ರಶ್ಮಿಕಾ ಹಾಡಿನ ಮೇಲೆ ಧನಂಜಯ್ ಗೆ ಲವ್ ಆಗಿದೆ

By Bharath Kumar

Recommended Video

ಡಾಲಿಗೆ ಇದರ ಮೇಲೆ ಲವ್ ಆಗಿದ್ಯಂತೆ..!! | Dolly Dhananjay is in love..! | Filmibeat Kannada

ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ್ ಸದ್ಯ ರಾಮ್ ಗೋಪಾಲ್ ವರ್ಮಾ ಬ್ಯಾನರ್ ನಲ್ಲಿ ಮೂಡಿ ಬರ್ತಿರುವ 'ಬೈರವಗೀತಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಧನಂಜಯ್ ಗೆ ಒಂದು ಹಾಡಿನ ಮೇಲೆ ಲವ್ ಆಗಿದೆ.

ಅದು 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ ಹಾಡಿನ ಮೇಲೆ ಎಂಬುದು ವಿಶೇಷ. ಹೌದು, ರಶ್ಮಿಕಾ ಅಭಿನಯದ ತೆಲುಗು ಸಿನಿಮಾದ ಹಾಡು ಧನಂಜಯ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ.

ಹೀಗಂತಾ ಸ್ವತಃ ಧನಂಜಯ್ ಅವರೇ ರಶ್ಮಿಕಾ ಬಳಿ ಹೇಳಿಕೊಂಡಿದ್ದು, ''ಈ ಹಾಡನ್ನ ಕೇಳುತ್ತಿದ್ದರೇ ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ, ಯಾವುದು ಆ ಹಾಡು ಅಂತ ಯೋಚನೆ ಮಾಡ್ತಿದ್ದೀರಾ. ಅದು ವಿಜಯ್ ದೇವರಕೊಂಡ ಅಭಿನಯದ 'ಗೀತಾ ಗೋವಿಂದಂ' ಹಾಡು.

dhananjay likes rashmika mandannas telugu song

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಗೀತಾ ಗೋವಿಂದಂ' ಸಿನಿಮಾದ ಈ ಹಾಡು ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ. ಭಾಷೆಯ ಗಡಿಯಿಲ್ಲದೇ ಎಲ್ಲ ಚಿತ್ರರಸಿಕರು ಈ ಹಾಡನ್ನ ಇಷ್ಟಪಟ್ಟಿದ್ದಾರೆ. ಇದುವರೆಗೂ ಈ ಹಾಡನ್ನ 17.3 ಮಿಲಿಯನ್ ವೀಕ್ಷಕರು ನೋಡಿದ್ದಾರೆ.

ತೆಲುಗು ಚಿತ್ರದ ಅಭಿಮಾನಿಗಳಂತೆ ಸ್ಯಾಂಡಲ್ ವುಡ್ ಮಂದಿಗೂ ಈ ಹಾಡು ಇಷ್ಟವಾಗಿದೆ. ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪರುಶರಾಮ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ, ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಎಲ್ಲ ಮನಮುಟ್ಟಿದೆ ಈ ಹಾಡು.

ಅಂದ್ಹಾಗೆ, ಇದು ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ತೆಲುಗು ಸಿನಿಮಾ. ಆಗಸ್ಟ್ 15 ರಂದು ಗೀತಾ ಗೋವಿಂದಂ ಬಿಡುಗಡೆಯಾಗುತ್ತಿದೆ. ಇತ್ತ ಕನ್ನಡದಲ್ಲಿ ದರ್ಶನ್ ಜೊತೆ 'ಯಜಮಾನ' ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Kannada actor dhananjay likes rashmika mandanna's 'inkem Inkem Inkem Kaavaale' telugu song from 'geetha govindam' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X