Dhananjay: 'ಗಬ್ರು ಸತ್ಯ' ರಿಲೀಸ್ ಆಗ್ತಿದ್ದಾನೆ ದಾರಿಬಿಡಿ: ಏನಿದು ಡಾಲಿ ಹೊಸ ಅವತಾರ?

ಒಂದ್ಕಡೆ ನಟನೆ ಮತ್ತೊಂದು ಕಡೆ ಸಿನಿಮಾ ನಿರ್ಮಾಣ ಅಂತ ಡಾಲಿ ಧನಂಜಯ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಿನಿಮಾ ಹಾಡುಗಳಿಗೆ ಸಾಹಿತ್ಯವನ್ನು ಕೂಡ ಬರೀತ್ತಿದ್ದಾರೆ. ಒಂದು ತಮಿಳು, 3 ತೆಲುಗು ಸಿನಿಮಾಗಳು ಡಾಲಿ ಕೈಯಲ್ಲಿವೆ. 'ಪುಷ್ಪ'-2 ಚಿತ್ರದಲ್ಲಿ ಮತ್ತೆ ಜಾಲಿ ರೆಡ್ಡಿಯಾಗಿ ಧನು ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ 'ಉತ್ತರಕಾಂಡ' ಸಿನಿಮಾ ಶೂಟಿಂಗ್ ಶುರುವಾಗಬೇಕಿದೆ.

ಬಹಳ ಹಿಂದೆಯೇ ಅನೌನ್ಸ್ ಆಗಿ ಮುಹೂರ್ತ ಕೂಡ ಮುಗಿಸಿದ್ದ 'ಉತ್ತರಕಾಂಡ' ಸಿನಿಮಾ ಬಗ್ಗೆ ಆಮೇಲೆ ಯಾವುದೇ ಸುದ್ದಿ ಇರಲಿಲ್ಲ. ಸಿನಿಮಾ ನಿಂತೇ ಹೋಗುತ್ತೆ? ಚಿತ್ರದಿಂದ ನಾಯಕಿ ರಮ್ಯಾ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಶುರುವಾಗಿತ್ತು. ಆದರೆ ಅದಕ್ಕೆಲ್ಲಾ ಈಗ ಬ್ರೇಕ್ ಬಿದ್ದಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ. 'ಗಬ್ರು ಸತ್ಯ'ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಗಬ್ರು ಸತ್ಯ ಯಾರು ಅಂತ ಕನ್‌ಫ್ಯೂಸ್ ಆಗಬೇಡಿ.

Dhananjaya-as-Gabru-Sathya-in-Uttarakaanda

'ಉತ್ತರಕಾಂಡ' ಚಿತರದಲ್ಲಿ ಡಾಲಿ ಧನಂಜಯ್ ಗಬ್ರು ಸತ್ಯ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಆತನ ಲುಕ್ ರಿವೀಲ್ ಮಾಡುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಈ ಹಿಂದೆ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಡಾಲಿಯ ಉತ್ತರಕಾಂಡ ಲುಕ್ ರಿವೀಲ್ ಆಗಿತ್ತು. ಆದರೆ ಗಬ್ರು ಸತ್ಯ ಆಗಿ ಧನು ಕೊಂಚ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸುಳಿವು ಸಿಗುತ್ತಿದೆ. ಧನಂಜಯ್ ಸಿಗರೇಟ್ ಸೇದುತ್ತಾ ಹಿಂದೆ ತಿರುಗಿ ನಿಂತ ಫೋಟೊ ಹಾಕಿ ಆಗಸ್ಟ್ 22ರ ಸಂಜೆ 5.55ಕ್ಕೆ ಗಬ್ರು ಸತ್ಯ ರಿಲೀಜಿಂಗ್ ಎಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಮುಂದಿನ ಮಂಗಳವಾರ ಸಂಜೆ 'ಉತ್ತರಕಾಂಡ' ಚಿತ್ರದ ಗಬ್ರು ಸತ್ಯನ ದರ್ಶನವಾಗಲಿದೆ. ಹೊಸ ಪೋಸ್ಟರ್ ಬಿಡ್ತಾರಾ? ಅಥವಾ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗುತ್ತಾ? ಕಾದು ನೋಡಬೇಕಿದೆ. ಅಂದಹಾಗೆ ಚಿತ್ರದಿಂದ ರಮ್ಯಾ ಹೊರ ಬಂದಿದ್ದಾರೆ ಎನ್ನುವ ವದಂತಿಗೆ ಬ್ರೇಕ್ ಬಿದ್ದಿದೆ. ಈ ಹಿಂದೆ ಧನಂಜಯ್ ಜೊತೆ 'ರತ್ನನ್ ಪ್ರಪಂಚ' ಸಿನಿಮಾ ಮಾಡಿದ್ದ ರೋಹಿತ್ ಪದಕಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಉತ್ತರಕಾಂಡ' ಚಿತ್ರವನ್ನು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ಧಾರೆ. ಕಳೆದ ವರ್ಷ ನಗರದ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಗಿತ್ತು. ಸಂಪೂರ್ಣವಾಗಿ ಇದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ. ಅಂದಹಾಗೆ 'ರತ್ನನ್ ಪ್ರಪಂಚ' ಚಿತ್ರದಲ್ಲೇ ರಮ್ಯಾ ನಟಿಸಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಆ ಸಿನಿಮಾವನ್ನು ಬಹಳ ಮೆಚ್ಚಿಕೊಂಡಿದ್ದ ರಮ್ಯಾ ತಮ್ಮ ರೀಎಂಟ್ರಿ ಇದೇ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು 'ಉತ್ತರಕಾಂಡ' ಚಿತ್ರದ ವಿಶೇಷ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. ರಮ್ಯಾ ವೀಕೆಂಡ್ ವಿತ್ ರಮೇಶ್ ಶೋಗೆ ಬಂದಿದ್ದ ವೇಳೆ ಈ ವಿಚಾರ ಬಹಿರಂಗವಾಗಿತ್ತು. ಶೋಗೆ ಬಂದಿದ್ದ ನಿರ್ದೇಶಕ ರೋಹಿತ್ ಪದಕಿ ಇದನ್ನು ಹೇಳಿದ್ದರು. ಹಾಗಾಗಿ 'ಟಗರು', 'ಬೈರಾಗಿ' ಬಳಿಕ ಮತ್ತೆ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣ- ಡಾಲಿ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

ಧನಂಜಯ ನಟನೆಯ ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಹೊಸಬರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ 'ಟಗರು ಪಲ್ಯ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ನಾಗಭೂಷಣ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವಾಸುಕಿ ವೈಭವ್ ಟ್ಯೂನ್‌ಗೆ ಸ್ವತಃ ಧನು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಸಾಂಗ್ ಸದ್ದು ಮಾಡ್ತಿದೆ.

More from Filmibeat

English summary
Dhananjaya's Uttarakaanda First Look on 22nd August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X