ಧನಂಜಯ್ ಮುಂದಿನ ಸಿನಿಮಾ ಟೈಟಲ್ ಅನಾವರಣ; ಯಾರೆಲ್ಲಾ ನಟಿಸ್ತಿದ್ದಾರೆ ಗೊತ್ತಾ?

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಟ ಧನಂಜಯ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದ್ದಾರೆ. ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದರು. ಬಹಳ ದಿನಗಳಿಂದ ಆಪ್ತ ಗೆಳೆಯ ಪೂರ್ಣ ಒಂದು ಕತೆ ಮಾಡುತ್ತಿದ್ದಿದ್ದು ಇತ್ತೀಚೆಗೆ ಅದನ್ನು ಓದಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದು ಎಲ್ಲವನ್ನು ವಿವರಿಸಿದ್ದರು. ಆ ಸಿನಿಮಾ ಟೈಟಲ್ ಏನು ಎನ್ನುವ ಬಗ್ಗೆ ಸಣ್ಣ ಚರ್ಚೆ ಹುಟ್ಟಾಕ್ಕಿದ್ದರು.

ಜಪಾನ್, ಕೊರಿಯನ್, ಗ್ರೀಕ್, ರಷ್ಯನ್, ಅರೆಬಿಕ್ ಹೀಗೆ ಬೇರೆ ದೇಶಗಳ ಭಾಷೆಯಲ್ಲಿ ಚಿತ್ರದ ಟೈಟಲ್ ಪೋಸ್ಟ್ ರಿಲೀಸ್ ಮಾಡಿದ್ದರು. 'ಎಂ' ಅಕ್ಷರದಿಂದ ಶುರುವಾಗುವ ಈ ಸಿನಿಮಾ ಟೈಟಲ್ ನೀವೆ ಗೆಸ್ ಮಾಡಿ ಎಂದು ಕನ್ನಡ ಸಿನಿರಸಿಕರಿಗೆ ಸವಾಲು ಹಾಕಿದ್ದರು. ಒಂದಷ್ಟು ಜನ ಹಿಂದೆ ತಿರುಗಿ ಕುಳಿತಿರುವಂತೆ ಪೋಸ್ಟರ್ ಡಿಸೈನ್ ಮಾಡಲಾಗಿತ್ತು. ಅದರಲ್ಲಿ ಆರ್‌ಸಿಬಿ ಜೆರ್ಸಿ ತೊಟ್ಟ ವ್ಯಕ್ತಿ ಕುಳಿತಿರುವುದು ಹೈಲೆಟ್ ಆಗಿತ್ತು. ಇದೀಗ ಅಧಿಕೃತವಾಗಿ ಸಿನಿಮಾ ಟೈಟಲ್ ಘೋಷಿಸಿದ್ದಾರೆ. ಚಿತ್ರಕ್ಕೆ 'ಮದರ್ ಪ್ರಾಮಿಸ್' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ.

Dhananjay Reveals Next Film Title Mother Promise with new poster

'ಫಾದರ್ ಆಫ್ ಆಲ್ ಪ್ರಾಮಿಸ್' ಎಂಬ ಅಡಿಬರಹ ಕೂಡ ಇದೆ. ನಾವು ಹೇಳುತ್ತಿರುವುದು ಸತ್ಯ ಎಂದು ಪ್ರಮಾಣಿಕರಿಸಲು ಕೆಲವರು 'ಮದರ್ ಪ್ರಾಮಿಸ್' ಅಥವಾ 'ತಾಯಾಣೆ' ಎಂದು ಜನ ಹೇಳುತ್ತಾರೆ. ಇದನ್ನೇ ಟೈಟಲ್ ಆಗಿ ಮಾಡಿ ಹೊಸ ಸಿನಿಮಾ ಆರಂಭಿಸಿದ್ದಾರೆ ಧನಂಜಯ್. ಹೊಸ ಪೋಸ್ಟರ್ ಕೂಡ ಬಂದಿದೆ. ಹಿಂದೆ ತಿರುಗಿ ಕುಳಿತಿದ್ದರು ಈಗ ಮುಂದೆ ತಿರುಗಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಧನಂಜಯ್ ಕೂಡ ಬಣ್ಣ ಹಚ್ಚಿದ್ದಾರೆ.

