For Quick Alerts
  ALLOW NOTIFICATIONS  
  For Daily Alerts

  KGR ಸ್ಟುಡಿಯೋ ಜೊತೆ ಡಾಲಿ 'ಉತ್ತರಕಾಂಡ': ಖಡಕ್ ಪೋಸ್ಟರ್ ನೋಡಿ ಥ್ರಿಲ್ಲಾದ ರಮ್ಯಾ!

  |

  ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಅಪ್ಪು ಅಗಲಿಕೆಯ ನೋವಿನ ಹಿನ್ನಲೆಯಲ್ಲಿ ಧನು ಅದ್ಧೂರಿ ಹುಟ್ಟುಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಸದ್ಯ ನಟ ರಾಕ್ಷಸನ ಕೈಯಲ್ಲಿ ಆರೇಳು ಸಿನಿಮಾಗಳಿವೆ. ಹುಟ್ಟುಹಬ್ಬ ಸಂಭ್ರಮದಲ್ಲೇ 'ಉತ್ತರಕಾಂಡ' ಅನ್ನುವ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಕಿಕ್ ಕೊಡ್ತಿದೆ.

  ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ 'ಉತ್ತರಕಾಂಡ' ಸಿನಿಮಾ ನಿರ್ಮಾಣವಾಗಲಿದೆ. ಕಳೆದ ವರ್ಷವೇ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಯಾರು ಹೀರೊ ಆಗಿ ನಟಿಸ್ತಾರೆ ಅನ್ನುವುದು ಪಕ್ಕಾ ಆಗಿರಲಿಲ್ಲ. ಡಾಲಿ ಬರ್ತ್‌ಡೇಗೆ ಸಿನಿಮಾ ಘೋಷಿಸಿ ಕೆಆರ್‌ಜಿ ಬ್ಯಾನರ್ ಸರ್‌ಪ್ರೈಸ್‌ ಕೊಟ್ಟಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಉತ್ತರದ ದರೋಡೆಕೋರರ ಕಥೆ ಹೇಳಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು. ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಕೆಆರ್‌ಜಿ ಸಂಸ್ಥೆಯ 'ಹೊಯ್ಸಳ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹಾಗಾಗಿ 'ಉತ್ತರಕಾಂಡ' ಸಿನಿಮಾ ತಡವಾಗುತ್ತಿದೆ.

  'ರೌಡಿಗಳು ನಾವು ರೌಡಿಗಳು' ಎಂದು ಹಾಡಿದ ಜಯರಾಜು-ಗಂಗ: ಹಾಡು ಕೇಳಿದವರು ಏನಂದ್ರು?'ರೌಡಿಗಳು ನಾವು ರೌಡಿಗಳು' ಎಂದು ಹಾಡಿದ ಜಯರಾಜು-ಗಂಗ: ಹಾಡು ಕೇಳಿದವರು ಏನಂದ್ರು?

