ಪ್ರತಿ ಭರವಸೆ ಪ್ರೀತಿಯಿಂದ ಆರಂಭ; ಮಗನ ಮೊದಲ ಫೋಟೊ ಹಂಚಿಕೊಂಡ ಡಾಲಿ ಧನಂಜಯ್

By ಫಿಲ್ಮಿಬೀಟ್ ಡೆಸ್ಕ್

ಡಾಲಿ ಧನಂಜಯ್ ನಟನೆಯ 'ಮದರ್ ಪ್ರಾಮೀಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಹಳ ಬೇಗ ಪ್ರೀಮಿಯರ್ ಶೋಗಳು ಶುರುವಾಗುತ್ತಿದೆ. ಸ್ವತಃ ಧನು ಚಿತ್ರ ನಿರ್ಮಾಣ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಧನಂಜಯ್ ಹಾಗೂ ಧನ್ಯತಾ ದಂಪತಿ ಗಂಡು ಮಗುವಿನ ಜನ್ಮ ನೀಡಿದ್ದರು. 'ಮದರ್ ಪ್ರಾಮೀಸ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧನು ಮಗನ ಫೋಟು ಹಂಚಿಕೊಂಡಿದ್ದಾರೆ.

'ಪ್ರತಿಯೊಂದು ಭರವಸೆಯೂ ಪ್ರೀತಿಯಿಂದ ಪ್ರಾರಂಭ' ಎಂದು ಬರೆದು ಮಗನನ್ನು ಎತ್ತಿಕೊಂಡಿರುವ ಫೋಟೊವನ್ನು ಧನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಫೋಟೊದಲ್ಲಿ ಮಗನ ಮುಖ ತೋರಿಸಿಲ್ಲ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಳ್ಳೆ ಕ್ಯಾಪ್ಷನ್ ಎಂದು ಹೇಳುತ್ತಿದ್ದು 'ಮದರ್ ಪ್ರಾಮೀಸ್' ಚಿತ್ರಕ್ಕೆ ಶುಭವಾಗಲಿ ಎನ್ನುತ್ತಿದ್ದಾರೆ. 2025ರ ಫೆಬ್ರವರಿ 16ರಂದು ಡಾಲಿ ಧನಂಜಯ್‌ ಅವರು ಡಾ. ಧನ್ಯತಾ ಜೊತೆ ಮೈಸೂರಿನಲ್ಲಿ ಹಸೆಮಣೆ ಏರಿದ್ದರು.

Dhananjay shared adorable pictures with his Son amid Mother Promise promotions

ತಮ್ಮ ಅಭಿಮಾನಿಯನ್ನೇ ಪ್ರೀತಿಸಿ ಧನಂಜಯ್ ಮದುವೆ ಆಗಿದ್ದರು. ಮದುವೆ ಮುಹೂರ್ತ ಹಾಗೂ ಆರತಕ್ಷತೆ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಆಗಮಿಸಿ ಶುಭ ಕೋರಿದ್ದರು. ನಾನು ನಿಮ್ಮ ಅಭಿಮಾನಿ ಎಂದು ಧನ್ಯತಾ ಮೊದಲ ಬಾರಿಗೆ ಧನಂಜಯ್ ಅವರನ್ನು ಜಯನಗರ 4th ಬ್ಲಾಕ್‌ನಲ್ಲಿ ಭೇಟಿ ಮಾಡಿದ್ದರು. ಅಲ್ಲೇ ಉತ್ತರ ಕರ್ನಾಟಕ ಶೈಲಿಯ ಹೋಟೆಲ್‌ನಲ್ಲಿ ಒಟ್ಟಿಗೆ ಊಟ ಕೂಡ ಮಾಡಿದ್ದರು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕದಲ್ಲಿದ್ದರು. ನಿಧಾನವಾಗಿ ಒಬ್ಬರಿಗೊಬ್ಬರು ಹತ್ತಿರವಾಗಿದ್ದರು. ಬಳಿಕ ಸ್ನೇಹಿತರಿಗೂ ಧನ್ಯತಾ ಅವರನ್ನು ಪರಿಚಯಿಸಿದ್ದರು. ಕೊನೆಗೆ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು.