ಪ್ಯಾನ್ ಯೂನಿವರ್ಸ್ ಎಮೋಷನ್, ಪಕ್ಕಾ ಕನ್ನಡ ಫಿಲ್ಮ್ ಎಂದು ಚಿತ್ರತಂಡ ಹೇಳಿದೆ. ಪೂರ್ಣಚಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಧನಂಜಯ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ನಾಗಭೂಷಣ್ ಕೂಡ ನಟಿಸುತ್ತಿದ್ದಾರೆ. ಗುರುದತ್ ಹಾಗೂ ಹಿರಿಯ ನಟಿಯರಾದ ವಿನಯ ಪ್ರಸಾದ್, ಗೀತಾ ಕೂಡ ತಾರಾಗಣದಲ್ಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸಿನಿಮಾ ಬಿಡುಗಡೆ ಸಿದ್ಧವಿಲ್ಲ. ಈ ನಡುವೆ ಸಿನಿಮಾ ನಿರ್ಮಾಣವನ್ನು ಮುಂದುವರೆಸುತ್ತಿದ್ದಾರೆ. 'ಮದರ್ ಪ್ರಾಮಿಸ್' ಸಿನಿಮಾ ಶುರುವಾಗಿದ್ದು ಹೇಗೆ ಎಂದು ಇತ್ತೀಚೆಗೆ ಧನಂಜಯ್ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ಕಳೆದ 6 ತಿಂಗಳ ಹಿಂದೆ ಗೆಳೆಯ ಪೂರ್ಣ ಒಂದು ಕಥೆ ಮಾಡುತ್ತಿದ್ದರು. ಕಥೆ ಕೇಳು ಅನ್ನುತ್ತಿದ್ದರು. ಬ್ಯುಸಿ ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಪೂರ್ತಿ ಬರೆದು ಕೊಡಿ ಓದ್ತೀನಿ ಅಂದಿದ್ದೆ. ಬಳಿಕ ನಾನೇ ಕಥೆ ಬರಿತ್ತಿದ್ರಲ್ಲ, ಏನಾಯ್ತು ಎಂದು ಕೇಳಿದೆ. ಬರಿತಿದ್ವಿ.. ಆದ್ರೆ, ಅಲ್ಲೆ ಟೇಬಲ್ ಮೇಲೆ ಇದೆ ನೋಡು. ಇದನ್ನು ಸಿನಿಮಾ ಮಾಡಬಹುದಾ? ಗೊತ್ತಾಗ್ಲಿಲ್ಲ.. ಅದಕ್ಕೆ ನಿಲ್ಸಿದ್ದೀವಿ ಅಂದ್ರು.. ಆ ಚಿತ್ರಕಥೆ ಓದಿದೆ.

ಓದು ಓದುತ್ತಾ ಒಬ್ಬನೇ ನಕ್ಕಿದ್ದೆ. ಎಲ್ಲಾ ಪಾತ್ರಗಳ ಜೊತೆ ಪ್ರಯಾಣಿಸಿದೆ. ಓದಿ ಮುಗಿಸಿದ್ದು ಗೊತ್ತಾಗಲಿಲ್ಲ. ಇವತ್ತಿನ ಬೆಂಗಳೂರಿನ ಪರಿಪಾಟಲುಗಳನ್ನು ಅಷ್ಟು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ರು. ಇದನ್ನು ಯಾಕೆ ಪೂರ್ತಿ ಮಾಡ್ಲಿಲ್ಲ ಅಂತ ಪೂರ್ಣನ ಕೇಳ್ದೆ. ನಾನೇ ಸಿನಿಮಾ ಮಾಡ್ತೀನಿ ಅಂದೆ.. ನೀನು ಆಕ್ಟ್ ಮಾಡ್ಬೇಕು ಅಂದ.. ಒಪ್ಪಿಕೊಂಡೆ ಎಂದು ಧನಂಜಯ್ ವಿವರಿಸಿದ್ದರು.

ಒಂದಷ್ಟು GenZ ಹುಡುಗರನ್ನು ಸೇರಿಸಿಕೊಂಡು ಪೂರ್ಣ ನಿರ್ದೇಶನದಲ್ಲಿ 100% ಎಂಟರ್‌ಟೈನರ್ ಸಿನಿಮಾ.. ನಿಮ್ಮ ಮುಂದೆ ಬರೋಕು ಬಾಕಿ. ಪೋಸ್ಟ್ ಪ್ರೊಡಕ್ಷನ್ ನಡೀತಿದೆ ಎಂದು ವಿವರಿಸಿದ್ದರು. ಈಗಾಗಲೇ 'ಮದರ್ ಪ್ರಾಮಿಸ್' ಸಿನಿಮಾ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೀತಿದೆ.

More from Filmibeat

Read more about: dhananjay sandalwood geetha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X