ಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿ
ಸಿನಿಮಾದಲ್ಲಿ ನಾಯಕ ಹಾಗೂ ವಿಲನ್ ನಡುವಿನ ಪರಸ್ಪರ ಸಂಘರ್ಷ ಹೇಗಿರಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ಕನ್ನಡದ ಟಗರು ಸಿನಿಮಾ.
Recommended Video
ಒಬ್ಬರ ಮೇಲೊಬ್ಬರು ನಡೆಸುವ ಮಾನಸಿಕ ಯುದ್ಧ, ಒಬ್ಬರನ್ನೊಬ್ಬರು ರೊಚ್ಚಿಗೇಳಿಸುವ ಪರಿ ಎಲ್ಲವೂ ಅದ್ಭುತವಾಗಿತ್ತು. ಟಗರು ಶಿವು ಆಗಿ ಶಿವರಾಜ್ ಕುಮಾರ್ ಮಿಂಚಿದರೆ ಅವರಿಗೆ ಪೈಪೋಟಿ ನೀಡುವಂತೆ ಡಾಲಿ ಪಾತ್ರಕ್ಕೆ ಜೀವ ತುಂಬಿದ್ದರು ಧನಂಜಯ್.
ಟಗರು ಸಿನಿಮಾದ ಈ ಎರಡು ಪಾತ್ರಗಳನ್ನು ಸಿನಿಮಾ ಪ್ರೀತಿಯ ಮಂದಿ ಬಹು ಕಾಲ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇಬ್ಬರ ಕಾಂಬಿನೇಶನ್ ಜನರಿಗೆ ದೊಡ್ಡ ಮಟ್ಟಿನ ಮೋಡಿಯನ್ನೇ ಮಾಡಿದೆ. ಇದೀಗ ಇವರಿಬ್ಬರು ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜ್ ಕುಮಾರ್-ಧನಂಜಯ್ ಒಟ್ಟಿಗೆ ಸಿನಿಮಾ
ಹೌದು, ಶಿವರಾಜ್ ಕುಮಾರ್ ಮತ್ತು ಧನಂಜಯ್ ಮತ್ತೆ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಈ ವಿಷಯವನ್ನು ನಟ ಧನಂಜಯ್ ಸ್ವತಃ ಬಹಿರಂಗಪಡಿಸಿದ್ದಾರೆ.

ಟ್ವೀಟ್ ಮಾಡಿರುವ ನಟ ಧನಂಜಯ್
ಟ್ವೀಟ್ ಮಾಡಿರುವ ಧನಂಜಯ್, ಮತ್ತೆ ಶಿವಣ್ಣ ಜೊತೆ ಬರಲಿದ್ದೇನೆ. ಈ ಸಿನಿಮಾ 2021 ಕ್ಕೆ ಬಿಡುಗಡೆ ಆಗಲಿದೆ ಎಂದಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸದ್ಯಕ್ಕೆ ಪ್ರೊಡಕ್ಷನ್ ನಂ 2 ಎಂದು ಕರೆಯಲಾಗಿದೆ.

ಉತ್ತಮ ಸಿನಿಮಾ ಮಾಡಿರುವ ವಿಜಯ್ ಮಿಲ್ಟನ್
ಸಿನಿಮಾವನ್ನು ತಮಿಳಿನ ಖ್ಯಾತ ಸಿನಿಮಾಟೊಗ್ರಾಫರ್ ಮತ್ತು ನಿರ್ದೇಶಕ ವಿಜಯ್ ಮಿಲ್ಟನ್ ಮಾಡಲಿದ್ದಾರೆ. ಗೋಲಿ ಸೋಡಾ, ವಿಕ್ರಂ ಅವರ 10 ಎಂದ್ರತುಕ್ಕುಲ, ಇನ್ನೂ ಹಲವು ಸಿನಿಮಾಗಳನ್ನು ಮಿಲ್ಟನ್ ನಿರ್ದೇಶಿಸಿದ್ದಾರೆ.

ನಾಯಕಿ ಆಯ್ಕೆ ಇನ್ನೂ ಆಗಿಲ್ಲ
ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ಕೃಷ್ಣ ಕಾರ್ತಿಕ್ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಅನುಪ್ ಸಿಳೀನ್ ನೀಡಲಿದ್ದಾರೆ. ಸಿನಿಮಾಕ್ಕೆ ನಾಯಕಿ ಆಯ್ಕೆ ಇನ್ನೂ ಆಗಿಲ್ಲ. ಸಿನಿಮಾ 2021 ರಲ್ಲಿ ತೆರೆಗೆ ಬರಲಿದೆ.


Click it and Unblock the Notifications











