ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಕೊಟ್ಟ ಧನಂಜಯ್: ಒಂದು ರೂಪಾಯಿಗೆ ಸಿನಿಮಾ ಟಿಕೆಟ್ ಮಾರಾಟ

ಪೂರ್ಣಚಂದ್ರ ತೇಜಸ್ವಿ ಬರೆದ 'ಡೇರ್‌ಡೆವಿಲ್ ಮುಸ್ತಾಫಾ' ಸಣ್ಣ ಕಥೆ ಆಧರಿಸಿ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಚಿತ್ರತಂಡದ ಬೆಂಬಲಕ್ಕೆ ನಟ ಧನಂಜಯ್ ನಿಂತಿದ್ದಾರೆ. ಧನು ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್ ಮೂಲಕ ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಶುಕ್ರಚಾರ ಸಿನಿಮಾ ಬಿಡುಗಡೆ ಆಗಲಿದೆ. ಗುರುವಾರವೇ ಪ್ರೀಮಿಯರ್‌ ಶೋ ಆರಂಭವಾಗಲಿದೆ.

ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ಸೇರಿ 'ಡೇರ್‌ಡೆವಿಲ್ ಮುಸ್ತಾಫಾ' ಸಿನಿಮಾ ನಿರ್ಮಾಣ ಮಾಡಿದ್ದಾರೆ. 100 ಮಂದಿ ಅಭಿಮಾನಿಗಳು ಹಣ ಹಾಕಿದ್ದಾರೆ. ಇಂತಾದೊಂದು ಪ್ರಯತ್ನ ಇದೇ ಮೊದಲ ಬಾರಿಗೆ ನಡೀತಿದೆ. ನಿರ್ದೇಶಕ ಶಶಾಂಕ್ ಸೊಗ್ಗಾಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೀಸರ್, ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಕೆಲ ದಿನಗಳ ಹಿಂದೆ ಧನಂಜಯ ಚಿತ್ರದ ಬೆಂಬಲಕ್ಕೆ ನಿಂತಿರುವ ವಿಚಾರ ತಿಳಿಸಲು ಮಾಡಿದ್ದ ಫನ್ನಿ ವಿಡಿಯೋ ವೈರಲ್ ಆಗಿತ್ತು.

Dhananjay presented Daredevil Musthafa Premiere Show Ticket Priced at Rs 1

'ಡೇರ್‌ಡೆವಿಲ್ ಮುಸ್ತಾಫಾ' ಚಿತ್ರದ ಪ್ರೀಮಿಯರ್ ಶೋ ಟಿಕೆಟ್ ಬಲೆ ಕೇವಲ ಒಂದು ರೂಪಾಯಿ ಎಂದು ಚಿತ್ರತಂಡ ಘೋಷಿಸಿದೆ. ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ, ರೂಪಾಯಿ ಒಂದೇ ಸಿನಿಮಾ ಕಣ್ಮುಂದೆ, ನಂಬಿದ್ರೆ ನಂಬಿ. 'ಡೇರ್‌ಡೆವಿಲ್ ಮುಸ್ತಾಫಾ' ಪ್ರೀಮಿಯರ್ ಶೋ ಟಿಕೆಟ್ ಕೇವಲ ಒಂದು ರೂಪಾಯಿಗೆ ಎಂದು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳ ಟಿಕೆಟ್ಸ್ ಹಾಟ್ ಕೇಕ್ ರೀತಿ ಸೇಲಾಗುತ್ತಿದೆ.

ಬೆಂಗಳೂರು ಒರಾಯನ್ ಮಾಲ್, ಮೈಸೂರು ಡಿಸಿಆರ್‌ ಹಾಗೂ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಗುರುವಾರ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಆದಿತ್ಯಾ ಆಶ್ರೀ, ಅಭಯ್, ಸುಪ್ರೀತ್ ಭಾರಧ್ವಜ್, ಆಶಿತ್ ಶ್ರೀವತ್ಸ, ಪ್ರೇರಣಾ, ಎಂ. ಎಸ್ ಉಮೇಶ್, ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ನವನೀಶ್ ಶ್ಯಾಮ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ 'ಡೇರ್‌ಡೆವಿಲ್ ಮುಸ್ತಾಫಾ' ಚಿತ್ರಕ್ಕಿದೆ.

ಚುನಾವಣೆ ಭರಾಟೆಯ ನಡುವೆ ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಚುನಾವಣೆ ಮುಗಿದ ಬಳಿಕ ಬರುತ್ತಿರುವ ಸಿನಿಮಾಗಳಲ್ಲಿ 'ಡೇರ್‌ಡೆವಿಲ್ ಮುಸ್ತಾಫಾ' ಕೊಂಚ ನಿರೀಕ್ಷೆ ಮೂಡಿಸಿದೆ. ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳಲ್ಲಿ ನಟ ಧನಂಜಯ್ ಕೂಡ ಒಬ್ಬರು. ಹಾಗಾಗಿ ಈ ತಂಡದ ಜೊತೆ ಅವರು ನಿಂತಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಓದುಗರೇ ಸೇರಿ ಈ ಸಿನಿಮಾ ನಿರ್ಮಾಣ ಮಾಡಿರೋದು ವಿಶೇಷ.

Dhananjay presented Daredevil Musthafa Premiere Show Ticket Priced at Rs 1

ಹೊಸಬರ ತಂಡ 'ಡೇರ್‌ಡೆವಿಲ್ ಮುಸ್ತಾಫಾ' ಚಿತ್ರವನ್ನು ಕಟ್ಟಿಕೊಟ್ಟಿದೆ. ಈ ಹಿಂದೆ 'ಫಟಿಂಗ' ಎನ್ನುವ ಶಾರ್ಟ್‌ ಮೂವಿ ಮಾಡಿದ್ದ ಶಶಾಂಕ್ ಸೋಗಾಲ್ ಈ ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಬಹಳ ಹಿಂದೆ 'ನಿನ್ನಂಥೋರ್ ಯಾರೂ ಇಲ್ವಲ್ಲೊ' ಎನ್ನುವ ಒಂದು ಪ್ರಮೋಷನಲ್ ಸಾಂಗ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಅಣ್ಣಾವ್ರ ಆನಿಮೇಷನ್ ಮೂಲಕ ಹಾಡು ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡಿಗೆ ದನಿಯಾಗಿದ್ದರು.

ಸದ್ಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಒಂದು ರೂಪಾಯಿಗೆ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡುವ ಸಾಹಸಕ್ಕೆ ಕೈ ಹಾಕಿದೆ ಚಿತ್ರತಂಡ. ಶಿವಮೊಗ್ಗದ ಭಾರತಿ ಸಿನಿಮಾಸ್‌ನಲ್ಲಿ ಈಗಾಗಲೇ ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್‌ಔಟ್ ಆಗೋಗಿದೆ. ಬೆಂಗಳೂರು, ಮೈಸೂರಿನಲ್ಲಿ ಬುಕ್ಕಿಂಗ್ ಆರಂಭ ಆಗಬೇಕಿದೆ.

More from Filmibeat

English summary
Dhananjay presented Daredevil Musthafa Premiere Show Ticket Priced at Rs 1. based on Poornachandra Tejaswi's short story crowdfunded film schedule Release May 19th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X