'ಜಯರಾಜ್' ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದ ಧನಂಜಯ
ದುನಿಯಾ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದು, ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ.
'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಬಿಡುಗಡೆಗೂ ಮುಂಚೆಯೇ ಧನಂಜಯ್ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಬೆಂಗಳೂರು ಮಾಜಿ ಡಾನ್ ಜಯರಾಜ್ ಅವರ ಬಯೋಪಿಕ್ ಸಿನಿಮಾ ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಧನಂಜಯ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಜಯರಾಜ್ ಚಿತ್ರಕ್ಕಾಗಿ ಧನಂಜಯ್ ದೊಡ್ಡ ಸಂಭಾವನೆ ಪಡೆದುಕೊಂಡಿದ್ದು, ಡಾಲಿ ವೃತ್ತಿ ಜೀವನದಲ್ಲೇ ಇದೇ ಜಾಸ್ತಿ ಅಂತೆ. ಅಷ್ಟಕ್ಕೂ, ಈ ಚಿತ್ರ ನಿರ್ಮಾಣ ಯಾರದ್ದು? ಕಥೆ ಯಾರದ್ದು? ಮುಂದೆ ಓದಿ....

ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ
'ಆ ದಿನಗಳು' ಸಿನಿಮಾದಲ್ಲಿ ಡಾನ್ ಜಯರಾಜ್ ಅವರ ಕಥೆ ತೋರಿಸಲಾಗಿತ್ತು. ಆದರೆ, ಸಂಪೂರ್ಣವಾಗಿ ಜಯರಾಜ್ ಕಥೆ ಹೇಳಿರಲಿಲ್ಲ. ಇದೀಗ, ಜಯರಾಜ್ ಜೀವನವನ್ನೇ ಕಥೆಯನ್ನಾಗಿಸಿ ಸಿನಿಮಾ ಮಾಡಲು ಗಾಂಧಿನಗರ ಮುಂದಾಗಿದ್ದು, ಈ ಪಾತ್ರಕ್ಕೆ ಧನಂಜಯ್ ಆಯ್ಕೆಯಾಗಿದ್ದಾರೆ. ಫೆಬ್ರವರಿ 17 ರಂದು ಅಧಿಕೃತವಾಗಿ ಈ ಚಿತ್ರ ಸೆಟ್ಟೇರಿದೆ.

ಅಗ್ನಿ ಶ್ರೀಧರ್ ಕಥೆ
ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಈ ಹಿಂದೆ 'ಎದೆಗಾರಿಕೆ' ಮತ್ತು 'ಆ ದಿನಗಳು' ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ಈ ಕುರಿತು ಸುದ್ದಿಗೋಷ್ಠಿ ಮಾಡಿದ ಅಗ್ನಿ ಶ್ರೀಧರ್, ಧನಂಜಯ್ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಅಶುಬೇದ್ರ ಈ ಸಿನಿಮಾ ನಿರ್ಮಾಣ ಮಾಡಿದ್ದು, ಹೊಸ ಪ್ರತಿಭೆ ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ.

ಪಂಚ ಭಾಷೆಯಲ್ಲಿ ಜಯರಾಜ್
ಸದ್ಯಕ್ಕೆ ಅಧಿಕೃತವಾಗಿ ಶೀರ್ಷಿಕೆ ಪಕ್ಕಾ ಆಗಿಲ್ಲ. ಜಯರಾಜ್ ಎಂದು ಹೆಸರಿಟ್ಟು ಸಿನಿಮಾ ಆರಂಭಿಸಲಾಗಿದೆ. ಪಂಚಭಾಷೆಯಲ್ಲಿ ಈ ಸಿನಿಮಾ ತೆರೆಗೆ ತರಲು ನಿರ್ಧರಿಸಲಾಗಿದೆ. ಈ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಧನಂಜಯ್ ಮಿಂಚಲಿದ್ದಾರೆ.

ದೊಡ್ಡ ಸಂಭಾವನೆ
ಟಗರು ಸಿನಿಮಾ ಬಳಿಕ ಕ್ರೇಜ್ ಹೆಚ್ಚಿಸಿಕೊಂಡಿರುವ ಧನಂಜಯ್ ಈಗ ಬೇಡಿಕೆಯ ನಟ. ಜಯರಾಜ್ ಚಿತ್ರಕ್ಕಾಗಿ ಅತಿ ದೊಡ್ಡ ಸಂಭಾವನೆ (ವೃತ್ತಿ ಜೀವನದಲ್ಲೇ ಇದು ದೊಡ್ಡ ಸಂಭಾವನೆ) ಪಡೆದುಕೊಂಡಿದ್ದಾರಂತೆ. ನಿಖರವಾಗಿ ಸಂಭಾವನೆ ಲೆಕ್ಕಾಚಾರ ಹೇಳಿಲ್ಲ. ಆದರೆ, ವೃತ್ತಿ ಜೀವನದಲ್ಲೇ ದೊಡ್ಡ ಮೊತ್ತ ಎಂದಿದ್ದಾರೆ.


Click it and Unblock the Notifications











