For Quick Alerts
  ALLOW NOTIFICATIONS  
  For Daily Alerts

  ರೆಬಾ ಮೋನಿಕಾ ಜೊತೆ ಕಾಶ್ಮೀರದಲ್ಲಿ ಡಾಲಿ ಧನಂಜಯ!

  |

  ಸ್ಯಾಂಡಲ್ ವುಡ್ ನ ಡಾಲಿ ಧನಂಜಯ ಸದ್ಯ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಧನಂಜಯ ನಟಿ ರೆಬಾ ಮೋನಿಕಾ ಜೊತೆ ಕಶ್ಮೀರದಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಧನಂಜಯ ಕಾಶ್ಮೀರ ಪ್ರವಾಸದಲ್ಲಿದ್ದಾರಾ ಅಂತ ಯೋಚಿಸುತ್ತೀರಾ?

  ರೆಬಾ ಮೋನಿಕಾ, ಡಾಲಿ ಕಾಶ್ಮೀರದ ಫೋಟೊ ವೈರಲ್ | Filmibeat Kannada

  ಧನಂಜಯ ಕಾಶ್ಮೀರ ಪ್ರವಾಸಕ್ಕೆ ಹೋಗಿರುವುದು ನಿಜ. ಆದರೆ ಚಿತ್ರೀಕರಣಕ್ಕಾಗಿ. ಹೌದು, ಡಾಲಿ ಸದ್ಯ ರತ್ನನ್ ಪ್ರಪಂಚ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ ಹಿಮ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದ ನಾಯಕಿ ರೆಬಾ ಮೋನಿಕಾ ಜೊತೆ ಧನಂಜಯ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಟ ಧನಂಜಯ್ ಪಾತ್ರ ಬಹಿರಂಗ'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಟ ಧನಂಜಯ್ ಪಾತ್ರ ಬಹಿರಂಗ

  ಅಂದಹಾಗೆ 'ರತ್ನನ್ ಪ್ರಪಂಚ' ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ರತ್ನನ್ ಪ್ರಪಂಚ ಸಿನಿಮಾ ನಿರ್ದೇಶಕ ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿಬರುತ್ತಿದೆ.

  ಮಲಯಾಳಂ ಮತ್ತು ತಮಿಳು ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ನಟಿ ರೆಬಾ ಮೋನಿಕಾ ಇದೀಗ ಕನ್ನಡ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಮೊದಲ ಬಾರಿಗೆ ನಟ ಧನಂಜಯಗೆ ಜೋಡಿಯಾಗಿದ್ದು, ಕನ್ನಡ ಪ್ರೇಕ್ಷಕರ ಮುಂದೆ ಬರಲು ಉತ್ಸುಕರಾಗಿದ್ದಾರೆ.

  ಅಂದಹಾಗೆ ಧನಂಜಯ ಚಿತ್ರದಲ್ಲಿ ಮಧ್ಯಮ ವರ್ಗದ ಸಾಮಾನ್ಯ ವ್ಯಕ್ತಿ ರತ್ನಾಕರ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಕೆಲಸ ಮಾಡುವ ಇನ್ಶೂರೆನ್ಸ್ ಏಜೆಂಟ್ ಆಗಿ ತನ್ನ ಕುಟುಂಬ ಸಾಗಿಸುವ ಪಾತ್ರದಲ್ಲಿ ಧನಂಜಯ ಮಿಂಚಿದ್ದಾರೆ. ವಿಶೇಷ ಎಂದರೆ ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ ಧನಂಜಯ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗ್ಯಾಪ್ ನ ಬಳಿಕ ಉಮಾಶ್ರೀ ರತ್ನನ್ ಪ್ರಪಂಚ ಸಿನಿಮಾ ಮೂಲಕ ನಟಿ ಉಮಾಶ್ರೀ ವಾಪಸ್ ಆಗಿದ್ದಾರೆ.

  ಧನಂಜಯ ನಾಯಕ ಮತ್ತು ವಿಲನ್ ಎರಡು ಪಾತ್ರಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಧನಂಜಯ್ ಸಲಗ, ಪೊಗರು, ಯುವರತ್ನ, ಡಾಲಿ, ತೋತಾಪುರಿ, ಬಡವ ರಾಸ್ಕಲ್, ಹೆಡ್ ಬುಷ್, ಶಿವಪ್ಪ ಮತ್ತು ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಇನ್ನೂ ಹೆಸರಿಡದ ಸಾಕಷ್ಟು ಸಿನಿಮಾಗಳು ಧನಂಜಯ್ ಬಳಿ ಇವೆ.

  English summary
  Kannada Actor Dhananjaya and Reba Monica shooting for Ratnan Prapancha in biting cold at Jammu & Kashmir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X