For Quick Alerts
  ALLOW NOTIFICATIONS  
  For Daily Alerts

  ಆರು ಭಾಷೆಯಲ್ಲಿ ಬರಲಿದೆ ಧನಂಜಯ್-ಅಗ್ನಿ ಶ್ರೀಧರ್ 'ಹೆಡ್ ಬುಷ್'

  |

  ಡಾಲಿ ಧನಂಜಯ್ ಮತ್ತು ಅಗ್ನಿ ಶ್ರೀಧರ್ ಜೋಡಿಯಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ ಹೆಡ್ ಬುಷ್ ಎಂದು ಹೆಸರಿಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ದಿನದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ.

  Superstar ಚಿತ್ರದ ನಾಯಕ Niranjan , ಚಿಕ್ಕಪ್ಪ Upendraಗೆ ಧನ್ಯವಾದ ತಿಳಿಸಿದ್ದು ಹೀಗೆ | Filmibeat Kannada

  ಹೆಡ್ ಬುಷ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಪವರ್ ಸ್ಟಾರ್, ಧನಂಜಯ್ ಮತ್ತು ಅಗ್ನಿ ಶ್ರೀಧರ್ ತಂಡಕ್ಕೆ ಶುಭ ಕೋರಿದ್ದಾರೆ.

  'ಡಾನ್ ಜಯರಾಜ್'ಗೆ ಪವರ್ ಹೆಚ್ಚಿಸಲಿದ್ದಾರೆ ಪುನೀತ್ ರಾಜ್ ಕುಮಾರ್'ಡಾನ್ ಜಯರಾಜ್'ಗೆ ಪವರ್ ಹೆಚ್ಚಿಸಲಿದ್ದಾರೆ ಪುನೀತ್ ರಾಜ್ ಕುಮಾರ್

  ಅಂದ್ಹಾಗೆ, ಈ ಚಿತ್ರದ ಮಾಜಿ ಡಾನ್ ಎಂಪಿ ಜಯರಾಜ್ ಅವರ ಆಧಾರಿತ ಕಥೆ. ಧನಂಜಯ್ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಅವರ 'ದಾದಾಗಿರಿ ದಿನಗಳು' ಪುಸ್ತಕ ಆಧರಿತವಾಗಿ ಸಿದ್ಧವಾಗುತ್ತಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರೇ ರಚಿಸಲಿದ್ದಾರೆ.

  ಅಶುಬೇದ್ರ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನವ ನಿರ್ದೇಶಕ ಶೂನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾ ಆರು ಭಾಷೆಯಲ್ಲಿ ಬರಲಿದೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಮಲಯಾಳಂ ಹಾಗು ಹಿಂದಿಯಲ್ಲಿ ಹೆಡ್ ಬುಷ್ ಬರಲಿದೆ.

  ಫೆಬ್ರವರಿ ತಿಂಗಳಲ್ಲಿ ಸಿನಿಮಾ ಶುರುವಾಗಿತ್ತು. ಆದ್ರೆ, ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಆರಂಭವಾಗಿರಲಿಲ್ಲ. ಈ ನಡುವೆ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಶೂಟಿಂಗ್‌ಗೆ ಸಜ್ಜಾಗಿದೆ.

  English summary
  Kannada actor Dhananjaya and Agni Sridhar's new movie is Head Bush, Dhananjaya playing underworld don MP Jayaraj role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X