಲ್‌ಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ. ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲಾ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸ ಬೇಕು. ಇಲ್ಲವಾದಲ್ಲಿ ಅಗತ್ಯವಿದ್ದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಚಿತ್ರತಂಡ ಹೇಳಿದೆ.

'ಡೆವಿಲ್' ಸಿನಿಮಾ ಈಗ ಸಂಪೂರ್ಣವಾಗಿ ಪೈರಸಿಮುಕ್ತವಾಗಿದೆ ಎಂದು ಕೂಡ ಚಿತ್ರತಂಡ ತಿಳಿಸಿದೆ. 10 ಸಾವಿರಕ್ಕೂ ಅಧಿಕ 'ಡೆವಿಲ್' ಚಿತ್ರದ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿರುವುದಾಗಿ ಇತ್ತೀಚೆಗೆ ಹೇಳಲಾಗಿತ್ತು. ಒಟ್ಟಾರೆ ಪೈರಸಿ ಈಗ ಊಹಿಸಿದ್ದಕ್ಕಿಂತ ದೊಡ್ಡಮಟ್ಟದಲ್ಲಿ ಚಿತ್ರತಂಡಕ್ಕೆ ಕಾಟ ಕೊಡುತ್ತಿದೆ. '45' ಹಾಗೂ 'ಮಾರ್ಕ್' ಚಿತ್ರಗಳಿಗೂ ಇದು ಪೆಟ್ಟು ಕೊಟ್ಟಿತ್ತು.

ಇದೇ ರೀತಿ ಸಿನಿಮಾಗಳನ್ನು ಪೈರಸಿ ಮಾಡುತ್ತಿದ್ದ ಕಿಡಿಗೇಡಿ ಒಬ್ಬರನ್ನು ನಟ ಜಗ್ಗೇಶ್ ಪೊಲೀಸರಿಗೆ ಒಪ್ಪಿಸಿದ್ದರು. ಇಡೀ ಚಿತ್ರರಂಗ ಪೈರಸಿ ವಿರುದ್ಧ ಹೋರಾಟ ಮಾಡುತ್ತದೆ ಎಂದಿದ್ದರು. ಬುಕ್‌ಮೈ ಶೋನಲ್ಲಿ 'ಡೆವಿಲ್' ಚಿತ್ರದ ಬಗ್ಗೆ ರಿವ್ಯೂ, ರೇಟಿಂಗ್ ನೀಡದಂತೆ ಚಿತ್ರತಂಡ ಸ್ಟೇ ತಂದಿತ್ತು. ಇದನ್ನೇ '45' ಹಾಗೂ 'ಮಾರ್ಕ್' ಚಿತ್ರತಂಡಗಳು ಅನುಸರಿಸಿವೆ.

ಓಟಿಟಿ ರಿಲೀಸ್ ಯಾವಾಗ?

'ಡೆವಿಲ್' ಸಿನಿಮಾ ಓಟಿಟಿ ರಿಲೀಸ್ ಯಾವಾಗ ಎನ್ನುವ ಚರ್ಚೆ ನಡೀತಿದೆ. ಜೀ5 ಸಂಸ್ಥೆಗೆ ರೈಟ್ಸ್ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇನ್ನು ಡಿಜಿಟಲ್ ರೈಟ್ಸ್ ಮಾರಾಟ ಆಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಸಂಕ್ರಾಂತಿ ವೇಳೆಗೆ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.

ಡೆವಿಲ್ ಕೈ ಹಿಡಿದ ಫ್ಯಾನ್ಸ್

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ಹಾಗಾಗಿ ಅಭಿಮಾನಿಗಳೇ ಚಿತ್ರವನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದರು. ಅಡ್ವಾನ್ಸ್ ಬುಕ್ಕಿಂಗ್‌ನಿಂದ್ಲೇ ಸಿನಿಮಾ ಸದ್ದು ಮಾಡಿತ್ತು. ದರ್ಶನ್ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ವಿಜಯಲಕ್ಷ್ಮಿ ದರ್ಶನ್ ವಿಜಯಯಾತ್ರೆ ಮಾಡಿ ಸಿನಿಮಾ ಮೇಲೆ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದರು.

More from Filmibeat

Read more about: devil darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X