ಎಲ್ಲೆಲ್ಲೂ ಕಾಣ್ತಿದೆ ಡಾಲಿ ಧನಂಜಯ್ ಬರೆದ ಕವನ
ಡಾಲಿ ಖ್ಯಾತಿಯ ಧನಂಜಯ್ ಒಬ್ಬ ಉತ್ತಮ ನಟ. ಲವರ್ ಬಾಯ್ ಆಗಿ, ಮಾಸ್ ಹೀರೋ ಆಗಿ, ಕ್ರೂರಿ ಆಗಿ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಧನಂಜಯ್ ಓರ್ವ ನಟ ಎನಿಸಿಕೊಂಡಿದ್ದರೂ ಅವರಲ್ಲೊಬ್ಬ ಬರಹಗಾರ ಇದ್ದಾನೆ ಎಂಬುದು ಅನೇಕರಿಗೆ ಗೊತ್ತಿಲ್ಲ.
ಧನಂಜಯ್ ಉತ್ತಮ ಬರಹಗಾರ ಕೂಡ ಹೌದು. ಕವನಗಳನ್ನು ಬರೆಯುತ್ತಾರೆ. ಚಿತ್ರಗೀತೆಯೂ ರಚಿಸುತ್ತಾರೆ. ಹರಿಪ್ರಿಯಾ ನಟಿಸಿದ್ದ ಡಾಟರ್ ಆಫ್ ಪಾರ್ವತಮ್ಮ ಸಿನಿಮಾದಲ್ಲಿ ಧನಂಜಯ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹೀಗೆ, ಡಾಲಿ ಆಗಿ ಕ್ರೇಜ್ ಹುಟ್ಟಿಸಿದ್ದ ಧನಂಜಯ್ ಈಗ ತಮ್ಮ ಬರವಣಿಗೆಯ ಮೂಲಕ ಸದ್ದು ಮಾಡ್ತಿದ್ದಾರೆ.
ಧನಂಜಯ್ ಅವರು ಹೇಳಿದ ಕವನವೊಂದು ಈಗ ಎಲ್ಲ ಕಡೆಯೂ ಟ್ರೆಂಡ್ ಆಗ್ತಿದೆ. ಧನಂಜಯ್ ಅವರ ಕವನವನ್ನು ಅಭಿಮಾನಿಗಳು ತಮ್ಮ ಕಾರು, ಬೈಕ್ ಹಾಗೂ ವಾಹನಗಳ ಮೇಲೆ ಬರೆಸಿಕೊಂಡಿದ್ದಾರೆ.

''ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ....!!
ಎಂತೆಂಥ ಪ್ರಶ್ನೆಗಳಿನಿಟ್ಟೆ? ಎಂತೆಂಥ ಪೋಷಾಕು ತೊಟ್ಟೆ?
ಉದ್ದಗಲಕ್ಕೂ ಮಿತಿಗಳನ್ನೇ ಇಟ್ಟು ಮಿತಿಮಿರಲು
ಒಮ್ಮೊಮ್ಮೆ ಅನುಭವಿಸು ಎಂದು ಮೌನವಾಗಿಯೇ ಉಳಿದಬಿಟ್ಟೆ.
ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ....!!
ಏನೇನೆಲ್ಲಾ ಗಳಿಸಿಕೊಟ್ಟೆ. ಏನೇನೆಲ್ಲಾ ಕಳೆದುಬಿಟ್ಟೆ.
ಏನೇನೆಲ್ಲಾ ಕಲಿಸಿ. ಏನೇನೆಲ್ಲಾ ಮರೆಸಿ
ಸುಖ ದುಖ ನಿನ್ನದು ಎಂದು ನೀನು ಮೌನವಾಗಿಬಿಟ್ಟೆ.
ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ..!!
ಈ ಸಾಲುಗಳು ಈಗ ಟ್ರೆಂಡ್ ಆಗ್ತಿದೆ. ಕಾರು, ಆಟೋ, ಇನ್ನಿತರ ವಾಹನಗಳ ಮೇಲೆ ಈ ಸಾಲುಗಳನ್ನು ನೋಡಬಹುದು. ಇದು ಧನಂಜಯ್ ಅವರು ಹೇಳಿದ ಸಾಲು ಎನ್ನುವುದು ವಿಶೇಷ. ಇಂತಹದ್ದೇ ಒಂದು ಫೋಟೋವನ್ನು ಸ್ವತಃ ಧನಂಜಯ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಧನಂಜಯ್ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪೊಗರು, ಯುವರತ್ನ ಹಾಗೂ ಸಲಗ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ, ಬಡವ ರಾಸ್ಕಲ್ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.


Click it and Unblock the Notifications











