ಶಿವರಾಜ್ ಕುಮಾರ್ ನುಡಿದ ಭವಿಷ್ಯವನ್ನ ನಿಜ ಮಾಡಿದ ಧನಂಜಯ್
Recommended Video

'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಧನಂಜಯ್ ಇಂಡಸ್ಟ್ರಿಯಲ್ಲಿ 5 ವರ್ಷ ಪೂರೈಸಿದ್ದಾರೆ. ಇಲ್ಲಿಯವರೆಗೂ 9 ಸಿನಿಮಾಗಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಈಗ 10 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಆದ್ರೆ, ಧನಂಜಯ್ ಗೆ ಬ್ರೇಕ್ ಕೊಟ್ಟಿದ್ದು ಶಿವರಾಜ್ ಕುಮಾರ್ ಜೊತೆ ಅಭಿನಯಿಸಿದ್ದ 'ಟಗರು'. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಧನಂಜಯ್ ವಿಲನ್ ಆಗಿ ಅಬ್ಬರಿಸಿದ್ದರು. ಈ ಲುಕ್, ಡಾಲಿ ಪಾತ್ರ ಎಲ್ಲ ಪ್ರೇಕ್ಷಕರಿಗೆ ಫೆವರೇಟ್ ಆಯ್ತು.
ಸ್ವತಃ ಶಿವರಾಜ್ ಕುಮಾರ್ ಗೂ ಕೂಡ ಈ ಡಾಲಿ ಸಿಕ್ಕಾಪಟ್ಟೆ ಇಷ್ಟವಾಗಿದ್ರು. ಅದಕ್ಕೆ ಆ ಸಂದರ್ಭದಲ್ಲಿ ಧನಂಜಯ್ ಬಗ್ಗೆ ಒಂದೊಳ್ಳೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನ ಈಗ ಡಾಲಿ ನಿಜ ಮಾಡಿದ್ದಾರೆ. ಅಷ್ಟಕ್ಕೂ, ಆ ಭವಿಷ್ಯವೇನು.? ಮುಂದೆ ಓದಿ...

ಧನಂಜಯ್ ಬೇರೆ ಇಂಡಸ್ಟ್ರಿಗೆ ಹೋಗ್ತಾರೆ
'ಟಗರು' ಚಿತ್ರದ ವೇಳೆ ಧನಂಜಯ್ ಬಗ್ಗೆ ಮಾತನಾಡಿದ್ದ ಶಿವಣ್ಣ ''ನೀನು ಬೇಗ ಬೇರೆ ಇಂಡಸ್ಟ್ರಿಗೆ ಹೋಗ್ತಿಯಾ, ಹೋಗ್ಬೇಕು..' ಎಂದು ಹೇಳಿದ್ದರಂತೆ. ಅಂದು ಸೆಂಚುರಿಸ್ಟಾರ್ ಹೇಳಿದಂತೆ ಈಗ ರಾಮ್ ಗೋಪಾಲ್ ವರ್ಮಾ ಜೊತೆಯಲ್ಲಿ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಅದು 'ಟಗರು' ಚಿತ್ರದ ನಂತರವೇ ಸಿಕ್ಕಿದ್ದು ತುಂಬಾ ವಿಶೇಷವಾಗಿದೆ ಎನ್ನುತ್ತಾರೆ ಧನಂಜಯ್.

ಫೋನ್ ಮಾಡಿದ ಹೇಳಿದ್ದ ಶಿವಣ್ಣ
ಧನಂಜಯ್ ಅವರ ಬಗ್ಗೆ ಆಗಲೇ ತೆಲುಗಿನ ಒಬ್ಬರಿಗೆ ಫೋನ್ ಮಾಡಿದ್ದ ಹೇಳಿದ್ದರಂತೆ. ನಮ್ಮಲ್ಲಿ ಒಬ್ಬ ನಟ ಇದ್ದಾನೆ, ನೋಡಿ ಅಂತ. ಆದ್ರೆ, ಅದೃಷ್ಟವಶಾತ್ ಆರ್.ಜಿ.ವಿ ಕಣ್ಣಿಗೆ ಧನಂಜಯ್ ಬಿದ್ರು. ಮೊದಲ ನೋಟದಲ್ಲೇ ಡಾಲಿಯ ಪಾತ್ರ ವರ್ಮಾ ಅವರನ್ನ ಹೃದಯ ಮುಟ್ಟಿತು.

'ಟಗರು' ನೋಡಿ ಸಿನಿಮಾ ಕೊಟ್ಟ ಆರ್.ಜಿ.ವಿ
'ಟಗರು' ಸಿನಿಮಾ ರಿಲೀಸ್ ಆದಾಗ ರಾಮ್ ಗೋಪಾಲ್ ವರ್ಮಾ ಬೆಂಗಳೂರಿಗೆ ಬಂದು ಧನಂಜಯ್, ಮಾನ್ವಿತಾ, ಸೂರಿ ಜೊತೆ ಸಿನಿಮಾ ನೋಡಿದ್ದರು. ಥಿಯೇಟರ್ ನಿಂದ ಹೊರಬಂದ ಬಳಿಕ, ಧನಂಜಯ್ ಜೊತೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿ ಸರ್ಪ್ರೈಸ್ ಕೊಟ್ಟಿದ್ದರು. ನಂತರವೇ 'ಬೈರವಗೀತ' ಸಿನಿಮಾ ಆಗಿದ್ದು.

ಸ್ವತಃ ಧನಂಜಯ್ ಕಂಠದಲ್ಲಿ ತೆಲುಗು
'ಬೈರವಗೀತ' ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಕನ್ನಡದ ಜೊತೆ ತೆಲುಗು ಭಾಷೆಯಲ್ಲೂ ಖುದ್ದು ಧನಂಜಯ್ ಅವರೇ ಡಬ್ಬಿಂಗ್ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

ಆರ್.ಜಿ.ವಿ ಮೆಚ್ಚಿದ ಡಾಲಿ
ಅಂದ್ಹಾಗೆ, 'ಬೈರವಗೀತ' ಚಿತ್ರವನ್ನ ಸಿದ್ಧಾರ್ಥ್ ಎಂಬುವರು ನಿರ್ದೇಶನ ಮಾಡಿದ್ದು, ರಾಮ್ ಗೋಪಾಲ್ ವರ್ಮಾ ಬಂಡವಾಳ ಹಾಕಿದ್ದಾರೆ. ಐರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭೈರವಗೀತ ಚಿತ್ರದಲ್ಲಿ ಧನಂಜಯ್ ಅವರ ಅಭಿನಯದ ನೋಡಿದ ಆರ್.ಜಿ.ವಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಧನಂಜಯ್ ಅವರ ಪ್ರತಿಭೆಗೆ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











