'ಡಾಲಿ' ಆಗಿ ಅಬ್ಬರಿಸಲಿರುವ ನಟ ಧನಂಜಯ್.!
Recommended Video

'ಟಗರು' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇತ್ತೋ, ಅಷ್ಟೇ ಪ್ರಾಮುಖ್ಯತೆ ವಿಲನ್ ಪಾತ್ರಧಾರಿ 'ಡಾಲಿ' ಧನಂಜಯ್ ಗಿತ್ತು. ಅಲ್ಲಿಯವರೆಗೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳದ ಧನಂಜಯ್ 'ಟಗರು' ಚಿತ್ರಕ್ಕಾಗಿ ಕೈಯಲ್ಲಿ ಲಾಂಗ್ ಹಿಡಿದು ಮೈಯೆಲ್ಲಾ ರಕ್ತ ಮಾಡಿಕೊಂಡು ಅಬ್ಬರಿಸಿ ಬೊಬ್ಬಿರಿದಿದ್ದರು.
'ಟಗರು' ಚಿತ್ರದಲ್ಲಿ ಡಾಲಿಯಾಗಿ ಧನಂಜಯ ನಟನೆಗೆ ಸಿನಿ ಪ್ರಿಯರು ಚಪ್ಪಾಳೆ ಹೊಡೆದಿದ್ದರು. ಡಾಲಿಯಾಗಿ ಜನಪ್ರಿಯತೆ ಗಳಿಸಿದ್ದ ಧನಂಜಯ್ ಇದೀಗ ಚಿತ್ರವೊಂದರಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಅಂಡರ್ ವರ್ಲ್ಡ್ ಸಬ್ಜೆಕ್ಟ್ ಒಂದಕ್ಕೆ ಧನಂಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರಕ್ಕೆ 'ಕರಿಯ-2' ಮತ್ತು 'ಗಣಪ' ಸಿನಿಮಾ ಖ್ಯಾತಿಯ ಪ್ರಭು ಶ್ರೀನಿವಾಸ್ ಆಕ್ಷನ್ ಕಟ್ ಹೇಳಲಿದ್ದು, 'ಎರಡನೇ ಸಲ' ಚಿತ್ರ ಖ್ಯಾತಿಯ ನಿರ್ಮಾಪಕ ಯೋಗೇಶ್ ನಾರಾಯಣ್ ಬಂಡವಾಳ ಹೂಡಲಿದ್ದಾರೆ.

ಈ ಚಿತ್ರಕ್ಕೆ 'ಡಾಲಿ' ಎಂದೇ ಟೈಟಲ್ ನೀಡಲಾಗಿದೆಯಂತೆ. ಫೆಬ್ರವರಿ 12ರಂದು ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ.
ಸದ್ಯ ಸೂರಿ ಅವರ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಧನಂಜಯ್ ಬಿಜಿಯಾಗಿದ್ದು, ಆ ಚಿತ್ರದ ಚಿತ್ರೀಕರಣ ಮುಗಿದ ನಂತರ 'ಡಾಲಿ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.


Click it and Unblock the Notifications











