'ರಾಮಧಾನ್ಯ' ಚಿತ್ರಕ್ಕೆ ಶುಭ ಕೋರಿದ ಧನಂಜಯ್ - ಹರಿಪ್ರಿಯಾ
ನಟ ಯಶಸ್ ಸೂರ್ಯ ಅಭಿನಯದ 'ರಾಮಧಾನ್ಯ' ಸಿನಿಮಾ ನಾಳೆ ರಾಜ್ಯಾದಂತ್ಯ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಈಗ ನಟ ಧನಂಜಯ್ ಹಾಗೂ ಹರಿಪ್ರಿಯಾ ಶುಭ ಕೋರಿದ್ದಾರೆ.
'ರಾಮಧಾನ್ಯ' ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್ ''ಕನಕದಾಸರ ಜೀವನ ಚರಿತ್ರೆಯ ವಿಷಯವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಯಶಸ್ ಸೂರ್ಯ ಎಲ್ಲ ಪಾತ್ರವನ್ನು ತುಂಬ ಚೆನ್ನಾಗಿ ಮಾಡಿದ್ದಾರೆ. ನನಗೆ ಈ ರೀತಿಯ ಸಿನಿಮಾ ಇಷ್ಟ. ನಾನು ಸಿನಿಮಾಗಾಗಿ ಕಾಯುತ್ತಿದ್ದೇನೆ. ಈ ಸಿನಿಮಾವನ್ನು ನೀವು ನೋಡಿ ಇಡೀ ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಡಾಲಿ ವಿಶ್ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ಹರಿಪ್ರಿಯಾ ''ಯಶಸ್ ಸೂರ್ಯ ನನ್ನ ಮೊದಲ ಸಿನಿಮಾದ ಹೀರೋ. ಅವನು ತುಂಬ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದಾನೆ. 'ರಾಮಧಾನ್ಯ' ಸಿನಿಮಾದ ಟ್ರೇಲರ್ ನೋಡಿದೆ ತುಂಬ ಚೆನ್ನಾಗಿದೆ. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಇಡೀ ಟೀಂ ಗೆ ಆಲ್ ದಿ ಬೆಸ್ಟ್'' ಎಂದು ಹರಿಪ್ರಿಯಾ ಶುಭ ಕೋರಿದ್ದಾರೆ.

ಅಂದಹಾಗೆ, ಸಂತ ಕವಿ ಕನಕದಾಸರ ಜೀವನ ಸಾಧನೆ ಆಧಾರಿತ ಸಿನಿಮಾ 'ರಾಮಧಾನ್ಯ' ಚಿತ್ರ ಮೇ 25ಕ್ಕೆ ಬಿಡುಗಡೆಯಾಗಲಿದೆ. ಯಶಸ್ ಸೂರ್ಯ ಹಾಗೂ ನಿಮಿಕಾ ರತ್ನಾಕರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನ ದಶಮುಖ ವೆಂಚರ್ಸ್ ನಿರ್ಮಾಣ ಮಾಡಿದ್ದು ಟಿ ಎನ್ ನಾಗೇಶ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾಗೆ ನಟ ದರ್ಶನ್ ಕಂಠದಾನ ಮಾಡಿದ್ದಾರೆ. 'ರಾಮಧಾನ್ಯ' ಚಿತ್ರ ಶುರುವಾಗುವ ಮೊದಲು ಮತ್ತು ಚಿತ್ರದ ಕೊನೆಯಲ್ಲಿ ಕನಕದಾಸರ ಆಶಯವನ್ನು ಡಿ ಬಾಸ್ ಧ್ವನಿಯಲ್ಲಿ ಕೇಳಬಹುದಾಗಿದೆ.


Click it and Unblock the Notifications











