ಲಿಂಗ ಹಾಕ್ಕೊಂಡು ಮಾಂಸ ತಿಂತೀನಿ ಅಂದ್ರೆ ಹೆಂಗೆ? ನೀವು ಇದೇ ತಿನ್ಬೇಕು ಅಂತ ಹೇಳಿದ್ರೆ ಹೇಗೆ?- ಧನಂಜಯ್

ಇತ್ತೀಚೆಗೆ ನಟ ಧನಂಜಯ್ ಮಾಂಸಾಹಾರ ಸೇವಿಸಿದ ವಿಡಿಯೋ ವೈರಲ್ ಆಗಿ ವಿವಾದ ಹುಟ್ಟುಹಾಕಿತ್ತು. ಈ ಬಗ್ಗೆ ಸ್ವತಃ ಧನಂಜಯ್ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ನಾನ್‌ ವೆಜ್ ವಿವಾದದ ಬಗ್ಗೆಯೇ ಮೊದಲ ಪ್ರಶ್ನೆ ಎದುರಾಗಿತ್ತು.

ಸ್ನೇಹಿತರ ನಾನ್‌ ವೆಜ್ ಹೋಟೆಲ್ ಉದ್ಘಾಟನೆ ತೆರಳಿದ್ದಾಗ ಅಲ್ಲಿ ಧನಂಜಯ್ ಬಿರ್ಯಾನಿ ಸೇರಿ ಮಾಂಸಾಹಾರದ ಖಾದ್ಯಗಳನ್ನು ಸವಿದಿದ್ದರು. ಈ ವೀಡಿಯೋ ಪೋಸ್ಟ್ ಮಾಡಿ ಲಿಂಗಾಯತರು ನಾನ್‌ ವೆನ್ ತಿಂತಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತು. ಆಹಾರ ಅವರವರ ಇಷ್ಟ ಎಂದು ಸಾಕಷ್ಟು ಜನ ಧನಂಜಯ್ ಬೆಂಬಲಕ್ಕೆ ನಿಂತಿದ್ದರು.

Dhananjay Breaks Silence on Viral Non-Veg Video Says Food Choice Is Personal Not Religious

ಇನ್ನು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ನಟ ಧನಂಜಯ್ "ಈಗ ಯಾಕೆ ಆ ವೀಡಿಯೋ ವೈರಲ್ ಮಾಡಿದ್ರು ಗೊತ್ತಿಲ್ಲ. ನಾನು ಹೋಟೆಲ್ ಉದ್ಘಾಟನೆಗೆ ಹೋಗಿದ್ದೆ. ಅಲ್ಲಿ ತಿಂದಿದ್ದು. 'ಟಗರು' ಚಿತ್ರದಲ್ಲೇ ಬೇಬಿ ಬಿರಿಯಾನಿ ಎಷ್ಟು ಚೆನ್ನಾಗಿದೆ ಗೊತ್ತಾ ಎನ್ನುವ ಡೈಲಾಗ್ ಇತ್ತು. 'ಪಾಪ್‌ಕಾರ್ನ್ ಮಂಕಿಟೈಗರ್‌'ನಲ್ಲಿ ನಾನು ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಅಂತೀನಿ. ಬಿರಿಯಾನಿ ತಿನ್ನುತ್ತಾ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದೆ. ಆದರೆ ಈಗ ಯಾಕೆ ವೀಡಿಯೋ ವೈರಲ್ ಆಯ್ತು ಹೊತ್ತಿಲ್ಲ. ಒಳ್ಳೆ ಚರ್ಚೆ ಆಯ್ತು. ಧನಂಜಯ್ ಬಿರಿಯಾನಿ ತಿಂತಾರಾ ಅಂದ್ರೆ ಪರವಾಗಿಲ್ಲ, ಲಿಂಗಾಯತರೆಲ್ಲಾ ತಿಂತಾರಾ, ಬ್ರಾಹ್ಮಣರೆಲ್ಲಾ ತಿಂತಾರಾ ಎಂದು ಸಮುದಾಯಗಳನ್ನು ಎಳೆದು ತಂದಿದ್ದು ತಪ್ಪು" ಎಂದು ಅಭಿಪ್ರಾಯಪಟ್ಟಿದ್ದಾರೆ.

