For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಒಂದು ತಿಂಗಳಿರುವಾಗಲೇ ಥಿಯೇಟರ್‌ನಲ್ಲಿ 'ಮಾನ್ಸೂನ್ ರಾಗ' ಕಟ್ಔಟ್!

  |

  ಡಾಲಿ ಧನಂಜಯ್‌ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್‌ ಇವರಿಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ಬ್ಯುಸಿ ಇರುವ ನಟ-ನಟಿಯರು. ಇವರಿಬ್ಬರೂ ಒಂದೇ ಸಿನಿಮಾ ನಟಿಸದರೆ ಹೇಗಿರುತ್ತೆ ಅಂತ ಯೋಚಿಸುತ್ತಿದ್ದ ಪ್ರೇಕ್ಷಕರಿಗಾಗಿಯೇ 'ಮಾನ್ಸೂನ್ ರಾಗ' ಸೆಟ್ಟೇರಿತ್ತು.

  ಇದೀಗ ಈ ರೇರ್ ಕಾಂಬಿನೇಷನ್ ಸಿನಿಮಾ 'ಮಾನ್ಸೂನ್ ರಾಗ' ಬಿಡುಗಡೆ ಸಜ್ಜಾಗಿ ನಿಂತಿದೆ. ಮುಂದಿನ ತಿಂಗಳು ಆಗಸ್ಟ್ 19ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ನಟಿಸುತ್ತಿದ್ದು, 'ಪುಷ್ಪಕ ವಿಮಾನ' ಸಿನಿಮಾದ ನಿರ್ದೇಶಕ ಎಸ್‌.ರವೀಂದ್ರನಾಥ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈಗ ಬಿಡುಗಡೆಗೆ ಒಂದು ತಿಂಗಳಿರುವಾಗಲೇ ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

  ರಿಲೀಸ್ ತಿಂಗಳಿರುವಾಗಲೇ ಕಟೌಟ್

  'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆಗೆ ಹೆಚ್ಚು ಕಡಿಮೆ ಒಂದು ತಿಂಗಳಿದೆ. ಈ ಬೆನ್ನಲ್ಲೇ ಚಿತ್ರತಂಡ ಪ್ರಚಾರ ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆಯಾಗುತ್ತಿರುವ ಚಿತ್ರಮಂದಿರದ ಮುಂದೆ ಕಟೌಟ್‌ಗಳನ್ನು ಹಾಕಿದೆ. ರಿಲೀಸ್ ಆಗುವ ಬಹುತೇಕ ಚಿತ್ರಮಂದಿರದಲ್ಲಿ ಈ ಸಿನಿಮಾದ ಕಟೌಟ್ ಈಗಾಗಲೇ ಎದ್ದು ನಿಂತಿದೆ.

  ಈ ಮೂಲಕ ಮಾನ್ಸೂನ್ ರಾಗ ತಂಡ ಕಟೌಟ್‌ ವಿಚಾರದಲ್ಲಿ ದಾಖಲೆ ಬರೆಯಲು ಹೊರಟಿದೆ. ಅಲ್ಲದೆ ಹೊಸ ಬಗೆಯ ಸಿನಿಮಾ ಪ್ರಚಾರಕ್ಕೆ ನಾಂದಿ ಹಾಡಿದ್ದು, ರಿಲೀಸ್‌ಗೆ 25 ದಿನ ಇರುವಾಗಲೇ ರಾಜ್ಯದಾದ್ಯಂತ ಥಿಯೇಟರ್ ಕಟೌಟ್ ಕಾಣಿಸಿಕೊಂಡಿದೆ. ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಕಾಂಬಿನೇಷನ್‌ನ ಈ ಸಿನಿಮಾ ಆಗಸ್ಟ್ 19ರಂದು ಸುಮಾರು 25ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

  60-70ರ ದಶಕದ ಸಿನಿಮಾ

  'ಮಾನ್ಸೂನ್ ರಾಗ' ಈಗಿನ ಕಾಲಘಟ್ಟದ ಸಿನಿಮಾ ಅಲ್ಲ. ಇದೊಂದು 60 -70 ರ ದಶಕದ ಕಥೆಯಾಗಿದೆ. ಹೀಗಾಗಿ ಸಿನಿಮಾದ ಲೊಕೇಶನ್‌ನಿಂದ ಹಿಡಿದು ಕಾಸ್ಟ್ಯೂಮ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಸವಾಲಿನ ಸಿನಿಮಾ. ಧನಂಜಯ್ ಹಾಗೂ ಇಬ್ಬರೂ ಇದೂವರೆಗೂ ಮಾಡಿರದೇ ಇರುವಂತಹ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

  Dhananjay And Rachita Ram Starrer Monsoon Raga Cutouts In Theater

  ಇದು ಲವ್ ಸ್ಟೋರಿ ಹಾಗೂ ಆಕ್ಷನ್ ಎರಡನ್ನೂ ಹದವಾಗಿ ಸೇರಿಸಿದ ಸಿನಿಮಾವಿದು. ಕ್ಲಾಸ್ ಹಾಗೂ ಮಾಸ್ ಇರಡು ಪ್ರಕಾರದ ಆಡಿಯನ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಈ ಸಿನಿಮಾದ ವಿಶೇಷತೆ ಅಂದರೆ, ಪ್ರತಿ ಪಾತ್ರದ ಹಿಂದೆನೂ ಒಂದು ಕಥೆ ಇದ್ದು, ಎಲ್ಲವನ್ನೂ ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವುದು ಸವಾಲಿನ ಕೆಲಸವಾಗಿತ್ತಂತೆ.

  ಅನೂಪ್ ಸಿಳೀನ್ ಸಂಗೀತ, ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ, ಅದಕ್ಕೆ ತಕ್ಕಂತಹ ಪಾತ್ರಗಳು ಇವೆಲ್ಲವೂ 'ಮಾನ್ಸೂನ್ ರಾಗ' ಹೈಲೈಟ್. ಈ ಕಾರಣಕ್ಕೆ ಈ ಸಿನಿಮಾವನ್ನು ಒಂದು ತಿಂಗಳ ಮುಂಚೆನೇ ಕಟೌಟ್ ಮೂಲಕ ಪ್ರಚಾರ ಆರಂಭಿಸಿದ್ದಾರೆ.

  English summary
  Dhananjay And Rachita Ram Starrer Monsoon Raga Cutouts In Theater,Know More
  Sunday, July 24, 2022, 0:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X