ಆರು ಭಾಷೆಯಲ್ಲಿ ಬರಲಿದೆ ಧನಂಜಯ್-ಅಗ್ನಿ ಶ್ರೀಧರ್ 'ಹೆಡ್ ಬುಷ್'
ಡಾಲಿ ಧನಂಜಯ್ ಮತ್ತು ಅಗ್ನಿ ಶ್ರೀಧರ್ ಜೋಡಿಯಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ ಹೆಡ್ ಬುಷ್ ಎಂದು ಹೆಸರಿಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ದಿನದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ.
Recommended Video
ಹೆಡ್ ಬುಷ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಪವರ್ ಸ್ಟಾರ್, ಧನಂಜಯ್ ಮತ್ತು ಅಗ್ನಿ ಶ್ರೀಧರ್ ತಂಡಕ್ಕೆ ಶುಭ ಕೋರಿದ್ದಾರೆ.
ಅಂದ್ಹಾಗೆ, ಈ ಚಿತ್ರದ ಮಾಜಿ ಡಾನ್ ಎಂಪಿ ಜಯರಾಜ್ ಅವರ ಆಧಾರಿತ ಕಥೆ. ಧನಂಜಯ್ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಅವರ 'ದಾದಾಗಿರಿ ದಿನಗಳು' ಪುಸ್ತಕ ಆಧರಿತವಾಗಿ ಸಿದ್ಧವಾಗುತ್ತಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರೇ ರಚಿಸಲಿದ್ದಾರೆ.

ಅಶುಬೇದ್ರ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನವ ನಿರ್ದೇಶಕ ಶೂನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾ ಆರು ಭಾಷೆಯಲ್ಲಿ ಬರಲಿದೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಮಲಯಾಳಂ ಹಾಗು ಹಿಂದಿಯಲ್ಲಿ ಹೆಡ್ ಬುಷ್ ಬರಲಿದೆ.
ಫೆಬ್ರವರಿ ತಿಂಗಳಲ್ಲಿ ಸಿನಿಮಾ ಶುರುವಾಗಿತ್ತು. ಆದ್ರೆ, ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಆರಂಭವಾಗಿರಲಿಲ್ಲ. ಈ ನಡುವೆ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಶೂಟಿಂಗ್‌ಗೆ ಸಜ್ಜಾಗಿದೆ.


Click it and Unblock the Notifications











