'ಕ್ಲಾಸ್ 'ಅಂಗಳದಿಂದ ಮೊದಲ ಬಾರಿ 'ಮಾಸ್' ಮನೆಗೆ ಜಿಗಿದ 'ಮಿಲನಾ ಪ್ರಕಾಶ್ '; 'ಡೆವಿಲ್ ' ಬಗ್ಗೆ 'ದರ್ಶನ್ ' ಹೇಳಿದ್ದೇನು ?
ಕನ್ನಡ ಚಿತ್ರರಂಗದ ಕ್ಲಾಸ್ ಡೈರೆಕ್ಟರ್ ಎಂದೇ ಹೆಸರು ಮಾಡಿದವರು ಮಿಲನಾ ಪ್ರಕಾಶ್. 'ಖುಷಿ'.. ರಿಶಿ.. ವಂಶಿ.. ಗೋಕುಲ.. ಸಿದ್ಧಾರ್ಥ.. ಹೀಗೆ ಮನೆ ಮಂದಿಯೆಲ್ಲ ಕುಳಿತು ಸಿನಿಮಾ ಮಾಡಿರುವ ಹೆಗ್ಗಳಿಕೆ ಇವರದ್ದು.
ಇನ್ನೂ ಇವರ ನಿರ್ದೇಶನದಲ್ಲಿ ಬಂದ ಮಿಲನಾ ಆ ಕಾಲಕ್ಕೆ ದಾಖಲೆ ಬರೆದಿತ್ತು. ಹೆಂಗಳೆಯರ ಮನಸನ್ನ ಗೆದ್ದಿತ್ತು. ಪ್ರಕಾಶ್ ಅವರ ಹೆಸರಿನ ಹಿಂದೆ ಮಿಲನಾ ಹೆಸರು ಅಚ್ಚಳಿಯದೇ ಉಳಿಯಿತು. ಇಂಥಹ ಪ್ರಕಾಶ್ ಬರ್ತ್ ಡೇ ಬಾಯ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಹಿಂದೆ ತಾರಕ್ ಸಿನಿಮಾವನ್ನ ಮಾಡಿದ್ದರು. ದರ್ಶನ್ ಅಂತಹ ಮಾಸ್ ಹೀರೋಗೆ ಕ್ಲಾಸ್ ಟಚ್ ಕೊಟ್ಟಿದ್ದರು. ತಾತ ಮೊಮ್ಮಗನ ನಡುವಿನ ಆತ್ಮೀಯ ಸಂಬಂಧದ ಕಥೆಯನ್ನ ಹೇಳಿದ್ದರು.

ಆದರೆ ಇದೀಗ ಪ್ರಕಾಶ್ ಲಾಂಗ್ ಜಂಪ್ ಗೆ ಸಿದ್ಧರಾಗಿದ್ದಾರೆ. ತಮ್ಮ ಎರಡು ದಶಕಗಳ ಸುಧೀರ್ಘ ಪ್ರಯಾಣದಲ್ಲಿ ಇದೇ ಮೊದಲ ಬಾರಿ ಔಟ್ ಆಂಡ್ ಔಟ್ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಅಣಿಯಾಗಿದ್ದಾರೆ.
ನಿಜಾ.. ಪ್ರಕಾಶ್ ಈ ಹಿಂದೆ ನಿರ್ದೇಶಿಸಿದ್ದ 'ಶ್ರೀ' ಚಿತ್ರದಲ್ಲಿ ಆಕ್ಷನ್ ಇತ್ತು. ಆದರೆ ಅದರಲ್ಲಿಯೂ ಸೆಂಟಿಮೆಂಟ್ ಹಾಗೂ ಎಮೋಷನ್ಸ್ ಇದ್ದವು. ಈ ವಿಚಾರದಲ್ಲಿ ಡೆವಿಲ್ ದಿ ಹೀರೋ ಸಂಪೂರ್ಣ ಭಿನ್ನ. ಪ್ರಕಾಶ್ ಈ ಬಾರಿ ದರ್ಶನ್ ಅಭಿಮಾನಿಗಳು ಮತ್ತು ಅವರ ಟೇಸ್ಟ್‌ನ ಸಿನಿಮಾ ಮಾಡಲು ಕಥೆ ಮಾಡಿಕೊಂಡಿದ್ದಾರೆ.

