For Quick Alerts
  ALLOW NOTIFICATIONS  
  For Daily Alerts

  ತನ್ನ ಆಸೆಗೆ ಜೊತೆಯಾಗಿ ನಿಂತ ನೂರು ಕಾರ್ಮಿಕರಿಗೆ ಉಡುಗೊರೆ ನೀಡಿದ ಧನಂಜಯ್

  |

  'ಟಗರು' ಚಿತ್ರದ ನಂತರ ಧನಂಜಯ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸತತ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿರುವ ಧನಂಜಯ್, ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.

  ಈ ಮಧ್ಯೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸಹ ಆರಂಭಿಸಿದ್ದು, ಚೊಚ್ಚಲ ಚಿತ್ರದ ಶೂಟಿಂಗ್ ಸಹ ಮುಗಿಸಿದ್ದಾರೆ. 'ಬಡವ ರಾಸ್ಕಲ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ.

  'ಪ್ರೀತಿಯ ಸುಬ್ಬಿ'ಗೆ ನೋವಿನಿಂದ ವಿದಾಯ ಹೇಳಿದ 'ಡಾಲಿ'

  ಇತ್ತೀಚಿಗಷ್ಟೆ ಬಡವ ರಾಸ್ಕಲ್ ಸಿನಿಮಾ ಶೂಟಿಂಗ್ ಮುಗಿದಿದೆ. ಚೊಚ್ಚಲ ನಿರ್ಮಾಣದ ಸಿನಿಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಡಾಲಿ ಜೊತೆ ಕೈ ಜೋಡಿಸಿದ ಇಡೀ ತಂಡಕ್ಕೆ ಧನಂಜಯ್ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಧನಂಜಯ್ ಅವರ ಈ ಕೆಲಸ ಈಗ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿದೆ. ಮುಂದೆ ಓದಿ....

  ಕಾರ್ಮಿಕರಿಗೆ ಉಡುಗೊರೆ ನೀಡಿದ ಧನಂಜಯ್

  ಕಾರ್ಮಿಕರಿಗೆ ಉಡುಗೊರೆ ನೀಡಿದ ಧನಂಜಯ್

  'ಬಡವ ರಾಸ್ಕಲ್' ಸಿನಿಮಾ ಯಶಸ್ವಿಯಾಗಿ ಚಿತ್ರೀಕರಣ ಮಾಡಲು ಜೊತೆಯಲ್ಲಿ ನಿಂತು ಕೆಲಸ ಮಾಡಿದ ಕಾರ್ಮಿಕರಿಗೆ ನಿರ್ಮಾಪಕ ಧನಂಜಯ್ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.

  ಬಡವ ರಾಸ್ಕಲ್ ಚಿತ್ರೀಕರಣ ಮುಕ್ತಾಯ

  ಬಡವ ರಾಸ್ಕಲ್ ಚಿತ್ರೀಕರಣ ಮುಕ್ತಾಯ

  ಕಳೆದ ಅಕ್ಟೋಬರ್ ತಿಂಗಳಲ್ಲಿ ಬಡವ ರಾಸ್ಕಲ್ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ನಂತರ ಕೊರೊನಾ ಲಾಕ್‌ಡೌನ್ ಕಾರಣದಿಂದ ಕೆಲಸ ನಿಂತಿತ್ತು. ಇದೀಗ, ಮತ್ತೆ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದೆ.

  'ನಂಗೆ ಹಿಂದಿ ಗೊತ್ತಿಲ್ಲ ಹೋಗ್ರೋ': ಕನ್ನಡ ಸ್ವಾಭಿಮಾನ ಪ್ರದರ್ಶಿಸಿದ ನಟರು

  ಶಂಕರ್ ಗುರು ನಿರ್ದೇಶನ

  ಶಂಕರ್ ಗುರು ನಿರ್ದೇಶನ

  ಧನಂಜಯ್ ನಿರ್ಮಾಣದ ಮೊದಲ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದಾರೆ. ಅಮೃತಾ ಅಯ್ಯಂಗರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದು, ಪ್ರೀತಾ ಜಯರಾಂ ಅವರ ಛಾಯಾಗ್ರಹಣ ಇದೆ.

  ಸೀತಾ ವಲ್ಲಭ ಧಾರಾವಾಹಿ ಸುಪ್ರಿತಾಗೆ ಒಲಿದು ಬಂದ ಅದೃಷ್ಟ | Filmibeat Kannada
  ದೊಡ್ಡ ಚಿತ್ರಗಳಲ್ಲಿ ಧನಂಜಯ್

  ದೊಡ್ಡ ಚಿತ್ರಗಳಲ್ಲಿ ಧನಂಜಯ್

  ಪುನೀತ್ ರಾಜ್ ಕುಮಾರ್ ನಟನೆ ಯುವರತ್ನ, ದುನಿಯಾ ವಿಜಯ್ ನಟನೆಯ ಸಲಗ, ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾಗಳಲ್ಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ರೋಹಿತ್ ಪದಕಿ ನಿರ್ದೇಶನದ ರತ್ನನ್ ಪರಪಂಚ, ಡಾನ್ ಜಯರಾಜ್ ಜೀವನಕಥೆ ಹೆಡ್‌ಬುಷ್ ಸಿನಿಮಾದಲ್ಲು ಅಭಿನಯಿಸುತ್ತಿದ್ದಾರೆ.

  English summary
  Kannada actor Dhananjay Gifts Home Appliances to Badava Rascal Movie Cast and Crew. this movie produced by Dhananjay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X