ಉರ್ಕೊಳೋರ್ ಉರ್ಕೊಳಿ.. ಬಡ್ಕೊಳೋರ್ ಬಡ್ಕೊಳಿ; ಧನಂಜಯ್ RCB ರೋಸ್ಟ್ ಸಾಂಗ್ ಬಂತು

ಹೀರೊ ಆಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಸಂಸ್ಥೆಯ ಮುಂದಿನ ಸಿನಿಮಾ 'ಮದರ್ ಪ್ರಾಮಿಸ್' ಈಗಾಗಲೇ ಬಿಡುಗಡೆಗೆ ಸಜ್ಜಾಗ್ತಿದೆ. ಧನು ಕೂಡ ಚಿತ್ರದಲ್ಲಿ ಮಿಂಚಿದ್ದಾರೆ.

ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಇದೇ ಹೊತ್ತಲ್ಲಿ 'ಮದರ್ ಪ್ರಾಮಿಸ್' ಚಿತ್ರದ ಆರ್‌ಸಿಬಿ ರೋಸ್ಟ್ ಸಾಂಗ್ ಬಂದಿದೆ. ಆರ್‌ಸಿಬಿ ಅಭಿಮಾನಿಗಳ ಆಂಥೆಮ್ ಇದು ಎನ್ನುವಂತೆ ಕಟ್ಟಿಕೊಡಲಾಗಿದೆ. Veni Vidi Vici ಎಂದು ಶುರುವಾಗುವ ಹಾಡನ್ನು ಗುರುಕಿರಣ್ ಹಾಡಿದ್ದಾರೆ. ನವನೀತ್ ಶ್ಯಾಮ್ ಟ್ಯೂನ್ ಹಾಕಿದ್ದು ನಿರ್ದೇಶಕ ಶಶಾಂಕ್ ಸೊಗ್ಗಾಲ್ ಸಾಹಿತ್ಯ ಬರೆದಿದ್ದಾರೆ.

Dhananjay s Mother Promise RCB Roast Song Turns Fan Anthem Amid IPL Fever

ಕಲರ್‌ಫುಲ್ ಸೆಟ್‌ನಲ್ಲಿ ಭೂಷಣ್ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಕಳೆದ ವರ್ಷ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಸರಣಿಯ 2 ಪಂದ್ಯಗಳನ್ನು ಗೆದ್ದಿದೆ. ಇವತ್ತು(ಏಪ್ರಿಲ್ 10) ರಾಜಸ್ತಾನ್ ರಾಯಲ್ಸ್ ವಿರುದ್ಧ 3ನೇ ಪಂದ್ಯ ಆಡಲು ಸಜ್ಜಾಗಿದೆ. ಇಂತಹ ಹೊತ್ತಲ್ಲೇ ಈ ರೋಸ್ಟ್ ಸಾಂಗ್ ಬಂದಿದೆ. "ಉರ್ಕೊಳೋರ್ ಉರ್ಕೊಳಿ.. ಬಡ್ಕೊಳೋರ್ ಬಡ್ಕೊಳಿ.. ಕಿತ್ಕಳಕ್ಕೆ ಆಗದಿಲ್ಲ‌ ಏನೂ.. ಸೋತಾಗ್ಲೇ ಬುಡ್ಲಿಲ್ಲ ಗೆದ್ದಾಗ ಬುಡ್ತೀವಾ..ಇನ್ನು ಮುಂದೆ ಫುಲ್ಲು ನಮ್ದೇ ಸೀನು" ಎನ್ನುವ ಸಾಲುಗಳು ಮಜವಾಗಿದೆ.

ಕಳೆದ ವರ್ಷ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ರಾತ್ರಿ 'ಮದರ್ ಪ್ರಾಮಿಸ್' ಸಿನಿಮಾ ಕಥೆ ಶುರುವಾಯ್ತು ಎಂದು ಇತ್ತೀಚೆಗೆ ಧನಂಜಯ್ ಮಾಹಿತಿ ನೀಡಿದ್ದರು. ಆರ್‌ಸಿಬಿ ತಂಡ ಕಪ್ ಗೆದ್ದ ಸಂಭ್ರಮದಲ್ಲೇ ಸಿನಿಮಾ ಶುರುವಾಗಿದ್ದರಿಂದ ಗೆದ್ದಿರೋ ಸೆಲೆಬ್ರೇಷನ್ ಮೂಲಕವೇ ಸಿನಿಮಾ ಶುರು ಮಾಡಿದ್ದೀವಿ. ಈ ಬಾರಿ ಕೂಡ ತಂಡ ಕಪ್ ಗೆಲ್ಲುತ್ತದೆ ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು.

'ಮದರ್ ಪ್ರಾಮಿಸ್' ಚಿತ್ರಕ್ಕೆ ಧನಂಜಯ್ ಸ್ನೇಹಿತ, ನಟ ಪೂರ್ಣಚಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಫಾದರ್ ಆಫ್ ಆಲ್ ಪ್ರಾಮಿಸಸ್" ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಹಿರಿಯ ನಟಿಯರಾದ ಗೀತಾ, ವಿನಯಾ ಪ್ರಸಾಸ್, ಗುರುದತ್, ನಾಗಭೂಷಣ್ ಚಿತ್ರದ ತಾರಾಗಣದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಫಸ್ಟ್ ಲುಕ್ ಪೋಸ್ಟ್‌ನಲ್ಲಿ 36 ಮಂದಿ ಕಲಾವಿದರನ್ನು ಪರಿಚಯಿಸಿದ್ದಾರೆ. ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶನದ ಜೊತೆಗೆ ಪೂರ್ಣಚಂದ್ರ ಕೂಡ ನಟಿಸಿದ್ದಾರೆ.

More from Filmibeat

Read more about: sandalwood dhananjaya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X