For Quick Alerts
  ALLOW NOTIFICATIONS  
  For Daily Alerts

  "ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ": ಧನಂಜಯ್ ಹೇಳಿಕೆ ವೈರಲ್!

  |

  ಹುಡುಗರಿಗೆ ವಯಸ್ಸು 30 ವರ್ಷ ಹತ್ತಿರ ಆಗ್ತಿದ್ದಂತೆ ಮದುವೆ ಬಗ್ಗೆ ಚರ್ಚೆ ಶುರುವಾಗುತ್ತೆ. 30 ದಾಟಿ ಬಿಟ್ಟರೆ ಮುಗಿದೇ ಹೋಯ್ತು. ಡಾಲಿ ಧನಂಜಯ್‌ಗೂ ಮದುವೆ ಬಗ್ಗೆ ಸಾಕಷ್ಟು ಬಾರಿ ಪ್ರಶ್ನೆ ಎದುರಾಗಿದೆ. ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ ಎಂದು ಧನು ಹೇಳಿರೋ ವಿಡಿಯೋ ಈಗ ವೈರಲ್ ಆಗಿದೆ.

  ಸಾಲು ಸಾಲು ಸಿನಿಮಾಗಳ ಮೂಲಕ ನಟ ಧನಂಜಯ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀರೊ ಆಗಿ ಮಾತ್ರವಲ್ಲ ಸಪೋರ್ಟಿಂಗ್ ರೋಲ್‌ಗಳಲ್ಲೂ ನಟಿಸಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಧನು ವಯಸ್ಸು 35 ದಾಟಿದೆ. ಹೋದಲ್ಲಿ ಬಂದಲ್ಲಿ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಹಿಂದೆ ಒಮ್ಮೆ ಡಾಲಿ ಮದುವೆ ಬಗ್ಗೆ ತಮಾಷೆಯಾಗಿ ಹೇಳಿದ್ದ ಮಾತುಗಳು ಈಗ ಸದ್ದು ಮಾಡ್ತಿದೆ.

  ಮಾನ್ಸೂನ್ ರಾಗ ಚಿತ್ರದ ಪ್ರೋಮೊ ಸಾಂಗ್ ಔಟ್; ಡಾಲಿ, ರಚಿತಾ ಸ್ಟೆಪ್ ಗೆ ಅಭಿಮಾನಿಗಳು ಫಿದಾಮಾನ್ಸೂನ್ ರಾಗ ಚಿತ್ರದ ಪ್ರೋಮೊ ಸಾಂಗ್ ಔಟ್; ಡಾಲಿ, ರಚಿತಾ ಸ್ಟೆಪ್ ಗೆ ಅಭಿಮಾನಿಗಳು ಫಿದಾ

  ಧನಂಜಯ್ ನಿರ್ಮಿಸಿ, ನಟಿಸಿದ್ದ 'ಬಡವ ರಾಸ್ಕಲ್' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಟಾಲಿವುಡ್‌ನಲ್ಲಿ ಸಿನಿಮಾ ಪ್ರಮೋಷನ್‌ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಧನಂಜಯ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. "ಪ್ರಭಾಸ್ ಸರ್ ಮದುವೆ ಆಗ್ತಿದ್ದಾರಾ? ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ. ಇಲ್ಲ ಅಂದರೆ ಮದುವೆನೇ ಬೇಡ. ಹಾಗೆ ಇದ್ದು ಬಿಡ್ತೀನಿ" ಎಂದು ನಕ್ಕಿದ್ದಾರೆ.

  ಒಂದು ಕಾರಣ ಬೇಕಲ್ವಾ?

  ಒಂದು ಕಾರಣ ಬೇಕಲ್ವಾ?