ಇದೇ ಶುಕ್ರವಾರ(ಜುಲೈ 10) 'ಮದರ್‌ ಪ್ರಾಮೀಸ್' ಸಿನಿಮಾ ಬಿಡುಗಡೆ ಆಗ್ತಿದೆ. ಎರಡು ದಿನ ಮುನ್ನ ಕೆಲವೆಡೆ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಧನು ಮತ್ತವರ ಬಳಗ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 'ಮದರ್ ಪ್ರಾಮೀಸ್' ಟೈಟಲ್ ಇರುವ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿ ಚಿತ್ರತಂಡ ಕಾಣಿಸಿಕೊಳ್ಳುತ್ತಿದೆ. ಧನಂಜಯ್ ಅದೇ ಟೀ-ಶರ್ಟ್ ಧರಿಸಿ ಮಗನ ಜೊತೆ ಆಟವಾಡುತ್ತಿರುವ ಫೋಟೊ ಇದು.

ಧನು ಆಪ್ತ ಸ್ನೇಹಿತ ಪೂರ್ಣಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಾಲ್ಪನಿಕ ಬೆಂಗಳೂರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಇದೊಂದು ಕಾಮಿಡಿ ಗ್ಯಾಂಗ್‌ಸ್ಟರ್ ಸಿನಿಮಾ ಎನ್ನುವುದು ಟ್ರೈಲರ್ ನೋಡಿದ್ರೆ ಅರ್ಥವಾಗ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡದೇ ಪ್ರೇಕ್ಷಕರ ಮುಂದೆ ಸಿನಿಮಾ ತರುವ ಪ್ರಯತ್ನ ನಡೀತಿದೆ. ಪ್ರೇಕ್ಷಕರೇ ನೋಡಿ ಪ್ರಚಾರ ಮಾಡುತ್ತಾರೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ. ರಾಹುಲ್ ರಾಯ್ ಛಾಯಾಗ್ರಹಣ ಹಾಗೂ ನವನೀಶ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ.

ಧನಂಜಯ್ ಜೊತೆಗೆ ಗೀತಾ, ವಿನಯ ಪ್ರಸಾದ್, ಚಿ. ಗುರುದತ್, ನಾಗಭೂಷಣ್ ಸೇರಿ ದೊಡ್ಡ ತಾರಾಗಣ 'ಮದರ್ ಪ್ರಾಮೀಸ್' ಚಿತ್ರದಲ್ಲಿದೆ. ಸ್ವತಃ ನಿರ್ದೇಶಕ ಪೂರ್ಣಚಂದ್ರ ಕೂಡ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಒಂದು ಟ್ರೈಲರ್ ಬಿಡುಗಡೆ ಮಾಡಿರುವ ಚಿತ್ರತಂಡ ಮತ್ತೊಂದು ಟ್ರೈಲರ್ ಬಿಟ್ಟು ಸಿನಿಮಾ ಬಗ್ಗೆ ಕುತೂಹಲ ಮೂಡಿಸುವ ಲೆಕ್ಕಾಚಾರದಲ್ಲಿದೆ.

'ಬಡವ ರಾಸ್ಕಲ್' ಸಿನಿಮಾ ಮೂಲಕ ನಿರ್ಮಾಪಕನಾಗಿ ಧನು ಬಡ್ತಿ ಪಡೆದಿದ್ದರು. ಡಾಲಿ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ಹೊಸ ಪ್ರತಿಭೆಗಳಿವೆ ಅವಕಾಶ ನೀಡುವ ಮನಸ್ಸು ಮಾಡಿದ್ದರು. ಬಳಿಕ 'ಹೆಡ್‌ಬುಷ್', 'ವಿದ್ಯಾಪತಿ' ಹಾಗೂ 'ಟಗರು ಪಲ್ಯ' ಚಿತ್ರಗಳನ್ನು ನಿರ್ಮಿಸಿದ್ದರು. 'ಅಣ್ಣ ಫ್ರಮ್ ಮೆಕ್ಸಿಕೊ' ಎಂಬ ಮತ್ತೊಂದು ಚಿತ್ರಕ್ಕೂ ಹಣ ಹೂಡಿದ್ದಾರೆ. 'ಉತ್ತರಕಾಂಡ', '666 ಆಪರೇಷನ್ ಡ್ರೀಮ್ ಥಿಯೇಟರ್', 'ಜಿಂಗೋ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ.

Read more about: dhananjay sandalwood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X