'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಟ ಧನಂಜಯ್ ಪಾತ್ರ ಬಹಿರಂಗ
ಡಾಲಿ ಖ್ಯಾತಿಯ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿರುವ ಧನಂಜಯ್ ಇದೀಗ 'ರತ್ನನ್ ಪ್ರಪಂಚ' ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. 'ಬಡವ ರಾಸ್ಕಲ್' ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ರತ್ನನ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಈಗಾಗಲೇ ನಟ ಧನಂಜಯ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿ ನಟ ಧನಂಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದೆ. ಹೌದು, ಚಿತ್ರದಲ್ಲಿ ನಟ ಧನಂಜಯ್ ಇನ್ಶೂರೆನ್ಸ್ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

ಇನ್ಶೂರೆನ್ಸ್ ಏಜೆಂಟ್ ರತ್ನಾಕರ
ಮಧ್ಯಮ ವರ್ಗದ ಸಾಮಾನ್ಯ ವ್ಯಕ್ತಿ ರತ್ನಾಕರ ಎನ್ನುವ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಕೆಲಸ ಮಾಡುವ ಇನ್ಶೂರೆನ್ಸ್ ಏಜೆಂಟ್ ಆಗಿ ತನ್ನ ಕುಟುಂಬ ಸಾಗಿಸುವ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. ವಿಶೇಷ ಎಂದರೆ ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ ಧನಂಜಯ್ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗ್ಯಾಪ್ ನ ಬಳಿಕ ಉಮಾಶ್ರೀ ರತ್ನನ್ ಪ್ರಪಂಚ ಸಿನಿಮಾ ಮೂಲಕ ನಟಿ ಉಮಾಶ್ರೀ ವಾಪಸ್ ಆಗಿದ್ದಾರೆ.

ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ
ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಸಿನಿಮಾತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದೆ. ಬಳಿಕ ಗದಗ್ ಮತ್ತು ಕಶ್ಮೀರದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದೆ. ಅಂದ್ಹಾಗೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.

ರೆಬಾ ಮೋನಿಕಾ ನಾಯಕಿ
ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದಹಾಗೆ ಚಿತ್ರದಲ್ಲಿ ನಟ ಧನಂಜಯ್ ಗೆ ಜೋಡಿಯಾಗಿ ರೆಬಾ ಮೋನಿಕಾ ಜಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಮತ್ತು ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ರೆಬಾ ಮೋನಿಕಾ, ಧನಂಜಯ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
Recommended Video

ಧನಂಜಯ್ ಬಳಿ ಇರುವ ಸಿನಿಮಾಗಳು
ಧನಂಜಯ್ ಕೊನೆಯದಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧನಂಜಯ್ ನಾಯಕ ಮತ್ತು ವಿಲನ್ ಪಾತ್ರ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಧನಂಜಯ್ ಸಲಗ, ಪೊಗರು, ಯುವರತ್ನ, ಡಾಲಿ, ತೋತಾಪುರಿ, ಬಡವ ರಾಸ್ಕಲ್, ಹೆಡ್ ಬುಷ್ ಮತ್ತು ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಇನ್ನೂ ಹೆಸರಿಡದ ಸಾಕಷ್ಟು ಸಿನಿಮಾಗಳು ಧನಂಜಯ್ ಬಳಿ ಇವೆ.


Click it and Unblock the Notifications











