ಧನಂಜಯ್ ಗೆ 'ರೇಂಜ್ ರೋವರ್' ಕಾರು ಕೊಡಿಸಿದ್ದು ಇವರೇ.!
Recommended Video

'ಡಾಲಿ' ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಧನಂಜಯ್ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ವಿಲನ್ ಗಳನ್ನೂ ಪ್ರೇಕ್ಷಕರು ಇಷ್ಟೊಂದು ಇಷ್ಟಪಡಬಹುದು ಎಂಬುದನ್ನ ಡಾಲಿ ತೋರಿಸಿಕೊಟ್ಟಿದ್ದರು.
ಇದಾದ ಬಳಿಕ ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಚಿತ್ರದಲ್ಲಿ ನಟಿಸಿ ಬಹುಭಾಷೆಯಲ್ಲಿ ಖ್ಯಾತಿಗಳಿಸಿಕೊಂಡರು. ಇದೀಗ, ಧನಂಜಯ್ ಮನೆಗೆ ಹೊಸ ಪಾರ್ಟ್‌ನರ್ ಬಂದಿದೆ.
ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಡ್ತಿರುವ ಧನಂಜಯ್ ಈಗ ಹೊಸ ಕಾರು ಖರೀದಿಸಿದ್ದಾರೆ. ತನ್ನ ಹೊಸ ಕಾರಿಗೆ ಪೂಜೆ ಮಾಡಿಸಿ, ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ.

'ರೇಂಜ್ ರೋವರ್' ಕಾರಿಗೆ ಒಡೆಯ
ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚುತ್ತಿರುವ ಧನಂಜಯ್ ಈಗ ಹೊಸ ಕಾರು ಖರೀದಿಸಿದ್ದಾರೆ. ಕೆಂಪು ಬಣ್ಣದ ರೇಂಜ್ ರೋವರ್ ಕಾರನ್ನ ಸಂಪ್ರದಾಯವಾಗಿ ಡಾಲಿ ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ.

ಅಪ್ಪ ಕೊಡ್ಸಿದ್ದ ಬೈಕ್
ರೇಂಜ್ ರೋವರ್ ಕಾರನ್ನ 'ನೀವು ಕೊಡ್ಸಿದ್ದು' ಎಂದು ಧನಂಜಯ್ ಹೇಳಿದ್ದು, ಈ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ಇದರ ಜೊತೆಗೆ ಅಪ್ಪ ಕೊಡ್ಸಿದ್ದ ಟಿವಿಎಸ್ ಎಕ್ಸ್ ಎಲ್ ಸೂಪರ್ ಬೈಕ್ ಕೂಡ ಧನಂಜಯ್ ಜೊತೆಯಲ್ಲೇ ಇಟ್ಟುಕೊಂಡಿದ್ದು, ಆ ಬೈಕಿಗೂ ಕಾರಿನ ಜೊತೆ ಪೂಜೆ ಮಾಡಲಾಗಿದೆ.

ಚಾಮುಂಡೇಶ್ವರಿ ತಾಯಿಯ ಆಶೀರ್ವಾದ
ಧನಂಜಯ್ ಅವರ ಹೊಸ ಕಾರಿನ ನಂಬರ್ KA 05 TS 8241. ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೊಸ ಕಾರಿಗೆ ಧನಂಜಯ್ ಪೂಜೆ ಮಾಡಿಸಿದ್ದಾರೆ. ಈ ವೇಳೆ ತನ್ನ ಸ್ನೇಹಿತರನ್ನ ಕರೆದುಕೊಂಡು ಹೋಗಿದ್ದು, ಸಖತ್ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ.

ಹೊಸ ಲುಕ್ ನಲ್ಲಿ ಧನಂಜಯ್
ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಧನಂಜಯ್ ನಟಿಸಿದ್ದು, ಈಗ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ನೋಡಿದ್ದ ಧನಂಜಯ್ ಈಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಡಿಫ್ರೆಂಟ್ ಆಗಿದ್ದಾರೆ.


Click it and Unblock the Notifications











