ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್'ಗೆ ಪವರ್ ಸ್ಟಾರ್ ಪುನೀತ್ ಸಾಥ್

ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಟಗರು ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಟ ಮೇಲೆ, ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ ಮತ್ತೆ ಜೊತೆಯಾಗಿ ಮಾಡಿರೋ ರಾ ರಿಯಲಿಸ್ಟಿಕ್ ಸಿನಿಮಾ. ಎಲ್ಲಾ ಆಂಗಲ್ ನಿಂದಲು ಮಾಸ್ ಫ್ಲೇವರ್ ತುಂಬಿರೋ ಚಿತ್ರ. ಬರೀ ಪೋಸ್ಟರ್ ಗಳಿಂದಲೆ ಭಾರಿ ಸದ್ದು ಸುದ್ದಿ ಮಾಡಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ನಿರ್ದೇಶಕ ಸೂರಿಯವರೊಟ್ಟಿಗೆ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಪವರ್ ಸ್ಟಾರ್ ನೆಚ್ಚಿನ ನಿರ್ದೇಶಕರ. ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಆಡಿಯೋವನ್ನ ಪವರ್ ಸ್ಟಾರ್ ಪಿ ಆರ್ ಕೆ ಆಡಿಯೋ ಸಂಸ್ಥೆ ಖರೀದಿಸುತ್ತಿದೆ.

ಈಗಾಗಲೆ ಮಾತುಕಥೆಯಾಗಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಮೂಲಕ ಅಧಿಕೃತವಾಗಿ ತಿಳಿಸಲಿದೆಯಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೆಂಡ್ ಸೃಷ್ಟಿಸಿ, ಸಂಚಲನ ಮೂಡಿಸಿದ್ದ ಸೂರಿ ನಿರ್ದೇಶನದ ಚರಣ್ ರಾಜ್ ಸಂಗೀತ ಸಂಯೋಜನೆಯ ಟಗರು ಚಿತ್ರದ ಹಾಡುಗಳು ಪ್ರಮುಖವಾಗಿತ್ತು.

Dhananjay Starrer Popcorn Monkey Tiger Movie Audio Rights Sold Out

ಇದೀಗ ಅದೇ ಸೂರಿ -ಚರಣ್ ಕಾಂಬಿನೇಷನ್ ನಲ್ಲೇ ಮೂಡಿ ಬಂದಿರೊ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತೊಂದು ಟ್ರೆಂಡ್ ಸೃಷ್ಟಿಸುವುದಕ್ಕೆ, ಸಂಚಲನ ಮೂಡಿಸುವುದಕ್ಕೆ ಸಜ್ಜಾಗಿದೆ. ಅದು ಅದೇ ಪಿ ಆರ್ ಕೆ ಆಡಿಯೋ ಸಂಸ್ಥೆಯ ಮೂಲಕ ಅನ್ನೋದು ವಿಶೇಷ. ಈ ವಿಚಾರ ಹೊರ ಬರ್ತಿದ್ದಂತೆ, ಕನ್ನಡ ಸಿನಿಪ್ರಿಯರ ವಲಯದಲ್ಲಿ, ಅಭಿಮಾನಿವಲಯದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಫಸ್ಟ್ ಲುಕ್ ಟೀಸರ್ ಮತ್ತು ಆಡಿಯೋ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ.

ಎಲ್ಲಾ ಅಂದುಕೊಂಡಂತೆ ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ಹೊಸ ವರ್ಷಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ. ಈಗಾಗಲೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ಕಟ್ಟಿಂಗ್ ನಲ್ಲಿ ತೊಡಗಿದ್ದು, ಸಧ್ಯದಲ್ಲೇ ಟೀಸರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡಲಿದೆಯಂತೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಸುಕ್ಕಾ ಸೂರಿ ಮಾಡಿದ್ದು, ಈವರೆಗೂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಂಡಿದ್ದ ಸುಧೀರ್ ಕೆ.ಎಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Dhananjay Starrer Popcorn Monkey Tiger Movie Audio Rights Sold Out

ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ಕಾಕ್ರೋಚ್ ಖ್ಯಾತಿಯ ಸುದಿ, ಜಾಕಿ ಭಾವನ ಪತಿ ನವೀನ್, ಪೂರ್ಣಚಂದ್ರ, ನಿವೇದಿತಾ, ಅಮೃತ ಅಯ್ಯರ್, ಸಪ್ತಮಿ, ಮೋನಿಶಾ ನಾಡಿಗೇರ್, ಗೌತಮ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ.

More from Filmibeat

English summary
Actor Dhananjay starrer Popcorn monkey tiger movie audio rights sold out to puneeth rajkumar PRK audio company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X