twitter
    For Quick Alerts
    ALLOW NOTIFICATIONS  
    For Daily Alerts

    2020 ಧನಂಜಯ್ ವರ್ಷ: ಮುಂದಿನ ವರ್ಷ ಏನ್ ವಿಶೇಷ?

    |

    ಮುಂದಿನ ವರ್ಷ ಡಾಲಿ ಧನಂಜಯ್ ವರ್ಷ. ಕಾರಣ 2020 ವರ್ಷ ಪೂರ್ತಿ ಅವರ ಅಭಿಮಾನಿಗಳ ರಂಜನೆಯಲ್ಲಿ ಇರುತ್ತಾರೆ. ಅವರ 6 ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಆಗುತ್ತಿದೆ.

    ದುನಿಯಾ ಸೂರಿ ನಿರ್ದೇಶನದಲ್ಲಿ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗುತ್ತಿದೆ. ಫೆಬ್ರವರಿಯಲ್ಲಿ 'ಸಲಗ' ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ.

    ಬಾಕ್ಸಿಂಗ್ ಕೋರ್ಟ್ ನಲ್ಲಿ ಪುನೀತ್, ಧನಂಜಯ್ ಹೊಡೆದಾಟ ಬಾಕ್ಸಿಂಗ್ ಕೋರ್ಟ್ ನಲ್ಲಿ ಪುನೀತ್, ಧನಂಜಯ್ ಹೊಡೆದಾಟ

    ಆ ಬಳಿಕ 'ಯುವರತ್ನ' ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಸ್ಟೈಲಿಶ್ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ 'ಪೊಗರು' ಸಿನಿಮಾದಲ್ಲಿಯೂ ಧ್ರುವ ಸರ್ಜಾಗೆ ಧನಂಜಯ್ ಸಾಥ್ ನೀಡಿದ್ದಾರೆ.

    Dhananjays 6 Kannada Movies Will Be Releasing On 2020

    ಈ ಸಿನಿಮಾಗಳು ಒಂದು ಕಡೆಯಾದರೆ, ತಾನೇ ನಾಯಕನಾಗಿ ನಟಿಸಿರುವ 'ಡಾಲಿ' ಸಿನಿಮಾ ಕೂಡ ಮುಂದಿನ ವರ್ಷ ಬರುತ್ತಿದೆ. 'ಬಡವ ರಾಸ್ಕಲ್' ಧನಂಜಯ್ ನಟನೆ ಹಾಗೂ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾ. ಈ ಚಿತ್ರದ ಮೂಲಕ ಮುಂದಿನ ವರ್ಷ ಅವರು ನಿರ್ಮಾಪಕ ಕೂಡ ಆಗುತ್ತಿದ್ದಾರೆ.

    ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್

    ಹೀಗಾಗಿ, 2020 ಧನಂಜಯ್ ಗೆ ಖುಷಿ ನೀಡುವ ವರ್ಷವಾಗಿದೆ. ವರ್ಷ ಪೂರ್ತಿ ಸ್ಪೆಷಲ್ ಸ್ಟಾರ್ ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡುತ್ತಾರೆ.

    English summary
    Dhananjay's 6 kannada movies will be releasing on 2020.
    Wednesday, December 18, 2019, 20:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X