For Quick Alerts
  ALLOW NOTIFICATIONS  
  For Daily Alerts

  'ಪಾಪ್ ಕಾರ್ನ್' ಪೈರಸಿ: ಕೌಂಟರ್ ಕೊಟ್ಟ ಡಾಲಿ ಧನಂಜಯ್

  |

  ಡಾಲಿ ಧನಂಜಯ್ ಅಭಿನಯದ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಶುಕ್ರವಾರವಷ್ಟೆ ತೆರೆಕಂಡಿದೆ. 'ಟಗರು' ಸಿನಿಮಾ ಬಳಿಕ ದುನಿಯಾ ಸೂರಿ ನಿರ್ದೇಶನ ಚಿತ್ರ ಇದಾಗಿದ್ದು, ಧನಂಜಯ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ, ಸಿನಿಮಾ ರಿಲೀಸ್ ಆದ ಒಂದೇ ದಿನದಲ್ಲಿ ಪೈರಸಿಗೆ ಒಳಗಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'

  ಟಗರು ಸಿನಿಮಾದ ಡಾಲಿ ಪಾತ್ರವನ್ನಿಟ್ಟು ಪಾಪ್ ಕಾರ್ನ್ ಮಂಕಿ ಟೈಗರ್ ಕಥೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಒಳ್ಳೆಯ ಅಭಿಪ್ರಾಯ ಮೂಡಿಬಂದಿರುವ ಈ ಸಮಯದಲ್ಲಿ ಸಿನಿಮಾ ಪೈರಸಿಯಾಗಿರುವುದು ಬೇಸರಕ್ಕೆ ಕಾರಣವಾಗಿದೆ.

  ಈ ಕುರಿತು ಡಾಲಿ ಧನಂಜಯ್ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮದೇ ಸ್ಟೈಲ್ ನಲ್ಲಿ ಕೌಂಟರ್ ಕೊಟ್ಟಿದ್ದಾರೆ. ಮುಂದೆ ಓದಿ...

  ಮಂಕಿ ಟೈಗರ್ ಪೈರಸಿ

  ಮಂಕಿ ಟೈಗರ್ ಪೈರಸಿ

  ನಟಸಾರ್ವಭೌಮ, ಯಜಮಾನ, ಪೈಲ್ವಾನ್ ಅಂತಹ ದೊಡ್ಡ ಚಿತ್ರಗಳು ಪೈರಸಿಯಾಗಿತ್ತು. ಇದೀಗ, ಧನಂಜಯ್ ನಟನೆಯ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಪೈರಸಿಯಾಗಿದೆ. ಈ ಕುರಿತು ಧನಂಜಯ್ ಬೇಸರಗೊಂಡಿದ್ದಾರೆ.

  ಯಾರು ಯಾರ ಓಟಾನು ನಿಲ್ಸಕ್ಕಾಗಲ್ಲ

  ಯಾರು ಯಾರ ಓಟಾನು ನಿಲ್ಸಕ್ಕಾಗಲ್ಲ

  ''ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ರು, ಎಂತ ಪಾತ್ರಗಳನ್ನ ಜೀವಿಸಿದರು..! ಅದ್ಭುತ, ಅಮೋಘ, ಜೈ ಕರ್ನಾಟಕ ಮಾತೆ. ನಿಮ್ಮಂತವರು ಬೇಕು ಇಲ್ಲಾಂದ್ರೆ ಬೇಗ life bore ಆಗಿಬಿಡತ್ತೆ. ಇದರ ಮಧ್ಯ houseful shows ಕೊಡ್ತ ಇರೋದು ನಿಜ. ಸಿನಿಮಾ ಪ್ರೇಮಿಗಳಿಗೆ ನನ್ನ ಕೃತಜ್ಞತೆ. ಯಾರು ಯಾರ ಓಟಾನು ನಿಲ್ಸಕ್ಕಾಗಲ್ಲ'' ಎಂದು ಡಾಲಿ ಟ್ವೀಟ್ ಮಾಡಿದ್ದಾರೆ.

  ಡಾಲಿ ಬೆಂಬಲಕ್ಕೆ ನಿಂತ ಫ್ಯಾನ್ಸ್

  ಡಾಲಿ ಬೆಂಬಲಕ್ಕೆ ನಿಂತ ಫ್ಯಾನ್ಸ್

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಪೈರಸಿ ವಿಚಾರದಲ್ಲಿ ಧನಂಜಯ್ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ. ಡಾಲಿ ಟ್ವೀಟ್ ಗೆ ಅಭಿಮಾನಿಗಳು ಬೆಂಬಲ ನೀಡುತ್ತಿದ್ದು, ''ನಾವು ಥಿಯೇಟರ್ ನಲ್ಲೇ ಸಿನಿಮಾ ನೋಡೋದು. ಇದರ ಬಗ್ಗೆ ಯೋಚಿಸಬೇಡಿ'' ಎಂದು ಸಪೋರ್ಟ್ ಮಾಡ್ತಿದ್ದಾರೆ.

  ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!

  ಮೊದಲ ದಿನದ ಗಳಿಕೆ ಎಷ್ಟು?

  ಮೊದಲ ದಿನದ ಗಳಿಕೆ ಎಷ್ಟು?

  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಮೊದಲ ದಿನ 2.53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

  English summary
  Kannada actor Dhananjay express displeasure against popcorn monkey tiger movie piracy. movie released on friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X