ಮಾಸ್ ಎಂಟರ್ ಟೇನರ್ ಸಿನಿಮಾ ಮಾಡಲು ಹೊರಟಿದ್ದಾರೆ. ಇಂದು ಬಿಡುಗಡೆಯಾದ ಡೆವಿಲ್ ದಿ ಹೀರೋ ಫಸ್ಟ್ ಲುಕ್ ಟೀಸರ್ ನೋಡಿದ್ದರೆ ನಿಮ್ಮಲ್ಲಿಯೂ ಈ ಭಾವನೆ ಮನದ ಮೂಲೆಯೆಲ್ಲಿ ಮೂಡದೇ ಇರಲಾರದು
04 ವರ್ಷದ ಹಿಂದೆ ಕಥೆಯ ಬಗ್ಗೆ ಹೇಳಿದ್ದೇನು ದರ್ಶನ್..?
ಹಾಗೇ ನೋಡಿದರೆ ತಾರಕ್ ಚಿತ್ರದ ನಂತರವೇ ಈ ಚಿತ್ರ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೇರಿ ನಾನಾ ಕಾರಣಗಳಿಂದ ಚಿತ್ರ ತಡವಾಗುತ್ತಾ ಬಂತು. ಇನ್ನೂ ನಾಲ್ಕು ವರ್ಷದ ಹಿಂದೆ ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಮಿಲನ ಪ್ರಕಾಶ್ ಅವರ ಕಥೆ ಬಹಳ ಚೆನ್ನಾಗಿದೆ. ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಮತ್ತೊಂದು ಒಳ್ಳೆಯ ಸಿನಿಮಾ ಬರಲಿದೆ. ಈ ಬಾರಿ ಮಾಸ್ ಮತ್ತು ಕಮರ್ಷಿಯಲ್ ಸ್ಟೈಲ್‌ನಲ್ಲಿ ಜನರನ್ನು ರಂಜಿಸಲಿದ್ದೇವೆ' ಎಂದು ಹೇಳಿದ್ದರು.

ಒಟ್ಟಿನಲ್ಲಿ ಡೆವಿಲ್ ದಿ ಹೀರೋ ಮೂಲಕ ಮಿಲನಾ ಪ್ರಕಾಶ್ ಚಿತ್ರರಂಗದಲ್ಲಿ ಮತ್ತೊಂದು ಮಗ್ಗಲಿನತ್ತ ಹೊರಳುವ ಪ್ರಯತ್ನ ಮಾಡ್ತಿದ್ದಾರೆ. ಕ್ಲಾಸ್ ನಿರ್ದೇಶಕರಾಗಿ ಸೈ ಅನಿಸಿಕೊಂಡ ಪ್ರಕಾಶ್ ಈ ಮೂಲಕ ಮಾಸ್ ಪ್ರೇಕ್ಷಕರಿಗೆ ಆಕ್ಷನ್ ರಸದೌತಣ ನೀಡಲು ಸಿದ್ಧರಾಗಿದ್ದಾರೆ.
ಇವರ ಈ ಪ್ರಯತ್ನಕ್ಕೆ ಛಾಯಾಗ್ರಾಹಕರಾಗಿ ಸುಧಾಕರ್ ಹಾಗೂ ಸಂಗೀತ ನಿರ್ದೇಶಕರಾಗಿ ಅಜನೀಶ್ ಲೋಕನಾಥ್ ಕೈ ಜೋಡಿಸಿರುವುದರಿಂದ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಡೆವಿಲ್ ದಿ ಹೀರೋ ಸಿನಿಮಾ ಕನ್ನಡ ಚಿತ್ರರಂಗದ ಮಾಸ್ ಹೀರೋ ದರ್ಶನ್ ಅವರ ವೃತ್ತಿ ಬದುಕಿನ ಇನ್ನೊಂದು ಮೈಲಿಗಲ್ಲಾಗುವ ಭರವಸೆಯನ್ನೂ ಹುಟ್ಟಿಸಿದೆ. ಹೊಚ್ಚ ಹೊಸ ಸಾಹಸಕ್ಕೆ ಸಿದ್ಧವಾಗಿರುವ ಪ್ರಕಾಶ್ ಅವರಿಗೆ ನಿಮ್ಮದು ಒಂದು ಶುಭ ಹಾರೈಕೆ ಇರಲಿ


Click it and Unblock the Notifications