ನನ್ನ ವಿರುದ್ಧ ಕೆಲವರನ್ನು ಎತ್ತಿಕಟ್ಟಲು ಹೀಗೆ ವಿವಾದ ಸೃಷ್ಟಿಸಿದ್ರಾ? ಗೊತ್ತಿಲ್ಲ. ಮೊದಲೆಲ್ಲಾ ಈ ಬಗ್ಗೆ ತಲೆ ಕೆಡಿಸಿಕೊಳ್ತಿದ್ದೆ. "ನನ್ನ ಊಟ, ನನ್ನ ತಿಂಡಿ, ನನ್ನ ಚಟ ನನ್ನ ವೈಯಕ್ತಿಕ ಆಯ್ಕೆ. ಬೇರೆ ಯಾರಿಗೂ ತೊಂದರೆ ಕೊಡದೇ ಏನು ಮಾಡಿದ್ರು ಸರಿ ಎನ್ನುತ್ತೇನೆ. ಪಾತ್ರಕ್ಕಾಗಿ ಸಿಗರೇಟ್ ಸೇದುವುದು ಕಲಿತೆ, ಬಳಿಕ ಅದು ಅಭ್ಯಾಸ ಮುಂದುವರೆಸಿದ್ದೆ. ನಂತರ ಬಿಟ್ಟು. ಮದುವೆಗೂ ಮುನ್ನ ಬಿಯರ್ ಬಾಯ್. ಪಾರ್ಟಿ ಮಾಡ್ತಿದ್ದೆ. ಎಲ್ಲ ಇತಿಮಿತಿಯಲ್ಲಿ ಇರಬೇಕು ಎನ್ನುವುದು ನನ್ನ ನಿಯಮ. ಹಾಗಂತ ಎಲ್ಲರೂ ಮಾಡಿ ಎಂದು ನಾನು ಹೇಳಲ್ಲ" ಎಂದಿದ್ದಾರೆ.

ಲಿಂಗ ಧರಿಸಿ ನೀವು ಮಾಂಸಾಹಾರ ಸೇವಿಸಿದ್ರಾ? ಎನ್ನುವ ಪ್ರಶ್ನೆಗೂ ಕೂಡ ಧನಂಜಯ್‌ಗೆ ಎದುರಾಗಿತ್ತು. "ನಾನು ಲಿಂಗ ಧರಿಸುವುದಿಲ್ಲ. ಬಹುತೇಕರು ಮನೆಯಲ್ಲಿ ದೇವರ ಕೋಣೆಯಲ್ಲಿ ಇಟ್ಟಿರುತ್ತಾರೆ. ಕೆಲವರು ನಂಬಿಕೆ ಧರಿಸುತ್ತಾರೆ. ಬೇರೆಯವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಆಗಲ್ಲ, ನಾನು ರೆಬಲ್ ಎಂದು ಲಿಂಗ ಧರಿಸಿ ಮಾಂಸಾಹಾರ ತಿಂತೀನಿ ಅಂದ್ರೆ, ನಮ್ಮ ಮನೆಯವರಿಗೆ ನೋವಾಗುತ್ತದೆ ಅಂದ್ರೆ, ನಾನ್ಯಾಕೆ ಅದನ್ನು ಮಾಡ್ಲಿ?" ಎಂದು ಧನಂಜಯ್ ಪ್ರಶ್ನಿಸಿದ್ದಾರೆ.\

ಸೋಶಿಯಲ್ ಮೀಡಿಯಾದಲ್ಲಿ ಯಾರನ್ನೂ ಟ್ರೋಲ್ ಮಾಡದೇ ಬಿಟ್ಟಿಲ್ಲ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಏನೇನೊ ಹಾಕುತ್ತಾರೆ. ಕೆಲವರಿಗೆ ಸೋಶಿಯಲ್ ಮೀಡಿಯಾದಲ್ಲಿ ಏನು ಬರೆಯುತ್ತಿದ್ದೇವೆ ಎನ್ನುವುದು ಗೊತ್ತಾಗಲ್ಲ. ಬರೆದಿದ್ದನ್ನು ಓದಿ ಅರ್ಥ ಮಾಡಿಕೊಳ್ಳುವ ಮುನ್ನ ಕೆಲವರು ಪೋಸ್ಟ್ ಮಾಡಿಬಿಡುತ್ತಾರೆ. ಫೇಕ್ ಅಕೌಂಟ್ ಎಲ್ಲಾ ಡಿಲೀಟ್ ಆದಾಗ ಇದು ಸ್ವಲ್ಪ ಕಮ್ಮಿ ಆಗಬಹುದು. ಇದು ನಮ್ಮ ಕೈಯಲ್ಲಿ ಇಲ್ಲ ಎಂದು ಧನಂಜಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಟಗರು ಪಲ್ಯ' ಚಿತ್ರದಲ್ಲಿ ನಾನೇ ಹಾಡು ಬರೆದಿದ್ದೀನಿ. ನಾನು ಊಟವನ್ನು ಬಹಳ ಎಂಜಾಯ್ ಮಾಡ್ತೀನಿ. ಪುಳಿಯೋಗರೆ, ಬಿರಿಯಾನಿ ಎಲ್ಲವೂ ಇಷ್ಟ. ಎಲ್ಲವನ್ನು ಇಷ್ಟಪಟ್ಟು ತಿಂತೀನಿ. ಇದು ಬಹಳ ಒಳ್ಳೆಯ ಚರ್ಚೆ. ಇದರಿಂದ ನನಗೆ ಖುಷಿಯಾಗಿದೆ ಎಂದು ಧನಂಜಯ್ ವಿವರಿಸಿದ್ದಾರೆ.

More from Filmibeat

Read more about: dhananjay kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X