Dhananjay birthday: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟ ರಾಕ್ಷಸ ಡಾಲಿ ಧನಂಜಯ್!

ಚಂದನವನದ ನಟ ರಾಕ್ಷಸ ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟ, ಖಳನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಧನಂಜಯ್ ಇತರ ಭಾಷೆಗಳಲ್ಲಿಯೂ ನಟರಾಗಿ ಖ್ಯಾತಿ ಗಳಿಸಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಡಾಲಿ ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನಟ ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಕೊರೊನಾ, ನೆರೆ, ಅಪ್ಪು ನಿಧನ ಎಲ್ಲವೂ ಸೇರಿ ಈ ಸಂಭ್ರಮವನ್ನು ಮರೆಮಾಡಿದ್ದವು. ಈ ಬಾರಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಎಲ್ಲರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ವಿಶೇಷ ದಿನದಂದು ಅಭಿಮಾನಿಗಳ ಜೊತೆಗೆ ಸಮಯ ಕಳೆಯಲು ನಿರ್ಧಾರ ಮಾಡಿದ್ದಾರೆ.

Dhananjay welcomes fans to his birthday celebration in bengaluru

ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ

'ಕಾಮನ್ ಮ್ಯಾನ್ ಹೀರೋ' ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23ರಂದು ಇದೆ. ಆದರೆ ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಕಾಯುವಿಕೆ ಕೊನೆಯಾಗುತ್ತಿದ್ದು, ಡಾಲಿ ಅಭಿಮಾನಿಗಳು ಜಾತ್ರೆ ಮಾಡಲು ತಯಾರಾಗಿದ್ದಾರೆ.

ವಿಡಿಯೋ ಬಿಡುಗಡೆ ಮಾಡಿದ ಧನಂಜಯ್

ತಮ್ಮ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ತಾನು ಯಾವ ಸಮಯದಲ್ಲಿ ಯಾವ ಯಾವ ಸ್ಥಳಗಳಲ್ಲಿ ಅಭಿಮಾನಿಗಳ ಜೊತೆಗೆ ಇರುತ್ತೇನೆ ಎಂದು ನಟ ಧನಂಜಯ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಭಾನುವಾರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಅಭಿಮಾನಿಗಳು ಕೇಕ್, ಹಾರಗಳನ್ನು ತರುವುದನ್ನು ಬಿಟ್ಟು ಬಂದು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದ್ದಾರೆ.

Dhananjay welcomes fans to his birthday celebration in bengaluru

"ಹಾಯ್...ಎಲ್ಲರಿಗೂ ನಮಸ್ಕಾರ...ಅಭಿಮಾನಿ ದೊರೆಗಳಿಗೆ ನಮಸ್ಕಾರ. ಹುಟ್ಟುಹಬ್ಬ.... ಪ್ರತಿ ವರ್ಷ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತಿದ್ವಿ. 2018 ರಲ್ಲಿ ಶಾಲಿನಿ ಗ್ರೌಂಡ್ಸ್‌ನಲ್ಲಿ ಕೊನೆಯ ಬಾರಿ ಆಚರಣೆ ಮಾಡಿದ್ದು, ತುಂಬಾ ಜನ ಸೇರಿದ್ವಿ ಕೊಡಗು ಪ್ರವಾಹಕ್ಕೆ ಫಂಡ್ಸ್ ಕಲೆಕ್ಟ್ ಮಾಡಿದ್ವಿ. ಆದಾದ ಮೇಲೆ ನಾನಾ ಕಾರಣಕ್ಕೆ ನಿಮ್ಮ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಆಗಿಲ್ಲ. ಆದರೆ, ಈ ಬಾರಿ ನಾನು ಬೆಂಗಳೂರಿನಲ್ಲೇ ಇರ್ತಿನಿ. ಆದರೆ, ಮನೆಯಲ್ಲಿ ಇರಲ್ಲ. ಯಾರು ಮನೆಯ ಹತ್ತಿರ ಬರಬೇಡಿ" ಎಂದಿದ್ದಾರೆ.

ಮುಂದುವರಿದು, " ಮಂಗಳವಾರ ಸಂಜೆ (ಆಗಸ್ಟ್ 22) ಸಂಜೆ 5.30 ಸಂತೋಷ್ ಥೀಯೇಟರ್‌ನಲ್ಲಿ ಉತ್ತರಖಾಂಡ ಟೀಸರ್ ರೀಲಿಸ್ ಆಗ್ತಿದೆ. ಅಲ್ಲಿ ನಾನು ನಿಮಗೆ ಸಿಗ್ತಿನಿ. ಆದಾದ ಮೇಲೆ ಹೊಸಕೆರೆಹಳ್ಳಿ ಬಳಿಕ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ರಾತ್ರಿ 11 ರಿಂದ ಮತ್ತೆ ನಿಮಗೆ ಕೇಕ್ ಕಟ್ ಮಾಡೊಕೆ ಸಿಕ್ತಿನಿ. ನಂತರ ಬೇರೆ ಊರುಗಳಿಂದ ಬರುವವರಿಗೋಸ್ಕರ ಮತ್ತೆ 23 ತಾರೀಕು ನನ್ನ ಹುಟ್ಟು ಹಬ್ಬದ ದಿನ ಬೆಳಗ್ಗೆ 11 ರಿಂದ 1 ಗಂಟೆವರೆಗೂ ಅದೇ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಸಿಕ್ತಿನಿ. ಯಾರು ಯಾರು ಬರಬೇಕು ಅಂದುಕೊಂಡಿದ್ದಿರೋ ಈ ಜಾಗಕ್ಕೆ ಬನ್ನಿ. ಇಲ್ಲಿ ಎಲ್ಲರೂ ಭೇಟಿಯಾಗೋಣ. ಪ್ರತೊ ವರ್ಷ ಹೇಳುವಂತೆ ಕೇಕ್, ಹಾರಗಳನ್ನು ತರಬೇಡಿ. ಸುಮ್ಮನೆ ಬನ್ನಿ ಹಬ್ಬ ಆಚರಿಸೋಣ" ಎಂದು ಧನಂಜಯ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಬಾರಿ ನಟ ಧನಂಜಯ್ ಸಿನಿರಂಗಕ್ಕೆ ಬಂದು ಹತ್ತು ವರ್ಷಗಳು ಪೂರ್ಣಗೊಂಡಿವೆ. ಹಾಗಾಗಿ ಈ ಹುಟ್ಟುಹಬ್ಬ ಕೂಡ ತುಂಬಾ ವಿಶೇಷ. ಅಭಿಮಾನಿಗಳು ಇದನ್ನು ಕೂಡ ಸಂಭ್ರಮಿಸಲಿದ್ದಾರೆ. ದೂರ ಊರುಗಳಿಂದ ಅಭಿಮಾನಿಗಳು ಬರುವ ಕಾರಣದಿಂದ ಊಟದ ವ್ಯವಸ್ಥೆ ಕೂಡ ಇರಲಿದೆ ಎನ್ನಲಾಗಿದೆ.

More from Filmibeat

English summary
Dhananjay welcomes fans to his birthday celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X