For Quick Alerts
  ALLOW NOTIFICATIONS  
  For Daily Alerts

  ಪಂಚ ವರ್ಷಗಳ ಕಳೆದು ಪ್ರಚಂಡನಾದ ಧನಂಜಯ

  By Naveen
  |

  ''ಧನಂಜಯ.. ಧನಂಜಯ..ಧನಂಜಯ.. ಧನ ಇದ್ದು ಜಯ ಇಲ್ಲ ಅಂದ್ರೆ ಉಪಯೋಗ ಇಲ್ಲ. ಜಯ ಇದ್ದು ಧನ ಇಲ್ಲ ಅಂದ್ರೂ ಉಪಯೋಗ ಇಲ್ಲ. ಧನ ಮತ್ತು ಜಯ ಎರಡೂ ನಿನಗೆ ನಿರಂತರವಾಗಿ ಇರಲಪ್ಪ'' ಇದು 'ಡೈರೆಕ್ಟರ್ ಸ್ಪೆಷಲ್' ಸಿನಿಮಾದಲ್ಲಿ ನಟ ರಂಗಾಯಣ ರಘು ನಾಯಕನಾದ ಧನಂಜಯ್ ಗೆ ಹೇಳುವ ಡೈಲಾಗ್. ಸಿನಿಮಾದಲ್ಲಿ ಇರುವ ಈ ಡೈಲಾಗ್ ಈಗ ನಿಜ ಆಗಿದೆ.

  ನಟ ಧನಂಜಯ್ ಈಗ ಚಿತ್ರರಂಗದಲ್ಲಿ ಐದು ವರ್ಷವನ್ನು ಪೂರೈಸಿದ್ದಾರೆ. ನಿನ್ನೆಗೆ ಸರಿಯಾಗಿ ಅವರ ಮೊದಲ ಸಿನಿಮಾ 'ಡೈರೆಕ್ಟರ್ ಸ್ಪೆಷಲ್' ಐದು ವರ್ಷವನ್ನು ಕಂಪ್ಲೀಟ್ ಮಾಡಿದೆ. ಧನಂಜಯ್ ಎನ್ನುವ ಹೆಸರಿಗೆ ತಕ್ಕಂತೆ ಈಗ ಧನ ಮತ್ತು ಜಯ ಎರಡು ಧನಂಜಯ್ ಪಾಲಿಗೆ ಇದೆ.

  ತಮ್ಮ ಕೆರಿಯರ್ ನಲ್ಲಿ ಗೆಲುವು ಸೋಲು ಎರಡನ್ನು ಕಂಡಿರುವ ಧನಂಜಯ್ ಗೆದ್ದಾಗ ಹಿಗ್ಗಲಿಲ್ಲ ಸೋತ್ತಾಗ ಕುಗ್ಗಲಿಲ್ಲ. ಪ್ರಯತ್ನ ಪಟ್ಟರು ಅದೇ ರೀತಿ ಗೆದ್ದರೂ. ಇನ್ನು 'ಟಗರು' ಸಿನಿಮಾ ಬರುವವರೆಗೆ ಮಾತ್ರ ಬೇರೆಯವರ ಹವಾ ಆಗಿದ್ದರೆ, 'ಟಗರು' ಬಂದ ಮೇಲೆ ಡಾಲಿದೆ ಹಾವ ಆಗಿದೆ.

  ಒಂದು ಕಡೆ ಐದು ವರ್ಷವಾದ್ರೆ, ಇನ್ನೊಂದು ಕಡೆ 'ಟಗರು' ಸಿನಿಮಾ ಕೂಡ ನಾಳೆಗೆ ನೂರು ದಿನ ಪೂರೈಸಲಿದೆ. ಈ ಚಿತ್ರ ಧನಂಜಯ್ ಗೆ ಒಳ್ಳೆಯ ಹೆಸರು ತಂದು ಕೊಟ್ಟಿದ್ದು, ಮತ್ತೆ ಸೂರಿ ಧನಂಜಯ್ ಕಾಂಬಿನೇಶನ್ ಮುಂದುವರೆದಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಟೈಟಲ್ ಫಿಕ್ಸ್ ಆಗಿದೆ. ಇದರ ಜೊತೆಗೆ ರಾಮ್ ಗೋಪಾಲ್ ವರ್ಮ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.

  English summary
  Kannada Actor Dhananjay completed 5 years in sandalwood. he made his feature film debut in Director's Special in 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X