For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಚಿತ್ರದ ಬಗ್ಗೆ ಧನಂಜಯ್ ಆಡಿದ 'ಬಂಗಾರ'ದ ಮಾತುಗಳಿವು

  |

  ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ನಿನ್ನೆ (ಮೇ 19) ತೆರೆಗೆ ಬಂದಿತ್ತು. ಸಿನಿಮಾ ನೋಡಿದ ಅಭಿಮಾನಿಗಳು 'ಬಂಗಾರದ ಮನುಷ್ಯ' ಸಿನಿಮಾವನ್ನು ಈ ಚಿತ್ರ ನೆನಪು ಮಾಡಿತು ಅಂತ ಹೇಳಿದ್ದರು.

  ಈಗ ಸ್ಪೆಷಲ್ ಹುಡುಗ ಧನಂಜಯ್ ಸಹ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ನೋಡಿ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿರುವುದು ಹೀಗೆ....

  ''ನಿಜ ಜೀವನದಲ್ಲಿ ಹೀಗೆ ಆಗಲು ಸಾಧ್ಯವೇ?" ಎಂದು ಬಂಗಾರ s/o ಬಂಗಾರದ ಮನುಷ್ಯ ಚಿತ್ರವನ್ನು ಬರಿ ಒಂದು ಸಿನಿಮಾವಾಗಿ ನೋಡದೆ, ನಿಜವಾಗಲು ಹೀಗಾದರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ? ನಮ್ಮ ರೈತರು ಒಟ್ಟಾಗಿ ಇಂತಹ ಒಂದು ಹೋರಾಟ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?'' ಎಂದು ಧನಂಜಯ್ ಬರೆದುಕೊಂಡಿದ್ದಾರೆ..

  ಜೊತೆಗೆ ''ಪ್ರೋ.ನಂಜುಂಡಸ್ವಾಮಿ ಅಂತಹ ರೈತ ನಾಯಕರು ಶಿವರಾಜನಾಗಿ ಮತ್ತೆ ರೈತ ಶಕ್ತಿಯಾಗಿ ಬಂದು ರೈತ ಸಮುದಾಯಕ್ಕೆ ಮಾರ್ಗದರ್ಶಿಯಾದರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?" ಸ್ವಚ್ಛ ಮನಸ್ಸಿನಿಂದ ಸಿನಿಮಾ ನೋಡಿದರೆ ಬಂಗಾರ s/o ಬಂಗಾರದ ಮನುಷ್ಯ ನಿಜಕ್ಕೂ ಬಂಗಾರದಂತಹ ಸಿನಿಮಾ. ತಪ್ಪದೆ ನೋಡಿ'' ಅಂತ ಚಿತ್ರದ ಬಗ್ಗೆ ಮತ್ತು ಶಿವಣ್ಣನ ಬಗ್ಗೆ ಧನಂಜಯ್ ಹಾಡಿ ಹೊಗಳಿದ್ದಾರೆ.

  English summary
  Kannada Actor Dhananjay has taken his Facebook account to express his opinion about Shiva Rajkumar's 'Bangara s/o Bangarada Manushya' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X