»   » ಅಮಿತಾಬ್‌ ಬಂದ ಮೇಲೆ ನಮ್ಮದಿನ್ನೇನು

ಅಮಿತಾಬ್‌ ಬಂದ ಮೇಲೆ ನಮ್ಮದಿನ್ನೇನು

Posted By: Staff
Subscribe to Filmibeat Kannada

ಮಿಸ್ಟರ್‌ ಚೊಂಬೇಶ್‌- ಹಾಗಂತ ಜಗ್ಗೇಶನ್ನು ಇಲ್ಲಿಯವರೆಗೆ ಯಾರೂ ಕರೆದಿಲ್ಲ . ಜಗ್ಗೇಶ್‌ ಚಿತ್ರಗಳು ಸಾಲೋಸಾಲಾಗಿ ತೋಪಾದರೂ ಅವರ ಮಟ್ಟಿಗೆ ಅವರು ಯಾವುದಕ್ಕೂ ಜಗ್ಗದ ಜಗ್ಗೇಶ್‌. ಹಾಗಿದ್ದರೆ ಮಿಸ್ಟರ್‌ ಚೊಂಬೇಶ್‌ ಯಾರು? ಕನ್ನಡ ಚಿತ್ರರಂಗದ ಮೊದಲ ಮಾತಿನ ಮಲ್ಲ ಧೀರೇಂದ್ರಗೋಪಾಲ್‌. ಈ ಟೈಟಲ್‌ನೊಂದಿಗೆ ಗೋಪಾಲ್‌ ಅವರ ಕಿರುತೆರೆ ಪ್ರವೇಶವಾಗುತ್ತಿದೆ. ಸುಪ್ರಭಾತ ಚಾನೆಲ್‌ಗಾಗಿ ನಿರ್ಮಾಣವಾಗುತ್ತಿರುವ ಈ ಟೀವಿ ಸೀರಿಯಲ್‌ನಲ್ಲಿ ಧೀರೇಂದ್ರಗೋಪಾಲ್‌ ಅವರೇ ಕೇಂದ್ರಪಾತ್ರ.

ಧೀರೇಂದ್ರಗೋಪಾಲ್‌ ಅವರೇ ಹೇಳುವ ಪ್ರಕಾರ ಅವರಿಗೆ ಟೀವಿಯಲ್ಲಿ ನಟಿಸುವುದಕ್ಕೆ ಕೊಂಚವೂ ಮನಸ್ಸಿರಲಿಲ್ಲ . ಅಮಿತಾಬ್‌ನಂಥ ಸೂಪರ್‌ಸ್ಟಾರೇ ಕಿರುತೆರೆಗೆ ಬಂದಮೇಲೆ ತಮ್ಮದೇನು ಅಂತ ಈ ಕಡೆ ಬಂದರಂತೆ. ಸಣ್ಣಪುಟ್ಟ ಸಿನಿಮಾ ನಟರೊಂದಿಗೆ ದೊಡ್ಡವರೂ ಇದೀಗ ಟೀವಿಗೆ ಜಾರುತ್ತಿರುವ ಈ ಸಂದರ್ಭದಲ್ಲಿ ಬೇಡಿಕೆಯಲ್ಲಿರುವ ಪೋಷಕ ನಟರೊಬ್ಬರು ಈ ನಿರ್ಧಾರಕ್ಕೆ ಬಂದಿದ್ದರಲ್ಲಿ ಅಚ್ಚರಿಯೇನೂ ಇಲ್ಲ . ಚೊಂಬೇಶ್‌ ಮೂಲಕ ಮಾಜಿ ನಿರ್ದೇಶಕ ತಿಪಟೂರು ರಘು ಅವರಿಗೂ ಒಂದು ನೌಕರಿ ಸಿಕ್ಕಂತಾಗಿದೆ.

ಧೀರೇಂದ್ರಗೋಪಾಲ್‌ ಚಿತ್ರಗಳನ್ನು ನೋಡಿದವರಿಗೆ ಅವರ ಸಂಭಾಷಣಾ ವೈಖರಿಯ ಬಗ್ಗೆ ಟಿಪ್ಪಣಿ ಬೇಕಿಲ್ಲ . ಅದೇ ಮಾದರಿಯ ಡೈಲಾಗ್‌ ಚೊಂಬೇಶ್‌ನಲ್ಲೂ ಇರಬಹುದೆ ಎಂಬ ಗಾಬರಿ ಟೀವಿ ವೀಕ್ಷಕರದ್ದು.

ಚಾನೆಲ್‌ಗಳು ಮತ್ತು ಅವುಗಳ ಜೊತೆಗೆ ಸೀರಿಯಲ್‌ಗಳೂ ಜಾಸ್ತಿಯಾಗುತ್ತಿರುವ ಈ ದಿನಗಳಲ್ಲಿ ವೀಕ್ಷಕರನ್ನು ತಕ್ಷಣಕ್ಕೆ ಸೆಳೆಯಲು ವಿಚಿತ್ರ ಟೈಟಲ್‌ಗಳೊಂದೇ ದಾರಿ ಎಂಬ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ಬಲ್‌ ನನ್ಮಗ, ತರ್ಲೆ ನನ್ಮಗ, ಪೋಲಿ ಹುಡುಗ ಟೈಟಲ್‌ಗಳು ಬಂದಾಗಿವೆ. ಈಗ ಟೀವಿಯಲ್ಲಿ ದಂಡಪಿಂಡಗಳು, ಮಿಸ್ಟರ್‌ ಚೊಂಬೇಶ್‌... 

English summary
Dheerendra gopal becomes chombesh, not really, but in a tv serial
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada