ಡಾಲಿ ಧನಂಜಯ್ 'ರತ್ನನ್ ಪ್ರಪಂಚ'ದ ಎಂಟ್ರಿಗೆ ದಿನಾಂಕ ನಿಗದಿ
ಡಾಲಿ ಖ್ಯಾತಿಯ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿರುವ ಧನಂಜಯ್ ಇತ್ತೀಚಿಗೆ 'ರತ್ನನ್ ಪ್ರಪಂಚ' ಎನ್ನುವ ಹೊಸ ಸಿನಿಮಾ ಒಪ್ಪಿಕೊಂಡಿದ್ದರು. ಇದೀಗ 'ರತ್ನನ್ ಪ್ರಪಂಚ' ಸಿನಿಮಾದ ಚಿತ್ರೀಕರಣಕ್ಕೆ ಕಾಲಕೂಡಿಬಂದಿದೆ.
ಧನಂಜಯ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ರತ್ನನ್ ಪ್ರಪಂಚ ಚಿತ್ರದ ಚಿತ್ರೀಕರಣ ನವೆಂಬರ್ 9ರಿಂದ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.
ರತ್ನನ್ ಪ್ರಪಂಚ ಸಿನಿಮಾವನ್ನು ಮೊದಲು ಮೈಸೂರಿನಿಂದ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಬಳಿಕ ಹಾವೇರಿ, ಕಾಶ್ಮೀರಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದ್ಹಾಗೆ ಚಿತ್ರದಲ್ಲಿನಟ ಧನಂಜಯ್ ಗೆ ಜೋಡಿಯಾಗಿ ರೆಬಾ ಮೋನಿಕಾ ಜಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಮತ್ತು ತಮಿಳಿನಲ್ಲಿ ಅನೇಕ ಸಿನಿಮಾ ಮಾಡಿರುವ ರೆಬಾ ಮೋನಿಕಾ, ರತ್ನನ್ ಪ್ರಪಂಚಕ್ಕೆ ಎಂಟ್ರಿ ನಟಿಸುತ್ತಿದ್ದಾರೆ.
ಇನ್ನೂ ನಟ ಧನಂಜಯ್ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧನಂಜಯ್ ನಾಯಕ ಮತ್ತು ವಿಲನ್ ಪಾತ್ರ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಧನಂಜಯ್ ಸಲಗ, ಪೊಗರು, ಯುವರತ್ನ, ಡಾಲಿ, ತೋತಾಪುರಿ, ಬಡವ ರಾಸ್ಕಲ್, ಹೆಡ್ ಬುಷ್ ಮತ್ತು ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಇನ್ನೂ ಹೆಸರಿಡದ ಸಾಕಷ್ಟು ಸಿನಿಮಾಗಳು ಧನಂಜಯ್ ಬಳಿ ಇವೆ.


Click it and Unblock the Notifications