  ಧನಂಜಯ್‌, ರೋಹಿತ್ ಪದಕಿ ಹಾಗೂ ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ರತ್ನನ್ ಪ್ರಪಂಚ' ಸಿನಿಮಾ ಸಕ್ಸಸ್ ಕಂಡಿತ್ತು. ನೇರವಾಗಿ ಓಟಿಟಿಗೆ ಬಂದಿದ್ದ ಸಿನಿಮಾ ವೀಕ್ಷಕರನ್ನು ರಂಜಿಸಿತ್ತು. ಚಿತ್ರದಲ್ಲಿ ರತ್ನಾಕರನ ಪಾತ್ರದಲ್ಲಿ ಡಾಲಿ ಧನಂಜಯ್‌ ಅಭಿನಯ ಪ್ರೇಕ್ಷಕರವಾಗಿ ಆಪ್ತ ಎನ್ನಿಸಿತ್ತು. ರೆಗ್ಯುಲರ್ ರಗಡ್ ಶೇಡ್ ಬಿಟ್ಟು ಮಧ್ಯಮ ವರ್ಗದ ಕುಟುಂಬದ ಯುವಕನಾಗಿ ಧನು ಕಾಣಿಸಿಕೊಂಡಿದ್ದರು. ಅಲ್ಲಿಯವರೆಗೂ ಧನಂಜಯ್ ಲವರ್ ಬಾಯ್ ಹಾಗೂ ರಗಡ್‌ ಪಾತ್ರಗಳಲ್ಲೇ ನಟಿಸಿದ್ದೇ ಹೆಚ್ಚು. ಮುಗ್ಧ ರತ್ನಾಕರನಾಗಿ ನೋಡಿದವರು ಬೆರಗಾಗಿದ್ದರು. ತಾಯಿ ಸೆಂಟಿಮೆಂಟ್ ಕಥೆ ಆಗಿದ್ದರೂ ರತ್ನಾಕರನ ಭಾವನಾತ್ಮಕ ಪ್ರಯಾಣ ಎಲ್ಲರ ಮನಮುಟ್ಟಿತ್ತು. 'ರತ್ನನ್ ಪ್ರಪಂಚ'ದಲ್ಲಿ ಡಾಲಿನ ಮುಗ್ಧ ರತ್ನಾಕರನಾಗಿ ತೋರಿಸಿದ್ದ ರೋಹಿತ್ ಪದಕಿ 'ಉತ್ತರಕಾಂಡ' ಚಿತ್ರದಲ್ಲಿ ಸಿಕ್ಕಾಪಟ್ಟೆ ಖಡಕ್‌ ರೋಲ್‌ನಲ್ಲಿ ತೋರಿಸೋಕೆ ಹೊರಟಿದ್ದಾರೆ.

  Dhananjaya Hat Trick Movie with KRG Studios Uttarakanda Ramya Shared Poster

  'ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ' ಅನ್ನುವ ಟ್ಯಾಗ್‌ಲೈನ್ ಕೊಟ್ಟು 'ಉತ್ತರಕಾಂಡ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಡೆದ ಸನ್‌ಗ್ಲಾಸ್, ಒಮ್ಮೆಲೆ ಬೀಡಿ ಹಾಗೂ ಸಿಗಾರ್ ಸೇದುತ್ತಾ ರಕ್ತಸಿಕ್ತ ಮುಖದಲ್ಲಿ ಧನಂಜಯ್‌ನ ತೋರಿಸಲಾಗಿದೆ. ಉದ್ದನೆಯ ಗಡ್ಡ ಬಿಟ್ಟು ಸಿಕ್ಕಾಪಟ್ಟೆ ಡಾಲಿ ರಗಡ್‌ ಲುಕ್‌ನಲ್ಲಿರುವ 'ಉತ್ತರಕಾಂಡ' ಪೋಸ್ಟರ್ ವೈರಲ್ ಆಗಿದೆ. ಪೋಸ್ಟರ್‌ ನೋಡಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಮೆಚ್ಚುಗೆ ಸೂಚಿಸಿದ್ದು, ಶೇರ್ ಮಾಡಿದ್ದಾರೆ. ಈ ಹಿಂದೆ ಧನು ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನೋಡಿ ರಮ್ಯಾ ಕೊಂಡಾಡಿದ್ದರು. ಇತ್ತೀಚೆಗೆ ಧನಂಜಯ್ ನಟನೆಯ 'ಹೊಯ್ಸಳ' ಸಿನಿಮಾ ಸೆಟ್‌ಗೂ ಭೇಟಿ ಕೊಟ್ಟಿದ್ದರು. ಇನ್ನು ಧನು- ರೋಹಿತ್ ಪದಕಿ ಜೋಡಿಯ 'ಉತ್ತರಕಾಂಡ' ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

  English summary
  Dhananjaya Hat Trick Movie with KRG Studios Uttarakanda Ramya Shared Poster. Know More.
  Tuesday, August 23, 2022, 17:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X