ಮಾರ್ಚ್ 30ಕ್ಕೆ ಹೊಯ್ಸಳ ತೆರೆಗೆ; ಯಾವ ರಾಜ್ಯಗಳಲ್ಲಿ ಯಾರು ವಿತರಕರು?

ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಹೊಯ್ಸಳ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ ಅಂತಿಮ ಗುರುವಾರದಂದು ( ಮಾರ್ಚ್ 30 ) ಬಿಡುಗಡೆಗೊಳ್ಳಲಿದೆ. ಡಾಲಿ ಧನಂಜಯ್ ಸಿನಿ ಜೀವನದ 25ನೇ ಚಿತ್ರ ಇದಾಗಿದ್ದು, ಈ ಹಿಂದೆ ಇದೇ ಧನಂಜಯ್‌ಗೆ ರತ್ನನ್ ಪ್ರಪಂಚ ಎಂಬ ಸಿನಿಮಾವನ್ನು ನಿರ್ಮಿಸಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಳಿಸಿ ಗೆದ್ದಿದ್ದ ಕೆ ಆರ್ ಜಿ ಸ್ಟುಡಿಯೊಸ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದರೆ, ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಗುರುದೇವ್ ಎಂಬ ಪಾತ್ರವನ್ನು ನಿರ್ವಹಿಸಿದ್ದರೆ, ನಾಯಕಿ ಗಂಗಾ ಪಾತ್ರದಲ್ಲಿ ಅಮೃತಾ ಐಯ್ಯಂಗಾರ್ ನಟಿಸಿದ್ದಾರೆ.

ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಟೀಸರ್ ಹಾಗೂ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಿ ಚಿತ್ರದ ಮೇಲಿನ ಹೈಪ್ ಹೆಚ್ಚಾಗುವಂತೆ ಮಾಡಿದೆ. ಇನ್ನು ರಾಜ್ಯದ ವಿವಿಧ ಊರುಗಳಿಗೆ ಭೇಟಿ ನೀಡಲು ಆರಂಭಿಸಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನೂ ಸಹ ಆರಂಭಿಸಿದೆ. ಇನ್ನು ಚಿತ್ರವನ್ನು ಕನ್ನಡದ ಹೆಸರಾಂತ ವಿತರಕ ಹಾಗೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆ ಆರ್ ಜಿ ಸ್ಟುಡಿಯೊಸ್ ಅಡಿಯಲ್ಲಿ ನಿರ್ಮಿಸಿದ್ದು, ವಿತರಣೆಯನ್ನು ಭರ್ಜರಿಯಾಗಿಯೇ ಪ್ಲಾನ್ ಮಾಡಿದ್ದಾರೆ.

Dhananjay starrer Hoysala movie other states and overseas distributors details

ಬೇರೆ ಬೇರೆ ರಾಜ್ಯಗಳ ಹೆಸರಾಂತ ವಿತರಣಾ ಸಂಸ್ಥೆಗಳಿಗೆ ಹೊಯ್ಸಳ ಚಿತ್ರದ ವಿತರಣಾ ಹಕ್ಕನ್ನು ನೀಡಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಹಾಗಿದ್ದರೆ ಯಾವ ರಾಜ್ಯಗಳಲ್ಲಿ ಯಾವ ವಿತರಕರು ಹೊಯ್ಸಳ ಚಿತ್ರವನ್ನು ವಿತರಿಸಲಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮೊದಲೇ ಹೇಳಿದಂತೆ ರಾಜ್ಯದ ಹೆಸರಾಂತ ವಿತರಣಾ ಸಂಸ್ಥೆ ಎನಿಸಿಕೊಂಡಿರುವ ಕೆ ಆರ್ ಜಿ ಸ್ಟುಡಿಯೊಸ್ ಅವರೇ ತಾವೇ ನಿರ್ದೇಶಿಸಿರುವ ಹೊಯ್ಸಳ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸಿದರೆ, ತೆಲುಗು ರಾಜ್ಯಗಳಲ್ಲಿ ಎಸ್ ವಿ ಸಿ ಸಿನಿಮಾಸ್ ಚಿತ್ರವನ್ನು ವಿತರಿಸುತ್ತಿದೆ, ತಮಿಳುನಾಡಿನಲ್ಲಿ ಎಪಿ ಇಂಟರ್‌ನ್ಯಾಷನಲ್ ಸಂಸ್ಥೆ ವಿತರಣೆ ಮಾಡುತ್ತಿದೆ, ಕೇರಳದಲ್ಲಿ ಮ್ಯಾಜಿಕ್ ಫ್ರೇಮ್ಸ್ ಸಂಸ್ಥೆ ಹೊಯ್ಸಳ ಚಿತ್ರವನ್ನು ವಿತರಿಸುತ್ತಿದೆ, ಉತ್ತರ ಭಾರತ ಭಾಗದಲ್ಲಿ ಎಎ ಫಿಲ್ಮ್ಸ್ ಇಂಡಿಯಾ ಚಿತ್ರವನ್ನು ವಿತರಿಸುತ್ತಿದೆ ಹಾಗೂ ವಿದೇಶದಲ್ಲಿ ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ವಿತರಣೆ ಮಾಡುತ್ತಿದೆ.

Dhananjay starrer Hoysala movie other states and overseas distributors details

ಈ ನಡುವೆ ಚಿತ್ರತಂಡ ರಾಜ್ಯದಲ್ಲಿ ಪ್ರಚಾರವನ್ನು ಆರಂಭಿಸಿದೆ. ನಿನ್ನೆ ( ಮಾರ್ಚ್ 10 ) ಅಫ್ಜಲಪುರದಲ್ಲಿ ನಡೆದ ಹೊಯ್ಸಳ ಪ್ರಚಾರದಲ್ಲಿ ಮಾತನಾಡಿದ ಧನಂಜಯ್ ಚಿತ್ರದ ಎಕ್ಸ್‌ಕ್ಲೂಸಿವ್ ಡೈಲಾಗ್ ಒಂದನ್ನು ವೇದಿಕೆ ಮೇಲೆ ಹೇಳಿದ್ದಾರೆ. ಹೊಯ್ಸಳ ಚಿತ್ರದ ಸಂಭಾಷಣೆ ನಿಮಗಾಗಿ ಎಂದು ಮಾತು ಆರಂಭಿಸಿದ ಧನಂಜಯ್ "ಏಯ್ ನೀನ್ ಊರಿಗೆ ದೊಡ್ಡವ ಅಂತ ಹಾರಾಡಬೇಡ, ದೊಡ್ಡವರಿಗೆಲ್ಲ ಟಕ್ಕರ್ ಕೊಟ್ಕೊಂಡು ಅವರ ಕಡೆನೇ ಶಹಬ್ಬಾಷ್‌ಗಿರಿ ತಕ್ಕೊಂಡು ಇಲ್ಲಿ ತನಕ ಬಂದೇನಿ, ಈಗ ನನಗೆ ನಾನಾ ದೊಡ್ಡವ" ಎಂದು ಡೈಲಾಗ್ ಹೊಡೆದರು.

More from Filmibeat

English summary
Dhananjay starrer Hoysala movie other states and overseas distributors details. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X