For Quick Alerts
  ALLOW NOTIFICATIONS  
  For Daily Alerts

  ತಮಿಳು ಸ್ಟಾರ್ ನಿರ್ದೇಶಕನ ಜೊತೆ ಶೂಟಿಂಗ್ ಆರಂಭಿಸಿದ ಧನಂಜಯ್

  |

  ತಮಿಳಿನ ಸ್ಟಾರ್ ಛಾಯಾಗ್ರಾಹಕ ಹಾಗೂ ನಿರ್ದೇಶಕ ವಿಜಯ್ ಮಿಲ್ಟನ್ ಜೊತೆ ಡಾಲಿ ಧನಂಜಯ್ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಧನಂಜಯ್ ಮತ್ತು ವಿಜಯ್ ಮಿಲ್ಟನ್ ಶೂಟಿಂಗ್ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ವಿಜಯ್ ಮಿಲ್ಟನ್ ಮತ್ತು ಧನಂಜಯ್ ಜೊತೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಹ ಭಾಗಿಯಾಗಿದ್ದಾರೆ. ಈ ಫೋಟೋ ಸಹ ವೈರಲ್ ಆಗಿದೆ.

  ಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ

  ಅಂದ್ಹಾಗೆ, ವಿಜಯ್ ಮಿಲ್ಟನ್ ಚಿತ್ರೀಕರಣ ಮಾಡುತ್ತಿರುವ ಎಸ್‌ಆರ್‌ಕೆ 123 ನೇ ಚಿತ್ರ. ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಹೊಸ ಸಿನಿಮಾ.

  ಶಿವಣ್ಣ ಮತ್ತು ವಿಜಯ್ ಮಿಲ್ಟನ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಧನಂಜಯ್ ಸಹ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಶೂಟಿಂಗ್‌ನಲ್ಲಿ ಧನಂಜಯ್ ಪಾಲ್ಗೊಂಡಿದ್ದಾರೆ.

  ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಒದಗಿಸುತ್ತಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ನಟಿಸುತ್ತಿದ್ದಾರೆ. ಟಗರು ಬಳಿಕ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ.

  ಗೋಲಿಸೋಡಾ, ಗೋಲಿಸೋಡಾ 2, ವಿಕ್ರಂ ನಟನೆಯ 10 ಎಣ್ದ್ರುಕುಲ್ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ವಿಜಯ್ ಮಿಲ್ಟನ್ ಅದ್ಭುತ ಛಾಯಾಗ್ರಾಹಕ. ಇತ್ತೀಚಿಗಷ್ಟೆ ತೆರೆಕಂಡ ಪೊಗರು ಚಿತ್ರಕ್ಕೂ ವಿಜಯ್ ಮಿಲ್ಟನ್ ಛಾಯಾಗ್ರಾಹಕರಾಗಿದ್ದರು.

  ಕೊರೊನಾ ಆತಂಕದ ನಡುವೆ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡ ಸಲಗ | Filmibeat Kannada

  ಭಜರಂಗಿ 2 ಸಿನಿಮಾ ಚಿತ್ರೀಕರಣ ಮುಗಿಸಿರುವ ಶಿವರಾಜ್ ಕುಮಾರ್ ವಿಜಯ್ ಮಿಲ್ಟನ್ ಜೊತೆಗಿನ ಪ್ರಾಜೆಕ್ಟ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ.

  English summary
  Vijay Milton starts Shooting of SRK 123rd movie with Dhananjay. Shiva Rajkumar playing lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X