  ಧನಂಜಯ್ ಮಾತು ಕೇಳಿದ ನಿರೂಪಕಿ "ನೋಡಿದ್ರಾ ಪ್ರಭಾಸ್ ಸರ್, ನೀವು ಮದುವೆ ಆಗಿಲ್ಲ ಅನ್ನುವ ಕಾರಣಕ್ಕೆ ಕನ್ನಡದ ನಟರು ಮದುವೆ ಆಗಿಲ್ಲ" ಎಂದಿದ್ದಾರೆ. ಮಾತು ಮುಂದುವರೆಸಿದ ಧನು "ಒಂದು ಕಾರಣ ಬೇಕು ಅಲ್ವಾ? ನಮ್ಮ ಸ್ನೇಹಿತರು ಇದ್ದಾರೆ. ಅವರು ಮದುವೆ ಆಗಿಲ್ಲ. ಅವರ ಮನೆಯಲ್ಲಿ ಮದುವೆ ಬಗ್ಗೆ ಕೇಳಿದರೆ, ಧನಂಜಯ್ ಮದುವೆ ಆದರೆ ನಾವು ಆಗ್ತೀನಿ ಅಂತಾರೆ. ಅದೇ ತರ ನಾನು ಸಲ್ಮಾನ್ ಖಾನ್, ಪ್ರಭಾಸ್ ಹೆಸರು ತಗೋತ್ತೀನಿ. ಅವರೆಲ್ಲಾ ಇನ್ನು ಮದುವೆ ಆಗಿಲ್ಲ. ಅವರೆಲ್ಲಾ ನನ್ನ ಹಿರಿಯ ಸಹೋದರರು ಅವರು ಮೊದಲು ಮದುವೆ ಆಗಲಿ" ಎಂದಿದ್ದಾರೆ.

  ಡಾಲಿ ಮದುವೆ ಆಗುವ ಹುಡುಗಿ ಹೇಗಿರಬೇಕು?

  ಡಾಲಿ ಮದುವೆ ಆಗುವ ಹುಡುಗಿ ಹೇಗಿರಬೇಕು?

  ಪ್ರಭಾಸ್ ಅಭಿಮಾನಿಗಳು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಇನ್ನು ಮದುವೆ ಆಗುವ ಹುಡುಗಿ ಹೇಗಿರಬೇಕು ಎನ್ನುವ ಪ್ರಶ್ನೆಗೆ ಒಳ್ಳೆ ಹುಡುಗಿಯಾಗಿರಬೇಕು ಎಂದಿದ್ದಾರೆ. ಒಳ್ಳೆ ಹುಡುಗಿ ಅಂದರೆ ಹೇಗೆ? ಅಂದಾಗ "ನಾನು ಆಕೆಯನ್ನು ನೋಡಿದಾಗ ಖುಷಿಯಾಗಬೇಕು" ಅಂತಹ ಹುಡುಗಿ ಎಂದಿದ್ದಾರೆ.

  ಧನು- ಅಮೃತಾ ಮದುವೆ ಆಗ್ತಾರೆ ಅನ್ನಲಾಗಿತ್ತು

  ಧನು- ಅಮೃತಾ ಮದುವೆ ಆಗ್ತಾರೆ ಅನ್ನಲಾಗಿತ್ತು

  'ಬಡವ ರಾಸ್ಕಲ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ಮದುವೆ ಆಗ್ತಾರೆ ಅನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಕಾರ್ಯಕ್ರಮವೊಂದರಲ್ಲಿ ಧನಂಜಯ್, ಅಮೃತಾಗೆ ಪ್ರಪೋಸ್ ಮಾಡಿ ತೋರಿಸಿದ್ದೇ ಅದಕ್ಕೆಲ್ಲಾ ಕಾರಣ. ಆದರೆ ಅದೆಲ್ಲಾ ಬರೀ ಗಾಸಿಪ್ ನಾವು ಒಳ್ಳೆ ಫ್ರೆಂಡ್ಸ್ ಅಷ್ಟೇ ಎಂದು ಇಬ್ಬರೂ ಸ್ಪಷ್ಟನೆ ನೀಡಿದ್ದರು. ಸದ್ಯ ಈ ಜೋಡಿ 'ಹೊಯ್ಸಳ' ಚಿತ್ರದಲ್ಲೂ ಒಟ್ಟಿಗೆ ನಟಿಸ್ತಿದೆ.

  'ಮಾನ್ಸೂನ್ ರಾಗ' ಈ ವಾರ ರಿಲೀಸ್

  'ಮಾನ್ಸೂನ್ ರಾಗ' ಈ ವಾರ ರಿಲೀಸ್

  ತೋತಾಪುರಿ, ಹೆಡ್‌ಬುಷ್, ಮಾನ್ಸೂನ್ ರಾಗ, ಜಮಾಲಿಗುಡ್ಡ ಹೀಗೆ ಸಾಲು ಸಾಲಾಗಿ ಧನಂಜಯ್ ನಟನೆಯ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಈ ವಾರವೇ ಮಾನ್ಸೂನ್ ರಾಗ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ಧನಂಜಯ್ ಜೊತೆ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ.

  English summary
  Dhananjaya Funny Reply about his Marriage Old Video Goes Viral. Dhananjaya Shocks Anchor With His Answer About Marriage.
  Wednesday, September 14, 2022, 10:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X