ಧನಂಜಯ್ ರೇಂಜ್ ರೋವರ್ ಕಾರ್ ನಂಬರ್ ನಲ್ಲೊಂದು ವಿಶೇಷ
ನಟ ಧನಂಜಯ್ ಕೆಲ ತಿಂಗಳುಗಳ ಹಿಂದೆ ರೇಂಜ್ ರೋವರ್ ಕಾರ್ ಕೊಂಡುಕೊಂಡಿದ್ದರು. ಈ ಕಾರ್ 'ನೀವೇ ನನಗೆ ಕೊಡಿಸಿದ್ದು' ಎಂದು ತಾನು ಕಾರ್ ಖರೀದಿ ಮಾಡಲು ಅಭಿಮಾನಿಗಳೇ ಕಾರಣ ಎಂದಿದ್ದರು.

ಸ್ಟಾರ್ ಗಳ ಕಾರ್ ಎಷ್ಟು ವಿಶೇಷವಾಗಿರುತ್ತದೆಯೋ, ಅದೇ ರೀತಿ ಅದರ ನಂಬರ್ ಕೂಡ ಡಿಫರೆಂಟ್ ಆಗಿರುತ್ತದೆ. ದೊಡ್ಡ ಸ್ಟಾರ್ ಗಳು ಕಾರಿಗೆ ಮೇಲೆ ಫ್ಯಾಸ್ಸಿ ನಂಬರ್ ಹಾಕಿಸಿಕೊಳ್ಳುತ್ತಾರೆ. ಈಗ ಧನಂಜಯ್ ಕಾರ್ ನಂಬರ್ ಸಹ ಗಮನ ಸೆಳೆಯುತ್ತಿದೆ.
KA 51 AD 5 ಇದು ಧನಂಜಯ್ ಕಾರ್ ನಂಬರ್. ಇಲ್ಲಿ AD ಎನ್ನುವುದಕ್ಕೆ 'ಆಕ್ಟರ್ ಧನಂಜಯ್' ಎಂಬ ವ್ಯಾಖ್ಯಾನ ಇದೆ. ಈ ರೀತಿ ತಮ್ಮ ಕಾರ್ ಮೇಲೆ ತಮ್ಮ ಹೆಸರು ಹಾಗೂ ವೃತ್ತಿ ಎರಡು ಬರುವಂತೆ ಡಾಲಿ ನೋಡಿಕೊಂಡಿದ್ದಾರೆ.

ಧನಂಜಯ್ ಡಿಸೆಂಬರ್ ನಲ್ಲಿ ಕೆಂಪು ಬಣ್ಣದ ರೇಂಜ್ ರೋವರ್ ಕಾರ್ ಖರೀದಿ ಮಾಡಿದ್ದರು. ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೊಸ ಕಾರಿಗೆ ಧನಂಜಯ್ ಪೂಜೆ ಮಾಡಿಸಿದ್ದರು.
ಅಂದಹಾಗೆ, ಧನಂಜಯ್ ಸದ್ಯ 'ಸಲಗ', 'ಡಾಲಿ', 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
English summary
Kannada actor dhananjay a red colore new range rover car number.


Click it and Unblock the Notifications