For Quick Alerts
  ALLOW NOTIFICATIONS  
  For Daily Alerts

  ಮಾನ್ಸೂನ್ ರಾಗ ಚಿತ್ರದ ಪ್ರೋಮೊ ಸಾಂಗ್ ಔಟ್; ಡಾಲಿ, ರಚಿತಾ ಸ್ಟೆಪ್ ಗೆ ಅಭಿಮಾನಿಗಳು ಫಿದಾ

  |

  ಧನಂಜಯ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಮಾನ್ಸೂನ್ ರಾಗ ಚಿತ್ರ ಇದೇ ತಿಂಗಳ ಸೆಪ್ಟೆಂಬರ್ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕಳೆದ ಆಗಸ್ಟ್ 19ರಂದೇ ಮಾನ್ಸೂನ್ ರಾಗ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಚಿತ್ರದ ತಾಂತ್ರಿಕ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಚಿತ್ರವನ್ನು ಚಿತ್ರತಂಡ ಮುಂದೂಡಿತ್ತು.

  ಸದ್ಯ ಸೆಪ್ಟೆಂಬರ್ 16ಕ್ಕೆ ಚಿತ್ರ ತೆರೆಕಾಣುವುದು ಖಚಿತವಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಬಿಡುಗಡೆಗೆ ತಿಂಗಳು ಬಾಕಿ ಇರುವಾಗಲೇ ಚಿತ್ರಮಂದಿರಗಳ ಮುಂದೆ ಕಟೌಟ್ ಹಾಕಿಸಿದ್ದ ಚಿತ್ರತಂಡ ಇದೀಗ ಬಿಡುಗಡೆಗೆ ಇನ್ನೊಂದು ವಾರ ಇರುವಾಗ ಪ್ರಮೋಷನಲ್ ಹಾಡೊಂದನ್ನು ಬಿಡುಗಡೆ ಮಾಡಿದೆ.

  ಕೆಂಪು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ನಟಿ ರಚಿತಾ ರಾಮ್!ಕೆಂಪು ಸೀರೆಯಲ್ಲಿ ಮದುಮಗಳಂತೆ ಮಿಂಚಿದ ನಟಿ ರಚಿತಾ ರಾಮ್!

  ಚಿತ್ರದ ಹಾಡುಗಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಿಶ್ರಿತವಾದ ಈ ಹಾಡಿನಲ್ಲಿ ರಚಿತಾ ರಾಮ್ ಮತ್ತು ಡಾಲಿ ಧನಂಜಯ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ರಚಿತಾ ರಾಮ್ ಸೀರೆಯಲ್ಲಿ ಮಿಂಚಿದ್ದರೆ, ಡಾಲಿ ಧನಂಜಯ್ ವೈಟ್ & ವೈಟ್‌ನಲ್ಲಿ ಸಕ್ಕತ್ತಾಗಿ ಕುಣಿದಿದ್ದಾರೆ.

  ಸದ್ಯ ಮನ್ಸೂನ್ ರಾಗ ಚಿತ್ರದ ಪ್ರೋಮೋ ಸಾಂಗ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು, ಹಾಡನ್ನು ವೀಕ್ಷಿಸಿದ ಸಿನಿರಸಿಕರು ಹಾಡು ಸಕತ್ತಾಗಿದೆ, ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಯಶಾ ಶಿವಕುಮಾರ್ ಮತ್ತೋರ್ವ ನಾಯಕಿಯಾಗಿ ಚಿತ್ರದಲ್ಲಿದ್ದಾರೆ.

  ಪುಷ್ಪಕ ವಿಮಾನ ಚಿತ್ರವನ್ನು ನಿರ್ದೇಶನ ಮಾಡಿದ್ದ ಎಸ್ ರವೀಂದ್ರನಾಥ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಎ ಆರ್ ವಿಖ್ಯಾತ್ ಬಂಡವಾಳ ಹೂಡಿದ್ದಾರೆ ಮತ್ತು ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇಲ್ಲಿಯವರೆಗೂ ಬಿಡುಗಡೆಯಾಗಿರುವ ಹಾಡುಗಳಲ್ಲಿನ ಅನೂಪ್ ಸೀಳಿನ್ ಅವರ ಸಂಗೀತ ಉತ್ತಮ ಪ್ರಶಂಸೆ ಪಡೆದುಕೊಂಡಿದೆ ಹಾಗೂ ಈ ಪ್ರೋಮೋ ಹಾಡಿನಲ್ಲಿಯೂ ಅನೂಪ್ ಸೀಳಿನ್ ಭೇಷ್ ಎನಿಸಿಕೊಂಡಿದ್ದಾರೆ.

  English summary
  Dhanajaya and Rachita Ram starrer Monsoon Raaga promotional song has been released. Take a look
  Saturday, September 10, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X