twitter
    For Quick Alerts
    ALLOW NOTIFICATIONS  
    For Daily Alerts

    ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್

    |

    ಇಂದು ದೇಶದಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿಯ ಗಣರಾಜ್ಯದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

    ಧನಂಜಯ್ ಸದ್ಯ ರತ್ನನ್ ಪ್ರಪಂಚ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ನಡುವೆಯೂ ಧನಂಜಯ್ ಹಳ್ಳಿಯ ಶಾಲೆಯೊಂದರ ಗಣರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.

    ನಟ ಧನಂಜಯ್ ಹೆಸರಲ್ಲಿ ಮೋಸಕ್ಕೆ ಯತ್ನ: ಎಚ್ಚರವಾಗಿರಿ ಎಂದ ನಟನಟ ಧನಂಜಯ್ ಹೆಸರಲ್ಲಿ ಮೋಸಕ್ಕೆ ಯತ್ನ: ಎಚ್ಚರವಾಗಿರಿ ಎಂದ ನಟ

    ಈ ಸಮಯದಲ್ಲಿ ಮಕ್ಕಳ ಮುಂದೆ ಭಾಷಣ ಮಾಡಿದ ನಟ ಧನಂಜಯ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂವಿಧಾನ ಎಂದರೇನು? ಅಂತ ಸರಳವಾಗಿ ವಿವರಿಸಿದ ಧನಂಜಯ್ ಮಾತಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

    ಗಣರಾಜ್ಯ ಎಂದರೇನು? ಧನಂಜಯ್ ಹೇಳ್ತಾರೆ ಕೇಳಿ

    ಗಣರಾಜ್ಯ ಎಂದರೇನು? ಧನಂಜಯ್ ಹೇಳ್ತಾರೆ ಕೇಳಿ

    'ನಿಮ್ಮ ಜೊತೆ ಗಣರಾಜ್ಯ ದಿವಸ ಆಚರಿಸಿದ್ದು ತುಂಬಾ ಸಂತೋಷವಾಗುತ್ತಿದೆ. ಗಣರಾಜ್ಯ ಎಂದರೆ ತುಂಬಾ ಸರಳವಾಗಿ ಹೇಳಬೇಕು ಎಂದರೆ ಶಾಲೆ ನಡೆಸಲು ಒಂದು ರೀತಿ ನೀತಿ ಇರತ್ತೆ, ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶವಿದೆ. ದೇಶ ನಡೆಸಲು ಒಂದು ರೀತಿ ನೀತಿ ಇರಬೇಕಲ್ವಾ.' ಎಂದಿದ್ದಾರೆ.

    ಅಂಬೇಡ್ಕರ್ ಮತ್ತು ಹಿರಿಯರು ಸೇರಿ ರಚಿಸಿದ ಗ್ರಂಥ

    ಅಂಬೇಡ್ಕರ್ ಮತ್ತು ಹಿರಿಯರು ಸೇರಿ ರಚಿಸಿದ ಗ್ರಂಥ

    'ಅಂಬೇಡ್ಕರ್ ಅಂತ ಹಿರಿಯರು ಎಲ್ಲಾ ಸೇರಿ ದೇಶ ನಡೆಸಲು ಅದ್ಭುತವಾದ ಗ್ರಂಥ ಸಂವಿಧಾನವನ್ನು ರಚಿಸಿದ್ದಾರೆ. ಇದೇ ದೇಶದಲ್ಲಿ ಎಲ್ಲವನ್ನೂ ನೋಡಿ ಬೆಳೆದವರು ಅವರು, ಹಾಗಾಗಿ ಈ ದೇಶ ಅದ್ಭುತವಾಗಿ ನಡೆಸಬೇಕು ಎಂದು ರಚಿಸಿದ್ದಾರೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು.'

    ಮತ್ತೊಂದು ತೆಲುಗು ಸಿನಿಮಾದಲ್ಲಿ ನಟರಾಕ್ಷಸ ಧನಂಜಯ್ಮತ್ತೊಂದು ತೆಲುಗು ಸಿನಿಮಾದಲ್ಲಿ ನಟರಾಕ್ಷಸ ಧನಂಜಯ್

    ಪ್ರಜಾಪ್ರಭುತ್ವ ಎಂದರೇನು?

    ಪ್ರಜಾಪ್ರಭುತ್ವ ಎಂದರೇನು?

    'ಪ್ರಜಾಪ್ರಭುತ್ವ ಎಂದರೆ ಎಲ್ಲರಿಗೂ ಗೊತ್ತಿದೆ. ಇನ್ನು ಸ್ವಲ್ಪ ವರ್ಷದಲ್ಲೇ ನೀವು ಓಟು ಮಾಡುತ್ತೀರಿ. ಆಗ ನಿಮಗೆ ಗೊತ್ತಿರಬೇಕು. ಪ್ರಜಾಪ್ರಭುತ್ವ ಎಂದರೇ ಏನು ಅಂತ. ಪ್ರಜೆ ಎಂದರೆ ಪ್ರಜೆಗಳು ಎಂದರೆ ನಾವು. ಪ್ರಭುತ್ವ ಎಂದರೆ ಆಳ್ವಿಕೆ. ನಾವು ಆಳಬೇಕು ಅಂದರೆ ಅಧಿಕಾರವನ್ನು ಕೊಡುವ ಮೂಲಕ. ನಾವು ಓಟು ಹಾಕುವ ಮೂಲಕ ಅಧಿಕಾರ ಕೊಡುತ್ತೀವಿ. ಆದರೀಗ ಅಧಿಕಾರ ತಗೊತಿದ್ದಾರೆ.

    ದುಡ್ಡು ತೆಗೆದುಕೊಳ್ಳಲ್ಲ ಎಂದು ಶಪಥ ಮಾಡಿ

    'ದುಡ್ಡು ಕೊಟ್ಟು ಓಡು ಕೊಂಡುಕೊಳ್ಳುತ್ತಿದ್ದಾರೆ. ಹಾಗೆ ಮಾಡಿದ್ರೆ ಅಧಿಕಾರಿ ಕೊಟ್ಟಾಗೆ ಆಗಲ್ಲ. ತಗೊಂಡ ಹಾಗೆ ಆಗುತ್ತೆ. ಆಗ ಅವನೇ ರಾಜ ಆಗುತ್ತಾರೆ. ಹಣ ಒಂದು ದಿನಕ್ಕೆ ಆಗುತ್ತೆ ಅಷ್ಟೆ. ಸಮಸ್ಯೆ ಹಾಗೆ ಇರುತ್ತೆ. ಓಟು ಹಾಕುವಾಗ ಯಾವುದೇ ಕಾರಣಕ್ಕೂ ದುಡ್ಡು ತೆಗೆದುಕೊಂಡು ಓಟು ಮಾಡಲ್ಲ ಎಂದು ಶಪಥ ಮಾಡಿ. ಮನೆಯಲ್ಲೂ ಹೋಗಿ ಹೇಳಿ ದುಡ್ಡು ತೆಗೆದುಕೊಳ್ಳಬೇಡಿ ಎಂದು. ದೇಶ ಅಂದರೆ ಜಾಗ ಅಲ್ಲ, ದೇಶ ಎಂದರೆ ಜನ' ಎಂದು ಹೇಳಿದ್ದಾರೆ.

    English summary
    Actor Dhananjay celebrates republic day with School Children at Village.
    Wednesday, January 27, 2021, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X