ಅವಾರ್ಡ್ ತಗೊಂಡು, ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ ಧನಂಜಯ್
Recommended Video

ಮೊನ್ನೆಯಷ್ಟೇ ಅಂಬರೀಶ್ ಮಗ ಅಭಿಷೇಕ್ ಮಂಡ್ಯ ಚುನಾವಣಾ ಪ್ರಚಾರದ ವೇಳೆ ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳನ್ನ ರಂಜಿಸಿದ್ದರು. ಇದೀಗ, ಧನಂಜಯ್ ಕೂಡ ಡಿ ಬಾಸ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದಿರುವುದು ಗಮನ ಸೆಳೆಯುತ್ತಿದೆ.
ಜೀ ಕನ್ನಡ ವಾಹಿನಿ ನೀಡುವ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದಲ್ಲಿ ಡಾಲಿ ಖ್ಯಾತಿಯ ಧನಂಜಯ್ ವರ್ಷದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಒಬ್ಬ ಹೀರೋ ಆಗಿ ಪೋಷಕ ನಟ ಪ್ರಶಸ್ತಿ ಪಡೆದ ಧನಂಜಯ್ ಬಹಳ ಹೆಮ್ಮೆಯಿಂದ ಸ್ವೀಕರಿಸಿದ್ದಾರೆ. ಈ ಬಗ್ಗೆ ತಮ್ಮ ಸಂತಸವನ್ನ ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೇಳುವ ಮೂಲಕ ವ್ಯಕ್ತಪಡಿಸಿದ್ದಾರೆ.

''ಹೀರೋನೂ ನಾನೇ, ವಿಲನ್ನು ನಾನೇ, ಪೋಷಕ ನಟನೂ ನಾನೇ....ಹಂಗೆ ಎಲ್ಲವನ್ನು ಒಪ್ಪಿಕೊಳ್ಳೋಕೆ ಧಮ್ ಬೇಕೋಲೇ'' ಎಂದು ಧನಂಜಯ್ ಜಗ್ಗುದಾದ ಸ್ಟೈಲ್ ನಲ್ಲಿ ಡೈಲಾಗ್ ಹೇಳಿರುವುದು ವಿಶೇಷ.
ಅಂದ್ಹಾಗೆ, ಒಬ್ಬ ಕಲಾವಿದ ಹೀರೋ, ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಳ್ಳುವುದು ಇಂದಿನ ಬೆಳವಣಿಗೆಯಲ್ಲಿ ಬಹಳ ಅಪರೂಪ. ಹೀರೋ ಆಗಿ ಸಕ್ಸಸ್ ಆದ್ರೆ ಹೀರೋ ಆಗಿಯೇ ಮುಂದುವರಿಯುವ ಟ್ರೆಂಡ್ ಇದು. ಅಂತಹದ್ರಲ್ಲಿ ಧನಂಜಯ್ ಹೀರೋ, ಟಗರು ಚಿತ್ರದಲ್ಲಿ ವಿಲನ್, ಯಜಮಾನ ಚಿತ್ರದಲ್ಲಿ ಪೋಷಕ ನಟನಾಗಿ ಅಭಿನಯಿಸಿ ಜನರ ಮನ ಗೆದ್ದಿದ್ದಾರೆ.
ಹೀಗೆ, ಹಲವು ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರನ್ನ ರಂಜಿಸಿದ್ದಕ್ಕೆ ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಿದೆ.


Click it and Unblock the Notifications











